ಅಸ್ಪೃಶ್ಯತೆಗೆ ಸನಾತನ ಧರ್ಮ ಕಾರಣನಾ ? ಎಲ್ಲರೂ ವೇದ- ಸಂಸ್ಕೃತಗಳನ್ನು ಯಾಕೆ ಕಲೀಬೇಕು?
ಅಸ್ಪೃಶ್ಯತೆಗೆ ಕಾರಣವಾಗಿರುವ ಸನಾತನ ಧರ್ಮ ಯಾಕೆ ನಿರ್ಮೂಲನ ಆಗಬಾರದು? ಸನಾತನ ಧರ್ಮ ಅಂದ್ರೆ ಇದೆನಾ? ರಾಮಕೃಷ್ಣ ಆಶ್ರಮದ ನಿರ್ಭಯಾನಂದ ಸ್ವಾಮೀಜಿ ಈ ಬಗ್ಗೆ ಹೇಳಿದ್ದಿಷ್ಟು.
ರಾಮಕೃಷ್ಣ ಆಶ್ರಮದ ನಿರ್ಭಯಾನಂದ ಸ್ವಾಮೀಜಿ(Nirbhayananda Swamiji) ಏಷ್ಯಾನೆಟ್ ಸುವರ್ಣ ನ್ಯೂಸ್‌ನ ನ್ಯೂಸ್ ಅವರ್ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಇಲ್ಲಿ ಅವರು ಸನಾತನ ಧರ್ಮ, ಅಸ್ಪೃಶ್ಯತೆ(Untouchability), ಜಾತಿ ಪದ್ಧತಿ(Caste system) ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ನಿರ್ಭಯಾನಂದ ಸ್ವಾಮೀಜಿ ಜಾತಿ ಪದ್ಧತಿಯನ್ನು ಖಂಡಿಸಿದ್ದು, ಅದನ್ನು ಆಚರಿಸುವುದಾದ್ರೆ ನೀವು ಏಕತೆಯನ್ನು ಬಯಸಬೇಡಿ ಎಂದು ಹೇಳಿದ್ದಾರೆ. ಅಲ್ಲದೇ ಈ ಪದ್ಧತಿ ತುಂಬಾ ತಪ್ಪು ಎಂದು ಅವರು ಹೇಳಿದರು. ಅಲ್ಲದೇ ಅವರು ನಡೆಸುವ ಶಾಲೆಯಲ್ಲಿ ಎಲ್ಲಾರಿಗೂ ವೇದವನ್ನು ಹೇಳಿಕೊಡಲಾಗುತ್ತದೆ. ಯಾವ ಜಾತಿಯವನೂ ಬೇಕಾದ್ರೂ ರಾಮಕೃಷ್ಣ ಆಶ್ರಮದ ಮುಖ್ಯಸ್ಥನಾಗಬಹುದು. ನಮ್ಮಲ್ಲಿ ಮುಸಲ್ಮಾನ- ಕ್ರೈಸ್ತ ಸನ್ಯಾಸಿಗಳಿದ್ದಾರೆ ಎಂದು ನಿರ್ಭಯಾನಂದ ಸ್ವಾಮೀಜಿ ಹೇಳಿದ್ದಾರೆ. ಇದೇ ವೇಳೆ ರಾಮಕೃಷ್ಣ ಆಶ್ರಮದ ನಿರ್ಭಯಾನಂದ ಸ್ವಾಮೀಜಿ ನಾಗರೀಕತೆ ಬಗ್ಗೆ ಮಾತನಾಡಿ, ನಮ್ಮೇಲೆ ನಡೆದಷ್ಟು ದಬ್ಬಾಳಿಕೆ 1% ಯಾರ ಮೇಲೂ ನಡೆದಿಲ್ಲ ಎಂದು ಹೇಳಿದರು.
ಇದನ್ನೂ ವೀಕ್ಷಿಸಿ: ಧರ್ಮ, ಸಂಸ್ಕೃತಿ, ಆಚರಣೆ ವಿರೋಧ ಪ್ರಚಾರಕ್ಕಾ? ಸನಾತನ ಧರ್ಮ ನಾಶ ಹೇಳಿಕೆ ಬೆಂಬಲಿಸ್ತಾರಾ ಭಗವಾನ್..?