ಬ್ರಿಜ್ ಭೂಷಣ್ VS ಕುಸ್ತಿಪಟುಗಳು ಏನಿದು ಕತೆ..? : ಚಾಂಪಿಯನ್ಸ್ ಕಣ್ಣೀರಿನ ಹಿಂದಿರೋ ಕತೆ ಏನು..?
ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ವಿರುದ್ಧ ಕುಸ್ತಿ ಪಟುಗಳು ಹೋರಾಟ ಮಾಡುತ್ತಿದ್ದಾರೆ. ಈ ಹೋರಾಟ 100 ದಿನಕ್ಕೆ ಕಾಲಿಟ್ಟಿದ್ದು, ಇನ್ನೂ ವಿವಾದ ಮಾತ್ರ ಬಗೆಹರಿದಿಲ್ಲ.
ಅವತ್ತು ದೇಶಕ್ಕೆ ಚಿನ್ನದ ಪದಕ ತಂದವರು, ಇವತ್ತು ಬೀದಿಯಲ್ಲಿ ಬಿಕ್ಕಳಿಸಿ ಅಳ್ತಾ ಇದಾರೆ. ಆ ಕಣ್ಣೀರಿನ ಹಿಂದಿರೋ ಕತೆ ಏನು ಗೊತ್ತಾ? ಅದ್ಯಾಕಾಗಿ ಈ ಕುಸ್ತಿಪಟುಗಳ ಬಿಗಿ ಪಟ್ಟು ಹಿಡಿದಿದ್ದಾರೆ..? ಇವರ ವಿರುದ್ಧ ಬ್ರಿಜ್ ಭೂಷಣ್ ಅನ್ನೋರು ಅದೇನೋ ಗುಟ್ಟು ಬಿಚ್ಚಿಡ್ತೀನಿ ಅಂತಿದ್ದಾರಲ್ಲಾ, ಅದೇನು..? ಇದೆಲ್ಲದರ ಅಸಲಿ ಸತ್ಯವೇನು..? ಒಂದು ವೇಳೆ ಈ ಉಗ್ರ ಹೋರಾಟ ನಿಲ್ಲದೇ ಹೋದ್ರೆ.. ಭಾರತಕ್ಕೆ ಕುಸ್ತಿ ಪಂದ್ಯವಾಡೋಕೆ ಅಂತಾರಾಷ್ಟ್ರೀಯ ಕುಸ್ತಿ ವೇದಿಕೆಯೇ ಇರಲ್ಲ ಎಂಬ ಸುದ್ದಿ ಹರಡುತ್ತಿದೆ. ಅಲ್ಲದೇ ಸಾಕ್ಷಿ ಮಲಿಕ್ ತಾನು ಗೆದ್ದಿದ್ದ ಕಂಚಿನ ಪದಕವನ್ನ ಗಂಗೆಲಿ ಮುಳುಗಿಸೋಕೆ ಹೊರಟಾಗ, ಆಕೆ ಜೊತೆಗೆ, ಕಾಮನ್‌ವೆಲ್ತ್ ಮತ್ತು ಏಷ್ಯನ್ ಗೇಮ್ಸ್ ಎರಡರಲ್ಲೂ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಕೂಡ ಇದ್ರು.
ಇದನ್ನೂ ವೀಕ್ಷಿಸಿ: "ಲೋಕ"ಯುದ್ಧದ ಅಖಾಡದಲ್ಲಿ ಕೈ ಚಾಣಕ್ಯನ ನಿಗೂಢ ಹೆಜ್ಜೆ: ಉತ್ತರ ಗೆಲ್ಲಲು “ಕನಕ”ವ್ಯೂಹ.. ಏನಿದು ಡಿಕೆ ಖೆಡ್ಡಾ ?