"ಲೋಕ"ಯುದ್ಧದ ಅಖಾಡದಲ್ಲಿ ಕೈ ಚಾಣಕ್ಯನ ನಿಗೂಢ ಹೆಜ್ಜೆ: ಉತ್ತರ ಗೆಲ್ಲಲು “ಕನಕ”ವ್ಯೂಹ.. ಏನಿದು ಡಿಕೆ ಖೆಡ್ಡಾ ?

ಲಕ್ಷ್ಮಣ ಸವದಿ ಮತ್ತು ಜಗದೀಶ್‌ ಶೆಟ್ಟರ್‌ ಅವರನ್ನು ಡಿ.ಕೆ. ಶಿವಕುಮಾರ್‌ ಭೇಟಿ ಮಾಡಿದ್ದಾರೆ. ಡಿಕೆ ಶಿವಕುಮಾರ್, ಸಚಿವರಾದ ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಜೊತೆ ತಡರಾತ್ರಿಯೇ ಸವದಿ ಮನೆಗೆ ತೆರಳಿ, ಅವರನ್ನು ಭೇಟಿ ಮಾಡಿದ್ದಾರೆ. 

Share this Video
  • FB
  • Linkdin
  • Whatsapp

ಇದು ದಕ್ಷಿಣಾಪಥೇಶ್ವರನ ಉತ್ತರ ವ್ಯೂಹ. ಮಹಾಭಾರತ ಯುದ್ಧ ಗೆಲ್ಲಲು ಕಾಂಗ್ರೆಸ್ ಕಟ್ಟಪ್ಪ ಹೆಣೆದ ಕನಕವ್ಯೂಹದ ರೋಚಕ ಸ್ಟೋರಿ. ವಿಧಾನಸಭಾ ಚುನಾವಣೆಯ ಪ್ರಚಂಡ ದಿಗ್ವಿಜಯದ ನಂತರ ಡಿಸಿಎಂ ಡಿಕೆಶಿ, ಲೋಕ ಶಿಕಾರಿ ಶುರು ಮಾಡಿದ್ದಾರೆ. ಆ ಶಿಕಾರಿಯ ಮೊದಲ ಅಧ್ಯಾಯವೇ ಉತ್ತರದಲ್ಲಿ ರೆಡಿಯಾಗಿರೋ ಖೆಡ್ಡಾ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಜೊತೆ ಡಿಕೆ ಶಿವಕುಮಾರ್. ಕುಂದಾನಗರಿಯ ಹಳೇ ಪೈಲ್ವಾನ್ ಲಕ್ಷ್ಮಣ ಸವದಿ ಜೊತೆ ಕನಕಪುರ ಬಂಡೆ. 8 ಗಂಟೆಗಳ ಅಂತರದಲ್ಲಿ ಉತ್ತರ ಕರ್ನಾಟಕದ ಇಬ್ಬರು ಲಿಂಗಾಯತ ಲೀಡರ್‌ಗಳ ಜೊತೆ ಡಿಕೆಶಿ ಮೀಟಿಂಗ್ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾದ್ಮೇಲೆ ಕಾಂಗ್ರೆಸ್ ಕಾರ್ಯಕರ್ತರನ್ನು ಬಡಿದೆಬ್ಬಿಸಿ, ಅವ್ರಲ್ಲಿ ಹೋರಾಟದ ಕೆಚ್ಚು ತುಂಬಿ ಕೈ ಸರ್ಕಾರವನ್ನು ಅಧಿಕಾರಕ್ಕೆ ತಂದಿರೋ ಕನಕಪುರ ಬಂಡೆ, ಲೋಕಸಭಾ ಚುನಾವಣೆಗೆ ಸಿದ್ಧತೆ ಶುರು ಮಾಡಿದ್ದಾರೆ. 

ಇದನ್ನೂ ವೀಕ್ಷಿಸಿ: ಇಂದಿನ ರಾಶಿ ಭವಿಷ್ಯ: ಈ ದಿನ ನಿಮ್ಮ ಅಮೂಲ್ಯ ವಸ್ತುಗಳ ಬಗ್ಗೆ ಜಾಗ್ರತೆ ವಹಿಸಿ, ನರಸಿಂಹ ಸ್ವಾಮಿ ಪ್ರಾರ್ಥನೆ ಮಾಡಿ

Related Video