ಇಂಡಿಯನ್ ಕಿಚನ್‌ನಲ್ಲಿ ಗ್ರೇಟ್ ಆಯುರ್ವೇದ ಅಡಗಿದೆ: ಡಾ.ಸಿ.ಎ. ಕಿಶೋರ್
ಆಯುರ್ವೇದ ಆಹಾರ ಪದ್ಧತಿ ಬಗ್ಗೆ ಡಾ. ಸಿ.ಎ. ಕಿಶೋರ್ ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದಾರೆ.
ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಆಯುರ್ವೇದದ (Ayurvedic) ಪಾತ್ರವೇನು ? ಉಪವಾಸವನ್ನು ಮಾಡುವುದರಿಂದ ಸಣ್ಣ ಆಗಬಹುದಾ ? ಈ ರೀತಿಯ ಹಲವು ಪ್ರಶ್ನೆಗಳು ಮತ್ತು ಗೊಂದಲಗಳ ಬಗ್ಗೆ ಆಯುರ್ವೇದ ತಜ್ಞರಾದ ಡಾ.ಸಿ.ಎ.ಕಿಶೋರ್(Dr. Kishor) ಮಾತನಾಡಿದ್ದಾರೆ. ಭಾರತೀಯ ಆಹಾರ ಪದ್ಧತಿಯಲ್ಲಿ ಏನೇ ಸಂತೋಷದ ವಿಷಯ ಇದ್ದರೂ ಸಿಹಿಯನ್ನು ಹಂಚಲಾಗುತ್ತದೆ. ಆದ್ರೆ ಈಗ ಸಿಹಿಯನ್ನು ತಿನ್ನುವುದರಿಂದ ದಪ್ಪ ಆಗುತ್ತಾರೆ ಎಂದು ತಿನ್ನುವುದಿಲ್ಲ. ನಮ್ಮ ಆಹಾರ ಪದ್ಧತಿಯಿಂದ(Food Habits) ಇಂದಿನ ಜನತೆಯಲ್ಲಿ ಹೆಚ್ಚು ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಸಕ್ಕರೆ ತಿನ್ನುವವರಿಗೆ ಸಕ್ಕರೆ ಕಾಯಿಲೆ ಬರುವುದಿಲ್ಲ. ಆದ್ರೆ ಸಕ್ಕರೆ ಕಾಯಿಲೆ ಇರುವವರು ಅದನ್ನು ತಿನ್ನಬಾರದು ಅಷ್ಟೇ ಎಂದು ಆಯುರ್ವೇದ ತಜ್ಞರಾದ ಡಾ.ಸಿ.ಎ.ಕಿಶೋರ್ ಹೇಳುತ್ತಾರೆ. ಉತ್ತಮ ಆರೋಗ್ಯಕ್ಕೆ ಒಳ್ಳೆಯ ಆಹಾರ ತಿನ್ನಿ ಹಾಗೂ ನಿಮ್ಮ ಕೆಲಸವನ್ನು ನೀವೇ ಮಾಡಿಕೊಳ್ಳಿ. ಸರಿಯಾದ ಸಮಯಕ್ಕೆ ಊಟವನ್ನು ಮಾಡಿ. ರಾತ್ರಿ ಹೊತ್ತು ಬೇಗ ಊಟ ಮಾಡಿ, ಸ್ವಲ್ಪ ತಿನ್ನಿ ಮಲಗಬೇಕು ಇದರಿಂದ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಡಾ.ಸಿ.ಎ.ಕಿಶೋರ್ ಹೇಳುತ್ತಾರೆ.
ಇದನ್ನೂ ವೀಕ್ಷಿಸಿ: ಇದು ಹೃದಯದ ಮಾತು.. ಹೃದಯದ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ?