Asianet Suvarna News Asianet Suvarna News

ಹಸುವಿಗೆ ಅದ್ಧೂರಿ ಸೀಮಂತ: ಗೋ ಪ್ರೇಮ ಮೆರೆದ ರೈತ ಕುಟುಂಬ.. ವಿಡಿಯೋ

ಚಿಕ್ಕೋಡಿ ತಾಲೂಕಿನ ಹೊಸ ಇಂಗಳಿಯಲ್ಲಿ ಹಸುವಿಗೆ ಸೀಮಂತ
ಅರುಣ ಬಾಮನೆ ಕುಟುಂಬದಿಂದ ಈ ವಿಶೇಷ ಕಾರ್ಯಕ್ರಮ
ಹೆಂಗಳೆಯರಂತೆ ಉಡಿ ತುಂಬಿ, ಆರತಿ ಎತ್ತಿ ಹಸುವಿಗೂ ಸೀಮಂತ
 

First Published Jun 15, 2023, 3:53 PM IST | Last Updated Jun 15, 2023, 3:53 PM IST

ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹೊಸ ಇಂಗಳಿಯಲ್ಲಿ ಹಸುವಿಗೆ ಸೀಮಂತ ಮಾಡಲಾಗಿದೆ. ಅರುಣ ಬಾಮನೆ ಕುಟುಂಬದವರು ಹಸುವಿಗೆ ಸೀಮಂತ ಮಾಡಿದ್ದಾರೆ. ಗರ್ಭಿಣಿ ಮಹಿಳೆಗೆ ಹೇಗೆ ಉಡಿ ತುಂಬಿ, ಆರತಿ ಎತ್ತುತ್ತಾರೋ, ಅದೇ ರೀತಿ ಹಸುವಿಗೂ ಮಾಡಲಾಗಿದೆ.ಈ ಒಂದು ವಿಶೇಷ ಕಾರ್ಯಕ್ರಮದಲ್ಲಿ ಗ್ರಾಮದ ಮುತ್ತೈದೆಯರು ಭಾಗಿಯಾಗಿ, ನೈವೈದ್ಯ ನೀಡಿ ವಿಶೇಷ ಪೂಜೆ ಸಲ್ಲಿಸಿದರು.ಗೋವಿಗೆ ನಮ್ಮ ದೇಶದಲ್ಲಿ ವಿಶೇಷ ಸ್ಥಾನ ಇದೆ. ಹಾಗಾಗಿ ನಾವು ಗೋವನ್ನು ಒಂದು ತಾಯಿಯ ರೂಪದಲ್ಲಿ ನೋಡುತ್ತೇವೆ. ಮನೆಯ ಮನುಷ್ಯರಿಗೆ ನೀಡುವ ಗೌರವವನ್ನು ಹಸುವಿಗೂ ನೀಡುತ್ತೇವೆ. ಇದೀಗ ಬೆಳಗಾವಿಯ ಈ ಕುಟುಂಬ ಗೋವಿಗೆ ಸೀಮಂತ ಮಾಡುವ ಮೂಲಕ ಗೋವಿಗೆ ನಾವು ಎಷ್ಟು ಪ್ರಾಮುಖ್ಯತೆ ನೀಡುತ್ತೇವೆ ಎಂಬುದನ್ನು ಸಾಭೀತು ಮಾಡಿದ್ದಾರೆ.

ಇದನ್ನೂ ವೀಕ್ಷಿಸಿ: ಬೈಕ್‌ ಸೈಡ್ ಬ್ಯಾಗ್‌ನಲ್ಲಿದ್ದ ಹಣ ಕದ್ದ ಚಾಲಾಕಿ ಬಾಲಕ: ಕೃತ್ಯ ಸಿಸಿಟಿವಿಯಲ್ಲಿ ಸೆರೆ

Video Top Stories