Asianet Suvarna News Asianet Suvarna News

ಬೈಕ್‌ ಸೈಡ್ ಬ್ಯಾಗ್‌ನಲ್ಲಿದ್ದ ಹಣ ಕದ್ದ ಚಾಲಾಕಿ ಬಾಲಕ: ಕೃತ್ಯ ಸಿಸಿಟಿವಿಯಲ್ಲಿ ಸೆರೆ

ಬ್ಯಾಂಕಿಂದ ಹಣ ಪಡೆದು ಬಕ್‌ನಲ್ಲಿಟ್ಟುಕೊಂಡಿದ್ದ ವ್ಯಕ್ತಿ
ಬೈಕ್ ಸವಾರನ ಗಮನ ಬೇರೆಡೆ ಸೆಳೆದು ಹಣ ದರೋಡೆ 
ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

First Published Jun 15, 2023, 3:23 PM IST | Last Updated Jun 15, 2023, 3:23 PM IST

ದಾವಣಗೆರೆ: ಬೈಕ್ ಸವಾರನ ಗಮನ ಬೇರೆಡೆ ಸೆಳೆದು ಬ್ಯಾಗ್‌ನಲ್ಲಿದ್ದ ಹಣವನ್ನು ಬಾಲಕನೊಬ್ಬ ಕದ್ದಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನಲ್ಲಿ ನಡೆದಿದೆ. ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹರಿಹರದ ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್‌ನ ಮುಂಭಾಗ ಈ ಕಳ್ಳತನ ನಡೆದಿದೆ. ವ್ಯಕ್ತಿಯೊಬ್ಬರು ಬ್ಯಾಂಕ್‌ನಿಂದ ಹಣವನ್ನು ತೆಗೆದು ಅದನ್ನು ಬೈಕ್‌ನಲ್ಲಿ ಇಟ್ಟಿದ್ದರು. ಇದನ್ನು ಗಮನಿಸಿದ ಖತರ್ನಾಕ್‌ ಕಳ್ಳರು, ಬೈಕ್‌ ಸವಾರನ ಗಮನವನ್ನು ಬೇರೆಡೆ ಸೆಳೆದು ಹಣವನ್ನು ಲಪಟಾಯಿಸಿದ್ದಾರೆ.ಈ ಸಂಬಂಧ ಹರಿಹರ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

ಇದನ್ನೂ ವೀಕ್ಷಿಸಿ: ಕಾಂಗ್ರೆಸ್‌ನಿಂದ ಮುಂದುವರೆದ ದೋಖಾ ಸಿರೀಸ್: ಸರ್ಕಾರದ ವಿರುದ್ಧ ಮಾಜಿ ಸಿಎಂ ಬೊಮ್ಮಾಯಿ‌ ವಾಗ್ದಾಳಿ

Video Top Stories