ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಯತ್ನಿಸಿದ್ದ ಧನುಷ್ ಕುಮಾರ್: ಯುಪಿಎಸ್‌ಸಿಯಲ್ಲಿ 501ನೇ ರ‍್ಯಾಂಕ್ ಪಡೆದಿದ್ದು ಹೇಗೆ?
ಏಳು ವರ್ಷಗಳ ಧ್ಯಾನದಿಂದ ಆರೋಗ್ಯ ಸುಧಾರಿಸಿಕೊಂಡು, ಯುಪಿಎಸ್‌ಸಿ ಪರೀಕ್ಷೆಯಲ್ಲಿ 501ನೇ ರ‍್ಯಾಂಕ್ ಪಡೆದು ಖಿನ್ನತೆ ಅನ್ನೋದು ಸಾಮಾನ್ಯವಾದದ್ದು ಅದರಿಂದ ಹೊರ ಬರುವ ಪ್ರಯತ್ನಕ್ಕೆ ದೊಡ್ಡ ಫಲವಿದೆ ಅನ್ನೋದನ್ನು ಸಾಧಿಸಿ ತೋರಿಸಿದ್ದಾರೆ.
ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ upsc ಪರೀಕ್ಷೆಯಲ್ಲಿ ಟಾಪರ್ ಆಗಿ ಹೊರ ಬಂದಿರುವ ಕತೆಯೇ ಒಂದು ಸ್ಪೂರ್ತಿದಾಯಕವಾಗಿದೆ. ಯುಪಿಎಸ್‌ಸಿ ಪರೀಕ್ಷೆಯಲ್ಲಿ 501 ನೇ ರ‍್ಯಾಂಕ್ ಪಡೆದಿರುವ ಧನುಷ್ ಕುಮಾರ್ ಇಂಡಿಯನ್ ಪೊಲೀಸ್ ಸರ್ವಿಸ್‌ಗೆ ಆಯ್ಕೆಯಾಗಿದ್ದಾರೆ. ಯುಪಿಎಸ್ ಸಿ ಪರೀಕ್ಷೆಯಲ್ಲಿ ಕನ್ನಡ ಸಾಹಿತ್ಯ ವಿಭಾಗದಲ್ಲಿ ಮೊದಲ ರ್ಯಾಂಕ್ ಪಡೆದಿದ್ದಾರೆ. ಧನುಷ್ ಕುಮಾರ್ ಲೈಫ್ ಇಸ್ಟ್ರಿ ಯುಪಿಎಸ್‌ಸಿ ಪರಿಕ್ಷೇಗೆ ತಯಾರಿ ನಡೆಸುತ್ತಿರುವವರಿಗೆ ಸ್ಪೂರ್ತಿ ತುಂಬುವಂತಿದೆ. ಎಸ್ ಎಸ್ ಎಲ್ ಸಿ, ಪಿಯುಸಿ ಗಳಲ್ಲಿ ಅತ್ಯುತ್ತಮ ಅಂಕಗಳಿಸಿ ಟಾಪರ್ ಆಗಿದ್ದ ಧನುಷ್, 2014 ರಲ್ಲಿ ಆಂತಕ, ಖಿನ್ನತೆ, ಜ್ಞಾಪಕ ಶಕ್ತಿ ನಷ್ಟ, ನಿದ್ರಾಹೀನತೆ, ಒಸಿಡಿ ಅಂತಹ ಮಾನಸಿಕ ಅನಾರೋಗ್ಯದಿಂದ ಬಳಲುತ್ತಿದ್ದರು. 2013 ರಲ್ಲಿ ಆತ್ಮಹತ್ಯೆಗೆ ಸಹ ಯತ್ನಿಸಿದ್ದರು.
ಇದನ್ನೂ ವೀಕ್ಷಿಸಿ: ಕೆಟ್ಟ ನಿರ್ದೇಶಕರ ಬಣ್ಣ ಬಯಲು ಮಾಡಿದ ‘ದಿ ಕೇರಳ ಸ್ಟೋರಿ’ ನಟಿ: ಸಿನಿಮಾ ಸೆಟ್‌ಗಳಲ್ಲಿ ಏನೆಲ್ಲಾ ನಡೆಯುತ್ತೆ ಗೊತ್ತಾ ?