ಕೆಟ್ಟ ನಿರ್ದೇಶಕರ ಬಣ್ಣ ಬಯಲು ಮಾಡಿದ ‘ದಿ ಕೇರಳ ಸ್ಟೋರಿ’ ನಟಿ: ಸಿನಿಮಾ ಸೆಟ್‌ಗಳಲ್ಲಿ ಏನೆಲ್ಲಾ ನಡೆಯುತ್ತೆ ಗೊತ್ತಾ ?
ಎಲ್ಲ ಜಾಗದಲ್ಲೂ ನಾನು ಒಳ್ಳೆಯ, ಕೆಟ್ಟ ಮತ್ತು ಅತೀ ಕೆಟ್ಟ ಜನರನ್ನು ನೋಡಿದ್ದೇನೆ. ಮೊದಲು ಸೆಟ್‌ಗೆ ನಟಿಯನ್ನು ಕರೆಯುತ್ತಾರೆ. ಆಮೇಲೆ ಕಾಯಲು ಹೇಳುತ್ತಾರೆ. ಹೀಗೆ ಪುರುಷ-ಮಹಿಳೆ ಎಂಬ ಲಿಂಗ ತಾರತಮ್ಯ ಸಿನಿಮಾ ಇಂಡಸ್ಟ್ರಿಯಲ್ಲಿ ಇದೆ ಎಂದು ಅದಾ ಶರ್ಮಾ ಹೇಳಿದ್ದಾರೆ.
ಹೊಲಸು ಸಂಸ್ಕೃತಿ ಎಲ್ಲಿಲ್ಲ ಹೇಳಿ.. ಯಾವ್ದೇ ಇಂಡಸ್ಟ್ರಿ ಆದ್ರು ಅಲ್ಲಿ ಕೆಟ್ಟ ಹುಳುಗಳು ಹಾರಾಡ್ತಿರುತ್ತವೆ. ಅದರಲ್ಲೂ ಬಣ್ಣದ ಜಗತ್ತಿದೆಯಲ್ಲ. ಇದು ನೋಡೋಕೆ ಚಂದ. ಅದರ ಆಳಕ್ಕೆ ಇಳಿದ್ರೆ ಅಲ್ಲಿನ ಕೆಟ್ಟ ಸಂಸ್ಕೃತಿ ಗೊತ್ತಾಗೋದು. ಈ ಅನುಭವ ದಿ ಕೇರಳ ಸ್ಟೋರಿ ನಟಿ ಅದಾ ಶರ್ಮಾಗೂ ಆಗಿದೆ. ದಿ ಕೇರಳಾ ಸ್ಟೋರಿ ನಟಿ ಅದಾ ಶರ್ಮಾ ಚಿತ್ರರಂಗದಲ್ಲಿರೋ ಕೆಲವು ಕೆಟ್ಟ ನಿರ್ದೇಶಕರ ಬಣ್ಣ ಬಯಲು ಮಾಡಿದ್ದಾರೆ. ಅಷ್ಟೆ ಅಲ್ಲ ಅಂಥವರ ಜೊತೆ ನಾನು ಕೆಲಸ ಮಾಡಲ್ಲ ಎಂದಿದ್ದಾರೆ.ಬಣ್ಣದ ಜಗತ್ತಲ್ಲೂ ಲಿಂಗ ತಾರತಮ್ಯ ಇದೆ ಎಂದು ಅದಾ ಶರ್ಮಾ ಓಪನ್ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ. ಎಲ್ಲ ಜಾಗದಲ್ಲೂ ನಾನು ಒಳ್ಳೆಯ, ಕೆಟ್ಟ ಮತ್ತು ಅತೀ ಕೆಟ್ಟ ಜನರನ್ನು ನೋಡಿದ್ದೇನೆ ಎಂದು ಅವರು ಹೇಳಿದ್ದಾರೆ.
ಇದನ್ನೂ ವೀಕ್ಷಿಸಿ: ‘ಆದಿಪುರುಷ್’ ರಿಲೀಸ್ ದಿನ ಪ್ರಭಾಸ್ ಫ್ಯಾನ್ಸ್‌ಗೆ ಡಬಲ್ ಧಮಾಕ: ಸಲಾರ್ ಟೀಸರ್ ಮೇಲೆ ಹೆಚ್ಚಾಯ್ತು ಕುತೂಹಲ!