ರಾಜಕೀಯಕ್ಕೆ ನಾನು ಹೋಗಲಿಲ್ಲ, ರಾಜಕೀಯ ನನ್ನನ್ನು ಎಳೆದುಕೊಂಡಿದೆ: ಡಾ. ಸಿ ಎನ್‌ ಮಂಜುನಾಥ್

ವೈಟ್‌ ಕಾಲರ್‌ನಲ್ಲಿ ಕಮಿಟ್‌ಮೆಂಟ್‌ ಇದೆ, ಕೈಂಡ್‌ನೆಸ್‌ ಇದೆ, ಹಾರ್ಡ್‌ವರ್ಕ್‌ ಇದೆ ಎನ್ನುವ ಮೂಲಕ ನಾವು ಜನಸೇವೆ ಮಾಡಲು ಸಿದ್ಧ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಾ. ಸಿ ಎನ್‌ ಮಂಜುನಾಥ್‌ ಹೇಳಿದ್ದಾರೆ. 
 

First Published Mar 31, 2024, 6:44 PM IST | Last Updated Mar 31, 2024, 6:44 PM IST

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಾ. ಸಿ ಎನ್‌ ಮಂಜುನಾಥ್‌ ಅವರು ರಾಜ್ಯ ರಾಜಕೀಯದಲ್ಲಿ ಉಂಟಾದ ಬದಲಾವಣೆ ಬಗ್ಗೆ ತಮ್ಮದೇ ಆದ ಅಭಿಪ್ರಾಯವನ್ನು ಹೊರಹಾಕಿದ್ದಾರೆ. ನಾನು ರಾಜಕೀಯಕ್ಕೆ ಹೋಗಲಿಲ್ಲ, ರಾಜಕೀಯ ನನ್ನನ್ನು ಎಳೆದುಕೊಂಡಿದೆ. ಅಲ್ಲದೆ ನನಗೆ ಸುಮಾರು ಮೂವತ್ತು ವರ್ಷಗಳ ವೈದ್ಯ ವೃತ್ತಿ ಮಾಡಿದ ಅನುಭವ ಇದೆ. ಅದೂ ಸಹ ಸಾರ್ವಜನಿಕ ಸೇವೆ ಎಂದು ನಾನು ಭಾವಿಸಿದ್ದೇನೆ. ಆ ಸಂದರ್ಭದಲ್ಲಿ ಹಾಸ್ಪಿಟಲ್‌ ಅನ್ನು ಶ್ರೇಷ್ಠ ಸ್ಥಾನಕ್ಕೆ ಕೊಂಡೊಯ್ಯುವ ಕೆಲಸ ಮಾಡಿದ್ದೇನೆ ಎಂದು ತಿಳಿಸಿದ್ದಾರೆ. ಇದರ ಜೊತೆಗೆ ನಾನು ರಾಜಕೀಯಕ್ಕೆ ಬರುವುದು ನನ್ನನ್ನೂ ಸೇರಿದಂತೆ ಯಾರಿಗೂ ಸಹ ಇಷ್ಟ ಇರಲಿಲ್ಲ. ಆದರೆ ನಾನು ರಾಜಕೀಯಕ್ಕೆ ಹೊಸಬನೇ ಇರಬಹುದು, ಜನಸೇವೆಯಲ್ಲಿ ಹೊಸಬನಲ್ಲ ಎಂದಿದ್ದಾರೆ.

ಇದನ್ನೂ ವೀಕ್ಷಿಸಿ:  News Hour Special : ಸಿದ್ದರಾಮಯ್ಯ, ಡಿಕೆಶಿ ನನ್ನನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ: ಪ್ರತಾಪ್‌ ಸಿಂಹ

Video Top Stories