ಕಟ್ಟಡದ ಮೇಲಿಂದ ಬಿತ್ತು ಕಂದಮ್ಮ..! ಭಯಂಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ..!

ಬಿದ್ದು ಬಿದ್ದು ನಗಿಸುವ ತರ್ಲೆ ತುಂಟಾಟಗಳು.. ಆಟ ಪೀಕಲಾಟ.. ನೋಡುವವರಿಗೆ ಮೋಜಿನಾಟ.. ಇದನ್ನ ನೋಡ್ತಾ ಇದ್ರೆ ನೀವು ಕಣ್ ಮಿಟುಕಿಸೋದಿಲ್ಲ.. ಮೈ ನವಿರೇರಿಸುವಂತಹ ಅಪರೂಪದ ದೃಶ್ಯಗಳಿವು.. ಇದುವೇ ಈ ಕ್ಷಣದ ವಿಶೇಷ ವೈರಲ್ ನ್ಯೂಸ್.
 

Share this Video
  • FB
  • Linkdin
  • Whatsapp

ಆಟವಾಡುತ್ತಿದ್ದಾಗ ಕಟ್ಟಡದ ಮೇಲಿನಿಂದ ಮಗು ಬಿದ್ದಿದ್ದು, ಭಯಂಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಂಗಳೂರಿನ(mangaluru) ಉಳ್ಳಾಲ ತಾಲೂಕಿನ ಮಂಜನಾಡಿ ಎಂಬಲ್ಲಿ ಈ ಘಟನೆ ನಡೆದಿದೆ. ತಾಯಿ ಜೊತೆ ಬ್ಯಾಂಕ್ ಗೆ(Bank) ಬಂದಿದ್ದ ಮೂರು ವರ್ಷದ ಗಂಡು ಮಗು, ಆಟವಾಡುತ್ತಾ ಹೊರಗೆ ಬಂದಿತ್ತು. ಈವೇಳೆ ಕಟ್ಟಡದ ಹೊರಗೆ ಹಾಕಿದ್ದ ಕಬ್ಬಿಣದ ಗ್ರಿಲ್ ಹತ್ತಲು ಮಗು ಯತ್ನಿಸಿತ್ತು. ಗ್ರಿಲ್ ಹತ್ತುವಾಗ ಆಯತಪ್ಪಿ ಮೊದಲ ಮಹಡಿಯಿಂದ ಗ್ರೌಂಡ್ ಫ್ಲೋರ್ ಗೆ ಮಗು ಬಿದ್ದಿದ್ದು, ಬಿದ್ದ ರಭಸಕ್ಕೆ ತಲೆ, ಕೈಗೆ ಗಾಯವಾಗಿದೆ. ಅದೃಷ್ಟವಶಾತ್ ಪ್ರಾಣಪಾಯದಿಂದ ಮಗು ಪಾರಾಗಿದೆ. ಇಲ್ಲೊಂದು ಕಟ್ಟಡಕ್ಕೆ ಬೆಂಕಿ(Fire) ಬಿದ್ದಿದ್ದು, ಒಳಗೆ ಇಬ್ಬರು ಮಕ್ಕಳು ಸಿಲುಕಿಕೊಂಡಿದ್ರು.. ಈ ವೇಳೆ ಜೀವ ಉಳಿಸಿಕೊಳ್ಳಲು ಒಬ್ಬರನಂತರ ಮತ್ತೊಬ್ಬರಂತೆ ಈ ಇಬ್ಬರೂ ಮಕ್ಕಳು ಕಟ್ಟಡದ ಕಿಟಕಿಯಿಂದ ಜಿಗಿದಿದ್ರು.. ಇನ್ನು ಕೆಳಗಿದ್ದವರು ಮಕ್ಕಳನ್ನು ಕ್ಯಾಚ್ ಹಿಡಿದು ರಕ್ಷಣೆ ಮಾಡಿದ್ದು, ಇಬ್ಬರೂ ಮಕ್ಕಳೂ(Child) ಸೇಫ್ ಆಗಿದ್ದಾರೆ.. ಅಲ್ದೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.

ಇದನ್ನೂ ವೀಕ್ಷಿಸಿ: ಮಳೆಯ ಕಣ್ಣಾಮುಚ್ಚಾಲೆಯಿಂದ ರೋಗಗಳಿಗೆ ಆಹ್ವಾನ: ಉಡುಪಿಯಲ್ಲಿ ಮಲೇರಿಯಾ, ಡೆಂಘೀ ಭೀತಿ !

Related Video