ಮಳೆಯ ಕಣ್ಣಾಮುಚ್ಚಾಲೆಯಿಂದ ರೋಗಗಳಿಗೆ ಆಹ್ವಾನ: ಉಡುಪಿಯಲ್ಲಿ ಮಲೇರಿಯಾ, ಡೆಂಘೀ ಭೀತಿ !

ಸಾಂಕ್ರಾಮಿಕ ರೋಗಕ್ಕೆ ಉಡುಪಿಯಲ್ಲಿ ಜನ ತತ್ತರಿಸಿ ಹೋಗಿದ್ದಾರೆ. ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆಯಿಂದ ಜನ ಡೆಂಗ್ಯೂ, ಮಲೇರಿಯಾಗೆ ತುತ್ತಾಗುತ್ತಿದ್ದಾರೆ. ಅದರಲ್ಲೂ ವಲಸೆ ಕಾರ್ಮಿಕರಲ್ಲೇ ಹೆಚ್ಚಾಗಿ ಕಂಡುಬರ್ತಿದ್ದು, ಇದು ಆತಂಕವನ್ನು ಶುರು ಮಾಡಿದೆ.

Share this Video
  • FB
  • Linkdin
  • Whatsapp

ಒಂದೆಡೆ ಬಿಟ್ಟು ಬಿಟ್ಟು ಸುರಿಯುವ ಮಳೆ..ಮತ್ತೊಂದೆಡೆ ಚರಂಡಿಯಲ್ಲಿ ನಿಂತ ನೀರು. ಸೊಳ್ಳೆಗಳ ಕಾಟಕ್ಕೆ ಬೇಸತ್ತ ಜನ. ಈ ದೃಶ್ಯ ಕಂಡು ಬಂದಿದ್ದು ಉಡುಪಿಯಲ್ಲಿ(Udupi). ಈ ಜಿಲ್ಲೆಯಲ್ಲಿ ವಲಸೆ ಕಾರ್ಮಿಕರೇ ಹೆಚ್ಚಾಗಿದ್ದಾರೆ. ಜೋಪಡಿ, ಗುಡಿಸಿನಲ್ಲೇ ಜೀವನ ಮಾಡೋರೇ ಜಾಸ್ತಿ. ಈ ಕುಟುಂಬಗಳಿಗೆ ಈಗ ಸಾಂಕ್ರಾಮಿಕ ರೋಗಗಳ( diseases) ಭೀತಿ ಶುರುವಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 22 ಮಲೇರಿಯಾ ಜೊತೆಗೆ 75 ಡೆಂಘೀ ಪ್ರಕರಣ ದಾಖಲಾಗಿವೆ. ಹವಾಮಾನ ಬದಲಾವಣೆಗೆ ಶೀತ,ಕೆಮ್ಮು, ಜ್ವರ ವ್ಯಾಪಕವಾಗಿದೆ. ಸಂತೆಕಟ್ಟೆ, ಕಲ್ಸಂಕ ಭಾಗದಲ್ಲಿ ಹೆಚ್ಚಿನ ಮಲೇರಿಯಾ(malaria) ದೃಢಪಟ್ಟಿದೆ. ಉಡುಪಿ ಜಿಲ್ಲೆಯಾದ್ಯಂತ ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತರು ನಗರ, ಗ್ರಾಮಾಂತರ ಭಾಗದಲ್ಲಿ ಬಿಡುವಿಲ್ಲದೇ ಸುತ್ತಾಡುತ್ತಿದ್ದಾರೆ. ಮಲೇರಿಯಾ, ಡೆಂಘೀ ರೋಗಲಕ್ಷಣಗಳು ಗ್ರಾಮೀಣ ಭಾಗಕ್ಕಿಂತಲೂ ನಗರ ಭಾಗದಲ್ಲಿ ಹೆಚ್ಚು ವರದಿಯಾಗುತ್ತಿದ್ದು ಶುಚಿತ್ವಕ್ಕೆ ಹೆಚ್ಚು ಗಮನ ಕೊಡಬೇಕು ಅಂತಾ ಆರೋಗ್ಯಾಧಿಕಾರಿ ಡಾ.ಪ್ರಶಾಂತ್ ಭಟ್ ಎಚ್ಚರಿಸಿದ್ದಾರೆ. ಉಡುಪಿಯಲ್ಲಿ ಜೂನ್‌ ಅಂತ್ಯಕ್ಕೆ 45 ಡೆಂಘೀ ಪ್ರಕರಣಗಳಿದ್ದವು. ಆಗಸ್ಟ್‌ನಲ್ಲಿ ಡೆಂಘೀ ಕೇಸ್‌ಗಳ ಸಂಖ್ಯೆ 75 ಏರಿಕೆಯಾಗಿದೆ.

ಇದನ್ನೂ ವೀಕ್ಷಿಸಿ:  ಕಾವೇರಿ ಸಂಘರ್ಷಕ್ಕೆ ಇಂದು ನಿರ್ಣಾಯಕ ದಿನ: ಕಾವೇರಿ ನಿಯಂತ್ರಣಾ ಸಮಿತಿಯಿಂದ ಹೈವೋಲ್ಟೇಜ್ ಸಭೆ

Related Video