ಮನರಂಜನೆಯ ಮಳೆ ಸುರಿಸಿದ ಮಂಡ್ಯ ಸಂಭ್ರಮಕ್ಕೆ ಅದ್ದೂರಿ ತೆರೆ
ಏಷ್ಯಾನೆಟ್ ಸುವರ್ಣ ನ್ಯೂಸ್, ಕನ್ನಡಪ್ರಭ ಹಾಗೂ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ ಆಯೋಜಿಸಿದ್ದ ಮೂರು ದಿನಗಳ 'ಮಂಡ್ಯ ಸಂಭ್ರಮ' ಕಾರ್ಯಕ್ರಮವು ಅದ್ದೂರಿಯಾಗಿ ನೆರವೇರಿತು. ಹಾಡು, ನೃತ್ಯ, ಹಾಸ್ಯ, ಸ್ಪರ್ಧೆಗಳು, ಆಹಾರ ಮೇಳ ಸೇರಿದಂತೆ ಹಲವು ಕಾರ್ಯಕ್ರಮಗಳು ಜನರನ್ನು ರಂಜಿಸಿದವು.
ಏಷ್ಯಾನೆಟ್ ಸುವರ್ಣ ನ್ಯೂಸ್, ಕನ್ನಡಪ್ರಭ ಹಾಗೂ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ ಆಯೋಜಿಸಿದ್ದ 'ಮಂಡ್ಯ ಸಂಭ್ರಮ'ಕ್ಕೆ ಅದ್ದೂರಿ ತೆರೆ ಬಿದ್ದಿದೆ. 3 ದಿನ ನಡೆದ ಮನರಂಜನಾ ಹಬ್ಬ ಮಂಡ್ಯ ಜನರಿಗೆ ಸಖತ್ ಖುಷಿ ಕೊಟ್ಟಿದೆ. ಸಕ್ಕರೆ ನಾಡಿನ ಜನರಿಗೆ ಮಂಡ್ಯ ಸಂಭ್ರಮ ಕಂಪ್ಲೀಟ್ ಎಂಟರ್ಟೈನ್ಮೆಂಟ್ ಪ್ಯಾಕೇಜ್ ಆಗಿತ್ತು. ಏಷ್ಯಾನೆಟ್ ಸುವರ್ಣ ನ್ಯೂಸ್, ಕನ್ನಡಪ್ರಭ ಹಾಗೂ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ ಸಹಭಾಗಿತ್ವದಲ್ಲಿ ನಡೆದ ಮಂಡ್ಯ ಸಂಭ್ರಮ ಅದ್ದೂರಿಯಾಗಿತ್ತು.. ಕಳೆದ 3 ದಿನಗಳಿಂದ ನಡೆದ ಕಾರ್ಯಕ್ರಮದಲ್ಲಿ ಹಾಡು, ನೃತ್ಯ, ಹಾಸ್ಯ, ಸ್ಪರ್ಧೆಗಳು ಮೇಳೈಸಿದ್ವು. ಕುಟುಂಬ ಸಮೇತರಾಗಿ ಆಹಾರ ಮೇಳಕ್ಕೆ ಬರ್ತಿದ್ದ ಆಹಾರ ಪ್ರಿಯರು ವೆರೈಟಿ ವೆರೈಟಿ ಫುಡ್‌ಗಳನ್ನ ಟೇಸ್ಟ್ ಮಾಡಿ ನಾಲಿಗೆ ರುಚಿ ಹೆಚ್ಚಿಸಿಕೊಂಡ್ರು.
ಮಂಡ್ಯ ಸಂಭ್ರಮದ ಕೊನೆ ದಿನದ ಕಾರ್ಯಕ್ರಮ ಕೂಡ ಭರ್ಜರಿಯಾಗಿತ್ತು.. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಕಾರ್ಯಕ್ರಮವನ್ನ ಉದ್ಘಾಟಿಸಿದ್ರು. ಜತೆಗೆ ಯುವನಟರಾದ ವಿರಾಟ್, ಸಚಿನ್ ಚಲುವರಾಯಸ್ವಾಮಿ, ಶಾಸಕರಾದ ನರೇಂದ್ರ ಸ್ವಾಮಿ ಭಾಗಿಯಾಗಿದ್ರು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನ ಸನ್ಮಾನಿಸಲಾಯ್ತು. ಸ್ಥಳೀಯರಿಗಾಗಿಯೇ ಆಯೋಜಿಸಿದ್ದ ವಿವಿಧ ಸ್ಪರ್ಧೆ ಹಾಗೂ ಚಟುವಟಿಕೆಗಳು ಗಮನಸೆಳೆದವು.. ಮಂಡ್ಯ ಸಂಭ್ರಮ ವೇದಿಕೆಗೆ ಆಗಮಿಸಿದ್ದ ಸಾಹಿತಿಗಳು, ರಾಜಕೀಯ ನಾಯಕರು, ಸಿನಿ ತಾರೆಯರು ವೇದಿಕೆ ಮೆರುಗು ಹೆಚ್ಚಿಸಿದ್ರು. ಮೂರು ದಿನಗಳ ಈ ಮಂಡ್ಯ ಸಂಭ್ರಮಕ್ಕೆ ವಿದ್ಯುಕ್ತ ತೆರೆ ಬಿದ್ದಿದ್ದು, 3 ದಿನಗಳ ಕಾಲ ನೃತ್ಯ, ಗಾಯನದ ಜತೆಗೆ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ನೆನಪೋತ್ಸವ ಹಾಗೂ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯ್ತು. ಮಂಡ್ಯ ಸಂಭ್ರಮದ ಸಣ್ಣ ವೀಡಿಯೋ ಝಲಕ್ ನಿಮಗಾಗಿ