ಶಿವಮೊಗ್ಗದ ಉಂಬ್ಳೆಬೈಲ ಗ್ರಾಮದಲ್ಲಿ ವನ್ಯಜೀವಿ ಸಂರಕ್ಷಣಾ ಸಪ್ತಾಹ ಕಾರ್ಯಕ್ರಮ
ಏಷ್ಯಾನೆಟ್ ಸುವರ್ಣ ನ್ಯೂಸ್, ಕನ್ನಡಪ್ರಭ ಸಂಸ್ಥೆಯು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಆರಂಭಿಸಿರುವ ವನ್ಯಜೀವಿ ಸಂರಕ್ಷಣಾ ಅಭಿಯಾನ ಸೀಸನ್ -4 ರ ಭಾಗವಾಗಿ ಶಿವಮೊಗ್ಗ ತಾಲೂಕಿನ ಉಂಬ್ಳೆಬೈಲು ಗ್ರಾಾಮದ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.
ಏಷ್ಯಾನೆಟ್ ಸುವರ್ಣ ನ್ಯೂಸ್, ಕನ್ನಡಪ್ರಭ ಸಂಸ್ಥೆಯು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಆರಂಭಿಸಿರುವ ವನ್ಯಜೀವಿ ಸಂರಕ್ಷಣಾ ಅಭಿಯಾನ ಸೀಸನ್ -4 ರ ಭಾಗವಾಗಿ ಶಿವಮೊಗ್ಗ ತಾಲೂಕಿನ ಉಂಬ್ಳೆಬೈಲು ಗ್ರಾಾಮದ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು. ವನ್ಯಜೀವಿ ಸಂರಕ್ಷಣಾ ಅಭಿಯಾನದ ಅಂಗವಾಗಿ ಎಲ್ಲೆಲ್ಲೂ ಬ್ಯಾನರ್ಗಳು ಬಂಟಿಂಗ್ಸ್ ಗಳು ಜೊತೆಗೆ ನಟ ರಿಷಬ್ ಶೆಟ್ಟಿ ಯವರ ಜನಪ್ರಿಯತೆಯ ಹವಾ ಎದ್ದು ಕಾಣುತ್ತಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಮಾತನಾಡಿದ ರಿಷಬ್ ಶೆಟ್ಟಿ ಸ್ವಾತಂತ್ರ್ಯ ಬಳಿಕ ಮಾನವ ಮತ್ತು ಪ್ರಕೃತಿ ನಡುವೆ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ಸಂಘರ್ಷದಲ್ಲಿ ಮಾನವ ಸೋಲಬೇಕು. ಆಗ ನಾವು ಉಳಿಯುತ್ತೇವೆ, ಭವಿಷ್ಯ ಗೆಲ್ಲುತ್ತದೆ ಎಂದು ಹೇಳಿದರು. ಬ್ರಿಟೀಷರು ಇಲ್ಲಿನ ಅರಣ್ಯ ಸಂಪತ್ತನ್ನು ತಮ್ಮ ದೇಶಕ್ಕೆ ಕೊಂಡೊಯ್ಯಲು ಅರಣ್ಯ ಸಂರಕ್ಷಣೆಗೆ ಕಾನೂನು ತಂದರು. ಸ್ವಾತಂತ್ರ್ಯಾ ನಂತರವೂ ಇದೇ ರೀತಿಯ ಕಾನೂನುಗಳು ಮುಂದುವರೆದವು. ಆದರೆ ಅರಣ್ಯ ಇಲಾಖೆಯಿಂದಾಗಲೀ ಅಥವಾ ಕಾನೂನಿಂದ ಮಾತ್ರವಾಗಲೀ ಈ ಅರಣ್ಯವನ್ನು ಸಂರಕ್ಷಿಸಲು ಸಾಧ್ಯವಿಲ್ಲ. ಬದಲಾಗಿ ಇಲಾಖೆಯ ಜೊತೆಗೆ ಜನರೂ ತಮ್ಮ ಸಹಭಾಗಿತ್ವ ತೋರಿದಲ್ಲಿ ಮಾತ್ರ ಅರಣ್ಯ ಉಳಿಸಬಹುದು ಎಂದು ತಿಳಿಸಿದರು