ಪ್ರೀತಿಸಿ ನಿಖಾ ಆದವರಿಗೆ ಕುಟುಂಬಸ್ಥರಿಂದ ಕೊಲೆ ಬೆದರಿಕೆ: ರಕ್ಷಣೆಗಾಗಿ ಎಸ್ಪಿ ಕಚೇರಿ ಮೆಟ್ಟಿಲು ಹತ್ತಿದ ಲವ್‌ ಬರ್ಡ್ಸ್!

ಅವನು ಎಸ್‌ಎಸ್‌ಎಲ್‌ಸಿ ಫೇಲ್‌ ಆಗಿ ಮೆಕ್ಯಾನಿಕ್‌ ಆಗಿದ್ದವನು, ಅವಳು ಬಿಫಾರ್ಮಸಿ ಮುಗಿಸಿ ಇನ್ನೇನು ಒಳ್ಳೆಯ ಜಾಬ್‌ಗೆ ಸೇರ್ಬೇಕಿತ್ತು. ಎದುರು ಬದರು ಮನೆಯಲ್ಲಿದ್ದ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಇವರ ಪ್ರೀತಿಗೆ ಮನೆಯವರು ಒಪ್ಪದೆ ಇದ್ದಾಗ ಓಡಿ ಹೋಗಿ ನಿಖಾ ಆಗಿದ್ದರು. ಆದ್ರೀಗ ಹುಡುಗಿ ಮನೆಯವರಿಂದ ಜೀವ ಬೆದರಿಕೆ ಇದ್ದು, ರಕ್ಷಣೆಗಾಗಿ ವಿಜಯಪುರ ಎಸ್ಪಿ ಮೊರೆ ಹೋಗಿದ್ದಾರೆ.
 

Share this Video
  • FB
  • Linkdin
  • Whatsapp

ಕೈ ಕೈ ಹಿಡಿದು ನಿಂತಿರೋ ಇವ್ರ ಹೆಸರು ಇಸಾಕ್‌ ಜನ್ನಳ್ಳಿ ಹಾಗೂ ಸುಮಯ್ಯ ಡೋಣಿ ಅಂತಾ. ವಿಜಯಪುರ(Vijayapura) ಜಿಲ್ಲೆಯ ತಾಳಿಕೋಟೆ ಪಟ್ಟಣದ ಕೆಂಬಾವಿ ಕಾಲೋನಿ ನಿವಾಸಿಗಳು. ಪ್ರೀತಿಸಿ(Love) ಮದುವೆಯಾಗಿರೋ ಇವರಿಗೆ ಸುಮಯ್ಯ ಡೋಣಿ ಕುಟುಂಬದಿಂದ ಜೀವ ಭಯವಿದೆಯಂತೆ. ಹೀಗಾಗಿ ನಮಗೆ ರಕ್ಷಣೆ ಬೇಕು ಅಂತಾ ವಿಜಯಪುರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿ ಎದುರು ಧರಣಿ ಕೂತಿದ್ದಾರೆ. 5 ವರ್ಷದಿಂದ ಪ್ರೀತಿ ಮಾಡ್ತಿದ್ದ ಇವರು ಕೆಲ ದಿನಗಳ ಹಿಂದೆ ಮುಸ್ಲಿಂ ಧರ್ಮದ ನಿಯಮಗಳಂತೆ ವಿಜಯಪುರದ ದರ್ಗಾವೊಂದರಲ್ಲಿ ನಿಖಾ ಮಾಡಿಕೊಂಡಿದ್ದಾರೆ. ಆದ್ರೆ, ಇಬ್ಬರನ್ನು ಮುಗಿಸಿ ಬಿಡುವುದಾಗಿ ಸುಮಯ್ಯ ಡೋಣಿ ತಂದೆ ಸೇರಿದಂತೆ ಕುಟುಂಬದವರು ಧಮ್ಕಿ ಹಾಕ್ತಿದ್ದಾರೆ. ಹಾಗಾಗಿ ರಕ್ಷಣೆ ಕೋರಿ ಎಸ್ಪಿ ಕಚೇರಿಗೆ ಬಂದಿದ್ದಾರೆ. ಇಸಾಕ್‌ ಎಸ್‌ಎಸ್‌ಎಲ್‌ಸಿ ಫೇಲ್‌ ಆಗಿ ಮೆಕಾನಿಕ್ ಕೆಲ್ಸಾ ಮಾಡ್ತಿದ್ದಾನೆ. ಸುಮಯ್ಯ ಬಿ ಫಾರ್ಮಸಿ ಮುಗಿಸಿದ್ದು ಜಾಬ್‌ ಸಿಗೋ ನಿರೀಕ್ಷೆಯಲ್ಲಿದ್ದಾಳೆ. ಆದ್ರೆ ತಾಳಿಕೋಟೆಯಲ್ಲಿರುವ ಸುಮಯ್ಯಾಳ ಡೋಣಿ ಕುಟುಂಬಸ್ಥರು ಪ್ರಭಾವಿಗಳಾಗಿದ್ದಾರೆ. ಸುಮಯ್ಯ ಕಿಡ್ನಾಪ್‌ ಆಗಿದೆ ಎಂದು ತಾಳಿಕೋಟೆ ಠಾಣೆಯಲ್ಲಿ ದೂರು ದಾಖಲಿಸಿ ಪೊಲೀಸರಿಂದ ಇಸಾಕ್‌ ಅಜ್ಜ-ಅಜ್ಜಿಗೆ ಟಾರ್ಚರ್ ಕೊಡಿಸ್ತಿದ್ದಾರಂತೆ. ಪ್ರೀತಿಸಿ ಮದುವೆಯಾಗಿರೋ ಇಬ್ಬರಿಗೂ ಹುಡುಗಿ ಕುಟುಂಬಸ್ಥರಿಂದ ಜೀವಭಯ ಕಾಡ್ತಿದೆ. ಡೋಣಿ ಕುಟುಂಬದವರು ಪ್ರಭಾವಿಗಳು ಆಗಿರೋದ್ರಿಂದ ಏನಾದ್ರೂ ಮಾಡ್ತಾರೆ ಈ ಪ್ರಯಣಯ ಪಕ್ಷಿಗಳಿಗೆ ಎನ್ನುವ ಭಯ ಹುಡುಗನ ಕುಟುಂಬಸ್ಥರಲ್ಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ಸಿಎಂ ಪುತ್ರನ ವಿಡಿಯೋ ವೈರಲ್: ಯತೀಂದ್ರ ಮಾತಾಡಿದ್ದು ಪೊಲೀಸ್ ಇಲಾಖೆ ವರ್ಗಾವಣೆ ಬಗ್ಗೆನಾ..?

Related Video