ಉಡುಪಿ: ಪ್ರವೀಣ್ ಚೌಗುಲೆ ನ್ಯಾಯಾಂಗ ಬಂಧನ ವಿಸ್ತರಣೆ, ತ್ವರಿತ ನ್ಯಾಯಾಲಯದ ಮೂಲಕ ವಿಚಾರಣೆಗೆ ಬೇಡಿಕೆ

ಒಂದೇ ಕುಟುಂಬದ ನಾಲ್ವರ ಹತ್ಯೆ ಮಾಡಿದ್ದ ಆರೋಪಿ ಪ್ರವೀಣ್ ಚೌಗಲೆಯನ್ನು ಈಗಾಗಲೇ ಪೊಲೀಸರು ಹೆಡೆಮುರಿ ಕಟ್ಟಿ ತನಿಖೆ ತೀವ್ರಗೊಳಿಸಿದ್ದಾರೆ. ಈ ನಡುವೆ ಹಂತಕನ ನ್ಯಾಯಾಂಗ  ಬಂಧನ ಅಂತ್ಯವಾಗಿದೆ. 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಸ್ತರಿಸಿ ಉಡುಪಿ ನ್ಯಾಯಾಲಯ ಆದೇಶ ನೀಡಿದೆ. 

First Published Dec 6, 2023, 11:37 AM IST | Last Updated Dec 6, 2023, 11:37 AM IST

ಉಡುಪಿ(ಡಿ.06):  ಉಡುಪಿಯ ನೇಜಾರಿನಲ್ಲಿ ನಾಲ್ವರ ಹತ್ಯೆಗೈದ ಪಾಪಿ ಪ್ರವೀಣನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯ್ತು. ಭದ್ರತೆಯ ದೃಷ್ಟಿಯಿಂದ ಪರಪ್ಪನ ಅಗ್ರಹಾರದಲ್ಲಿರುವ ಈತನಿಗೆ ಕಠಿಣ ಶಿಕ್ಷೆ ಆಗಬೇಕೆಂಬ ಒತ್ತಾಯ ಹೆಚ್ಚಿದೆ.  ಅಂದು ದೀಪಾವಳಿ.. ಇಡೀ ರಾಜ್ಯವೇ ಬೆಳಕಿನ ಸಂಭ್ರದಲ್ಲಿ ಮೊಳಗಿತ್ತು.. ಆದರೆ, ಉಡುಪಿಯಲ್ಲಿ ಹಬ್ಬದ ದಿನವೇ ನೆತ್ತರು ಹರಿದಿತ್ತು.. ಒಂದೇ ಕುಟುಂಬದ ನಾಲ್ವರ ಹತ್ಯೆ ಮಾಡಿದ್ದ ಆರೋಪಿ ಪ್ರವೀಣ್ ಚೌಗಲೆಯನ್ನು ಈಗಾಗಲೇ ಪೊಲೀಸರು ಹೆಡೆಮುರಿ ಕಟ್ಟಿ ತನಿಖೆ ತೀವ್ರಗೊಳಿಸಿದ್ದಾರೆ. ಈ ನಡುವೆ ಹಂತಕನ ನ್ಯಾಯಾಂಗ  ಬಂಧನ ಅಂತ್ಯವಾಗಿದೆ. 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಸ್ತರಿಸಿ ಉಡುಪಿ ನ್ಯಾಯಾಲಯ ಆದೇಶ ನೀಡಿದೆ. 

ಹಂತಕ ಪ್ರವೀಣ್ ಚೌಗಲೆಯನ್ನು ಸ್ಥಳ ಮಹಜರ್ಗೆ ಕರೆ ತಂದಾಗ ಸ್ಥಳೀಯರು ಸುತ್ತುವರಿದಿದ್ದರು. ಆತನನ್ನು ನಮಗೆ ಒಪ್ಪಿಸಿ ಎಂದು ಪ್ರತಿಭಟನೆಯನ್ನೂ ನಡೆಸಿದ್ದರು.. ಇತ್ತ ಜೈಲಿನಲ್ಲೂ ಖೈದಿಗಳಿಂದಲೇ ಹಲ್ಲೆ ನಡೆಯಬಹುದು ಭಯ.. ಇದೇ ಕಾರಣಕ್ಕೆ ಪ್ರತ್ಯೇಕ ಸೆಲ್ ನಲ್ಲಿ ಇರಿಸುವ ದೃಷ್ಟಿಯಿಂದ ಪ್ರವೀಣನನ್ನು ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಲಾಗಿತ್ತು. ಹೀಗಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕವೇ ಕೋರ್ಟ್ ವಿಚಾರಣೆ ನಡೆಸಿ ಆದೇಶ ನೀಡ್ತು.

8 ತಿಂಗಳ ಸ್ನೇಹ, 1 ತಿಂಗಳ ದ್ವೇಷ..ಬಯಲಾಯ್ತು ನಾಲ್ವರ ಹತ್ಯೆ ಪ್ರಕರಣದ ರಹಸ್ಯ!

ಒಂದೇ ಕುಟುಂಬದ ನಾಲ್ವರ ಹತ್ಯೆ ಬಳಿಕ ಸಾಲು ಸಾಲು ನಾಯಕರು ಬಂದು ದುಃಖತಪ್ತ ಕುಟುಂಬಕ್ಕೆ ಸಾಂತ್ವನ ಹೇಳಿದ್ರು. ಆದ್ರೆ ನೊಂದ ಕುಟುಂಬದ ನೂರು ಮಹಮ್ಮದ್ಗೆ ಧೈರ್ಯ ತುಂಬಿದ್ದರು. ಬಂದ ಎಲ್ಲಾ ನಾಯಕರಲ್ಲೂ ಕುಟುಂಬ ಇಟ್ಟಿದ್ದು ಒಂದೇ ಬೇಡಿಕೆ. ತ್ವರಿತ ನ್ಯಾಯಾಲಯದ ಮೂಲಕ ವಿಚಾರಣೆ ನಡೆಸಬೇಕು ಮತ್ತು ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಗೆ ವ್ಯವಸ್ಥೆ ಮಾಡಬೇಕು ಅನ್ನೋದು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಸಾರ್ವಜನಿಕರ ಶೃದ್ಧಾಂಜಲಿ ಸಭೆಯಲ್ಲೂ ತ್ವರಿತ ನ್ಯಾಯಾಲಯದ ಬೇಡಿಕೆ ಇಟ್ಟಿದ್ದರು. ಆದ್ರೆ ಸರ್ಕಾರ ಇನ್ನೂ ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ. ಈ ಅಧೀವೇಶನದಲ್ಲಾದ್ರೂ ಈ ಬಗ್ಗೆ ಪ್ರಸ್ಥಾಪಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಅನ್ನೋ ಒತ್ತಾಯ ಕೇಳಿಬಂದಿದೆ.

ಬೆಳಗಾವಿ ಅಧಿವೇಶನದಲ್ಲಿ ಕರಾವಳಿಯ ನಾಯಕರು ಈ ಬಗ್ಗೆ ಧ್ವನಿ ಎತ್ತಬೇಕಾಗಿದೆ. ರಾಜಕಾರಣ ದೂರವಿಟ್ಟು ಸರ್ಕಾರದ ಮೇಲೆ ಒತ್ತಡ ತಂದು, ಪಾಪಿ ಪ್ರವೀಣ್ ಚೌಗಲೆಗೆ ಆದಷ್ಟು ಬೇಗ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕಾಗಿದೆ.