Asianet Suvarna News Asianet Suvarna News

ಜೀವನದಲ್ಲಿ ಜಿಗುಪ್ಸೆಗೊಂಡು ಕೆರೆಗೆ ಹಾರಿದ ಮಹಿಳೆ: ಪ್ರಾಣ ಉಳಿಸಿದ ಪೊಲೀಸ್‌ ಕಾನ್‌ಸ್ಟೇಬಲ್‌

ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯನ್ನು ಸಂಚಾರಿ ಪೊಲೀಸ್​ ಕಾನ್‌ಸ್ಟೇಬಲ್​ ರಕ್ಷಣೆ ಮಾಡುವ ಮೂಲಕ ಮಾನವೀಯತೆ ಮೆರೆದಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
 

ಬೆಳಗಾವಿ: ಜೀವನದಲ್ಲಿ ಜಿಗುಪ್ಸೆಗೊಂಡು ಕೆರೆಗೆ ಹಾರಿದ ಮಹಿಳೆಯನ್ನು ಟ್ರಾಫಿಕ್‌ ಕಾನ್‌ಸ್ಟೇಬಲ್‌(Traffic police constable) ರಕ್ಷಿಸಿರುವ ಘಟನೆ ಬೆಳಗಾವಿಯ(Belagavi) ಬೈಲಹೊಂಗಲ ತಾಲೂಕಿನ ಬೈಲವಾಡ ಗ್ರಾಮದಲ್ಲಿ ನಡೆದಿದೆ. ಶಿವಲೀಲಾ ಪರ್ವತಗೌಡ್ರ ಎಂಬ ಮಹಿಳೆ ಕೆರೆಗೆ ಹಾರಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಟ್ರಾಫಿಕ್‌ ಪೊಲೀಸ್‌ ಕಾನ್‌ಸ್ಟೇಬಲ್‌ ಕಾಶಿನಾಥ್‌ ಈರಿಗಾರ ಕೆರೆಗೆ ಹಾರಿ ಮಹಿಳೆಯ(Woman) ಪ್ರಾಣ ಉಳಿಸಿದ್ದಾರೆ. ಬಳಿಕ ಏಕೆ ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ರಿ ಎಂದು ವಿಚಾರಿಸಿದ್ದಾರೆ. ಈ ಎಲ್ಲಾ ದೃಶ್ಯ ಸದ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಈ ವೇಳೆ ಈರಿಗಾರ ಅರು ಲೆಕ್‌ವ್ಯೂ ಆಸ್ಪತ್ರೆ ಪಾಯಿಂಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಇದನ್ನೂ ವೀಕ್ಷಿಸಿ:  ಹೆಬ್ಬುಲಿ ಹೇರ್‌ ಕಟ್‌ ಮಾಡಿಸಿದ ಮಕ್ಕಳಿಗಿಲ್ಲ ಶಾಲೆಗೆ ಎಂಟ್ರಿ: ಹೆಡ್‌ ಮಾಸ್ಟರ್‌ ಆದೇಶಕ್ಕೆ ಮಕ್ಕಳು ಕಂಗಾಲು..!

Video Top Stories