ಹೆಬ್ಬುಲಿ ಹೇರ್ ಕಟ್ ಮಾಡಿಸಿದ ಮಕ್ಕಳಿಗಿಲ್ಲ ಶಾಲೆಗೆ ಎಂಟ್ರಿ: ಹೆಡ್ ಮಾಸ್ಟರ್ ಆದೇಶಕ್ಕೆ ಮಕ್ಕಳು ಕಂಗಾಲು..!
ಹೆಬ್ಬುಲಿ ಹೇರ್ ಕಟ್ ಮಾಡಿಸಿದ ಮಕ್ಕಳು ಶಾಲೆಗೆ ಬರುವಂತಿಲ್ಲ ಎಂದು ಕುಲಹಳ್ಳಿ ಗ್ರಾಮದ ಸರ್ಕಾರಿ ಶಾಲೆ ಹೆಡ್ ಮಾಸ್ಟರ್ ಆದೇಶ ಹೊರಡಿಸಿದ್ದಾರೆ.
ಬಾಗಲಕೋಟೆ: ಹೆಬ್ಬುಲಿ ಹೇರ್ ಕಟ್ (hebbuli style) ಮಾಡಿಸಿದ ಮಕ್ಕಳು ಶಾಲೆಗೆ ಬರುವಂತಿಲ್ಲ ಎಂದು ಜಿಲ್ಲೆಯ ಕುಲಹಳ್ಳಿ ಗ್ರಾಮದ ಶಾಲೆಯಲ್ಲಿ ಹೊಸ ರೂಲ್ಸ್ ಮಾಡಲಾಗಿದೆ. ಶಾಲಾ ಹೆಡ್ ಮಾಸ್ಟರ್(headmaster) ಈ ಆದೇಶದಿಂದ ಸ್ಕೂಲ್ ಮಕ್ಕಳು ಕಂಗಾಲಾಗಿದ್ದಾರೆ. ಅಲ್ಲದೇ ವಿದ್ಯಾರ್ಥಿಗಳಿಗೆ ಈ ಹೆಬ್ಬುಲಿ ಸ್ಟೈಲ್‌ನಲ್ಲಿ ಹೇರ್ ಕಟ್ (Hair Cut) ಮಾಡಿಸದಂತೆ ಮನವಿ ಸಹ ಮಾಡಿಕೊಂಡಿದ್ದಾರೆ. ಈ ಬಗ್ಗೆ ಶಿಕ್ಷಕರು ಸಲೂನ್ ಮಾಲೀಕರಿಗೆ ಬರೆದಿರುವ ಪತ್ರ ಈಗ ವೈರಲ್ ಆಗಿದೆ. ಇದು ಮಕ್ಕಳ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರಲಿದೆ ಎಂದು ಹೆಡ್ ಮಾಸ್ಟರ್ ಕಟ್ಟಿಂಗ್ ಮಾಲೀಕರಿಗೆ(saloon owner) ಮನವಿಯನ್ನು ಸಲ್ಲಿಸಿದ್ದಾರೆ. ಬಾಗಲಕೋಟೆಯ ಜಮಖಂಡಿ ತಾಲೂಕಿನ ಕುಲಹಳ್ಳಿ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯ ಮುಖ್ಯೋಧ್ಯಾಪಕರು ತಮ್ಮ ಊರಿನಲ್ಲಿ ಹೇರ್ ಕಟಿಂಗ್ ಅಂಗಡಿ ಇಟ್ಟುಕೊಂಡಿರುವ ಚನ್ನಪ್ಪ ಸಿದ್ದರಾಮಪ್ಪ ನಾವಿ ಎಂಬುವವರಿಗೆ ಹೀಗೊಂದು ಮನವಿ ಮಾಡಿದ್ದಾರೆ.
ಇದನ್ನೂ ವೀಕ್ಷಿಸಿ: ಗುಜರಾತ್‌ನಲ್ಲಿ ಉಕ್ಕಿ ಹರಿಯುತ್ತಿರುವ ನದಿ..ಕೊಚ್ಚಿ ಹೋದ ಕಾರು, ಎಮ್ಮೆ, ಸಿಲಿಂಡರ್‌ಗಳು