ವಿಜಯಪುರಲ್ಲಿ ಬರದ ಛಾಯೆ..!ಬರ ಘೋಷಣೆಯಲ್ಲಿ ತಿಕೋಟ ತಾಲೂಕಿಗೆ ಅನ್ಯಾಯ..!
ಈ ಬಾರಿ ಮಳೆ ಇಲ್ಲದೆ ವಿಜಯಪುರ ಜಿಲ್ಲೆಯಾದ್ಯಂತ ಬರ ತಾಂಡವಾಡ್ತಿದೆ. ಆದ್ರೆ ಜಿಲ್ಲೆಯಲ್ಲಿ ಎಲ್ಲ ತಾಲೂಕುಗಳಲ್ಲಿ ಬರ ಘೋಷಣೆಯಾದ್ರು ತಿಕೋಟ ತಾಲೂಕನ್ನ ಮಾತ್ರ ಕೈ ಬಿಡಲಾಗಿದೆ. ಹೀಗಾಗಿ ತಿಕೋಟ ಭಾಗದ ರೈತರಲ್ಲಿ ಈಗ ಆಕ್ರೋಶ ಹೆಚ್ಚಿಸಿದೆ.
ಈ ಬಾರಿ ಮಳೆ ಕೈ ಕೊಟ್ಟ ಹಿನ್ನೆಲೆ ರಾಜ್ಯಾದ್ಯಂತ ಬರದ ಛಾಯೆ ಆವರಿಸಿದೆ. ಇದೀಗ ಬರ ಘೋಷಣೆಯಲ್ಲಿ ನಮ್ಮ ತಾಲೂಕಿಗೆ ಅನ್ಯಾಯ ಮಾಡಿದ್ದಾರೆ ಎಂದು ವಿಜಯಪುರದ ತಿಕೋಟ(Tikota) ತಾಲೂಕಿನ ರೈತರು ಸಿಡಿದೆದ್ದಿದ್ದಾರೆ. ಜಿಲ್ಲೆಯ 13 ತಾಲೂಕುಗಳ ಪೈಕಿ 12 ತಾಲೂಕುಗಳನ್ನ ಬರ(Drought) ಪೀಡಿತ ಅಂತ ಘೋಷಣೆ ಮಾಡಿದೆ. ಆದ್ರೆ ಬರ ಘೋಷಣೆಯಿಂದ ತಿಕೋಟ ತಾಲೂಕನ್ನ ಕೈಬಿಡಲಾಗಿದೆ. ಬರ ಪೀಡಿತ ತಾಲೂಕುಗಳಲ್ಲಿ ಅಧ್ಯಯನಕ್ಕೆ ಕೇಂದ್ರದ ತಂಡ ಆಗಮಿಸಿದೆ. ಜಿಲ್ಲೆಯ 12 ತಾಲೂಕುಗಳನ್ನು ಮಾತ್ರವಲ್ಲ ನಮ್ಮ ತಾಲೂಕಲ್ಲೂ ಬರ ಇದೆ. ಮಳೆಯಿಲ್ಲದೇ ಬೆಳೆಗಳು ಕೈಕೊಟ್ಟಿವೆ. ನಮ್ಮ ತಾಲೂಕಲ್ಲೂ ಕೇಂದ್ರ ತಂಡ ಅಧ್ಯಯನ ನಡೆಸಲಿ ಎಂದು ತಿಕೋಟ ತಾಲೂಕಿನ ರೈತರು ಆಗ್ರಹಿಸುತ್ತಿದ್ದಾರೆ. ತಿಕೋಟ ತಾಲೂಕಿನಲ್ಲಿ ಮುಂಗಾರು ಅವಧಿಯಲ್ಲಿ ಬಿತ್ತನೆ ಮಾಡಿದ್ದ ಈರುಳ್ಳಿ, ತೊಗರಿ, ಗೋವಿನ ಜೋಳ ಮಳೆ ಇಲ್ಲದೆ ಒಣಗಿ ಹೋಗಿದೆ. ಮುಖ್ಯ ಬೆಳೆಯಾಗಿರೋ ಕಬ್ಬು ಹಾಗೂ ದ್ರಾಕ್ಷಿ ಪರಿಸ್ಥಿತಿಯು ಭಿನ್ನವಾಗಿಲ್ಲ. ಆದ್ರೂ ಸ್ಥಳೀಯ ಶಾಸಕ, ಸಚಿವ ಎಂ.ಬಿ ಪಾಟೀಲ್, ತಿಕೋಟಾ ತಾಲೂಕನ್ನ ಬರ ತಾಲೂಕು ಎಂದು ಘೋಷಣೆ ಮಾಡಿಸುವಲ್ಲಿ ವಿಫಲರಾಗಿದ್ದಾರೆ. ಬರ ಅಧ್ಯಯನಕ್ಕೆ ಕೇಂದ್ರ ತಂಡ ಜಿಲ್ಲೆಗೆ ಆಗಮಿಸುತ್ತಿದೆ. ಇದೇ ಸಮಯದಲ್ಲಿ ಎಂಬಿ ಪಾಟೀಲ್(MB patil) ವಿದೇಶಿ ಪ್ರವಾಸದಲ್ಲಿದ್ದಾರೆ ಎಂದು ಬಿಜೆಪಿ(BJP) ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ರು. ಬರದ ತಾಲೂಕುಗಳ ಪಟ್ಟಿಯಿಂದ ತಿಕೋಟ ತಾಲೂಕನ್ನ ಕೈ ಬಿಟ್ಟಿರುವುದು ರೈತರಲ್ಲಿ ಅಸಮಾಧಾನ ಮೂಡಿಸಿದೆ. ಸದ್ಯ ಜಿಲ್ಲೆಗೆ ಭೇಟಿ ನೀಡ್ತಿರೋ ಕೇಂದ್ರ ತಂಡ ತಿಕೋಟ ತಾಲೂಕಿನ ಸ್ಥಿತಿಯನ್ನು ಅಧ್ಯಯನ ಮಾಡಿ, ಬರ ಘೋಷಣೆಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕಿದೆ.
ಇದನ್ನೂ ವೀಕ್ಷಿಸಿ: ಅಕ್ರಮ ಸಂಬಂಧ : ಪತ್ನಿ-ಮಕ್ಕಳನ್ನ ತವರಿಗಟ್ಟಿ, ಮತ್ತೊಬ್ಬಳ ಜತೆ ಚೆಲ್ಲಾಟ..!