ಅಕ್ರಮ ಸಂಬಂಧ : ಪತ್ನಿ-ಮಕ್ಕಳನ್ನ ತವರಿಗಟ್ಟಿ, ಮತ್ತೊಬ್ಬಳ ಜತೆ ಚೆಲ್ಲಾಟ..!

ಅವರಿಬ್ಬರು ಮದುವೆಯಾಗಿ ಬರೋಬ್ಬರಿ ನಾಲ್ಕು ವರ್ಷಗಳೇ ಕಳೆದಿತ್ತು. ಸಂಸಾರದ ನೌಕ ಬಲಿಷ್ಠವಾಗುವ ಹೊತ್ತಲ್ಲಿ, ಮತ್ತೊಬ್ಬಳ ಸ್ನೇಹಕ್ಕೆ ಬಿದ್ದ ಪತಿರಾಯ ಅವಳ ಸೆರಗಲ್ಲಿ ಸಂಡಿಗೆಯಾಗಿ ಹೆಂಡತಿಗೆ ಮೋಸ ಮಾಡಿದ್ದಾನೆ.

First Published Oct 6, 2023, 11:53 AM IST | Last Updated Oct 6, 2023, 11:53 AM IST

ಒಂದು ಕಡೆ ಕಣ್ಣೀರು ಹಾಕ್ತಿರುವ ಮಹಿಳೆ. ಇನ್ನೊಂದು ಕಡೆ ಮಗಳ ಭವಿಷ್ಯ ಹಾಳಾಯ್ತಲ್ಲ ಎಂದು ಕಂಗಾಲಾದ ಪೋಷಕರು. ಮಗಳು ಚೆನ್ನಾಗಿರಲಿ ಎಂದು ಕೋಟಿ ಕೋಟಿ ಖರ್ಚು ಮಾಡಿ ಮದುವೆ ಮಾಡಿಕೊಟ್ಟ ಕುಟುಂಬದ ಕಣ್ಣೀರ ಕತೆ ಇದು. ರಾಮನಗರ(Ramanagar) ಮೂಲದ ರೇಷ್ಮೆ ಉದ್ಯಮಿ ಫೈರೋಜ್ ಖಾನ್ 2018ರಲ್ಲಿ ತಮ್ಮ ಪುತ್ರಿ ಮುಸ್ಕಾನ್ ಖಾನ್ಳನ್ನು ಅದ್ದೂರಿಯಾಗಿ ಮದ್ವೆ ಮಾಡಿಕೊಟ್ಟಿದ್ದರು. ತುರುವೇಕೆರೆ ಮೂಲದ ಜಿಲಾನ್ ಬೇಗ್ಗೆ ಸುಮಾರು 2 ಕೋಟಿ ಖರ್ಚು ಮಾಡಿ ಬೆಂಗಳೂರಿನ(bengaluru) ಪ್ಯಾಲೇಸ್ ಗ್ರಾಂಡ್ನಲ್ಲೇ ಮದ್ವೆ ಮಾಡಿಕೊಟ್ಟಿದ್ರು.. ಅಷ್ಟೇ ಅಲ್ಲ ಸುಮಾರು ಒಂದೂವರೆ ಕೆಜಿ ಚಿನ್ನಾಭರಣ 18 ಲಕ್ಷ ಹಣವನ್ನೂ ವರದಕ್ಷಿಣೆಯಾಗಿ ಕೊಟ್ಟಿದ್ರಂತೆ. ದಂಪತಿಗೆ ಒಂದು ಗಂಡು, ಒಂದು ಹೆಣ್ಣು ಮಗು ಕೂಡ ಇದೆ.. ಆದ್ರೆ, ಪತ್ನಿ(Wife) ಜೊತೆ ಸಂಸಾರ ಮಾಡುವ ಜೊತೆಗೆ ಜಿಲಾನ್ ಬೇಗ್ ಹೊರಗಡೆಯೂ ಕಳ್ಳಾಟ ಶುರುಮಾಡಿದ್ದ. ಮೊದಲು ಚೆನ್ನಾಗೇ ಇದ್ದ ಸಂಸಾರದಲ್ಲಿ ಬರಬರುತ್ತಾ ಜೆಲಾನ್ ಬೇಗ್ ಪತ್ನಿ ಜೊತೆ ಜಗಳ ಶುರುಮಾಡಿದ್ನಂತೆ. ಇದರಿಂದ ಅನುಮಾನಗೊಂಡ ಪತ್ನಿ ಮುಸ್ಕಾನ್ ಖಾನ್, ಪತಿ ಮೊಬೈಲ್ ಪರಿಶೀಲಿಸಿದಾಗ ಪರಸ್ತ್ರೀಯರ ಜೊತೆ ತನ್ನ ಗಂಡನ ಮಾತುಕಥೆ, ರಾಸಲೀಲೆಗಳ ಸಾಕ್ಷಿ ಸಿಕ್ಕಿದೆ.. ಈ ವಿಚಾರವನ್ನ ಮುಷ್ಕಾನ್ ತನ್ನ ಅತ್ತೆ-ಮಾವ ಹಾಗೂ ಪೋಷಕರಿಗೆ ತಿಳಿಸಿದ್ದಾಳೆ.. ಇದಕ್ಕೆ ಕುಪಿತಗೊಂಡ ಜಿಲಾನ್ ಬೇಗ್ ಪತ್ನಿ, ಮಕ್ಕಳನ್ನು ತವರಿಗೆ ಕಳಿಸಿದ್ದ. ಅಷ್ಟೇ ಅಲ್ಲ ಈಗ ಬೇರೊಬ್ಬಳನ್ನು ಮನೆಗೇ ಕರೆತಂದು ರಾಜರೋಷವಾಗಿ ಸಂಸಾರ ನಡೆಸುತ್ತಿದ್ದಾನಂತೆ. ಇನ್ನು ಈ ವಿಚಾರವಾಗಿ ಜಿಲಾನ್ ಬೇಗ್ ಮನೆಗೆ ಹೋಗಿ ಪ್ರಶ್ನಿಸಿದ್ದಾರೆ. ಆದ್ರೆ ಜಿಲಾನ್ ಪೋಷಕರು ನಮ್ಮ ಮಗ ಗಂಡಸು ಅವನು ಏನು ಬೇಕಾದ್ರು ಮಾಡ್ತಾನೆ ಅಂತ ಮಗನ ಪರವೇ ವಕಾಲತ್ತು ವಹಿಸುತ್ತಿದ್ದಾರಂತೆ. ಹೀಗಾಗಿ ಮುಸ್ಕಾನ್ ಈಗ ತನ್ನ ಪೋಷಕರ ಜೊತೆಗೂಡಿ ತುರುವೇಕೆರೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ನನಗೆ ನ್ಯಾಯ ಕೊಡಿಸಿ ಎಂದು ಅಲವತ್ತುಕೊಳ್ತಿದ್ದಾಳೆ.

ಇದನ್ನೂ ವೀಕ್ಷಿಸಿ:  ಮಂಗಳೂರಲ್ಲಿ ಸಿಡಿದೆದ್ದ ಬೀದಿಬದಿ ವ್ಯಾಪಾರಿಗಳು: ಪಾಲಿಕೆಗೆ ಮುತ್ತಿಗೆ ಯತ್ನ, ಅಧಿಕಾರಿಗಳ ವಿರುದ್ಧ ಆಕ್ರೋಶ

Video Top Stories