
ಸುವರ್ಣ ಸಾಧಕರು ಪ್ರಶಸ್ತಿಗೆ ಭಾಜನರಾದ ಬೆಳಗಾವಿ ರವಿ ಪೂಜಾರಿ
ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ವತಿಯಿಂದ ಬೆಳಗಾವಿಯ ರವಿ ಪೂಜಾರಿ ಅವರಿಗೆ ಸುವರ್ಣ ಸಾಧಕರು ಪ್ರಶಸ್ತಿಯನ್ನು ನೀಡಲಾಗಿದೆ.
ಪ್ರತಿವರ್ಷ ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ವತಿಯಿಂದ ಸಾಮಾಜಕ್ಕೆ ಕೊಡುಗೆ ನೀಡಿದ ಹಲವು ಸಾಧಕರನ್ನು ಗೌರವಿಸಲಾಗುತ್ತದೆ. ಅದರಂತೆ ಈ ಬಾರಿಯೂ ಸಮಾಜಕ್ಕೆ ಕೊಡುಗೆ ನೀಡಿದ ಹಲವರನ್ನು ಗುರುತಿಸುವ ಕಾರ್ಯ ನಡೆದಿದ್ದು, ಈ ಬಾರೀ ಬೆಳಗಾವಿಯ(Belagavi) ಆರ್‌ಎಸ್‌ಪಿ ಫೌಂಡೇಷನ್ ಅಧ್ಯಕ್ಷರಾದ ರವಿ ಪೂಜಾರಿ(Ravi Pujari) ಅವರು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಸುವರ್ಣ ಸಾಧಕರು ಪ್ರಶಸ್ತಿಯನ್ನು(Suvarna sadhakaru award) ಕೊಡಲಾಗುತ್ತಿದೆ. ಈ ಫೌಂಡೇಷನ್ ಮೂಲಕ ಇವರು ರಕ್ತದಾನ ಶಿಬಿರ, ಶಿಕ್ಷಣಕ್ಕೆ ಹಣಕಾಸಿನ ಸೌಲಭ್ಯ, ರಸ್ತೆಗಳ ರಿಪೇರಿ ಸೇರಿದಂತೆ ಅನೇಕ ಸಾಮಾಜಿಕ ಕಾರ್ಯಗಳನ್ನು ಇವರು ಮಾಡಿದ್ದಾರೆ.
Add Asianetnews Kannada as a Preferred Source

ಇದನ್ನೂ ವೀಕ್ಷಿಸಿ: Today Horoscope: ಈ ದಿನ ಮಧ್ಯಾಷ್ಟಮಿ ಆಗಿದ್ದು, ಪೂರ್ವಜರ ಕಾರ್ಯ ಮಾಡುವುದರಿಂದ ಸಿಗುವ ಫಲವೇನು?