Asianet Suvarna News Asianet Suvarna News

ಫುಡ್‌ ಫೆಸ್ಟಿವಲ್‌ ಮೇಳಕ್ಕೆ ಶಾಸಕ ಶ್ರೀವತ್ಸ ಚಾಲನೆ: ಮೂರು ದಿನ ನಡೆಯುವ ಸುವರ್ಣ ದಸರ ಸಂಭ್ರಮ

ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮತ್ತು ಕನ್ನಡ ಪ್ರಭವತಿಯಿಂದ ಸುವರ್ಣ ದಸರ ಸಂಭ್ರಮವನ್ನು ಮೈಸೂರಿನಲ್ಲಿ ಆಯೋಜಿಸಲಾಗಿದೆ.
 

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮತ್ತು ಕನ್ನಡ ಪ್ರಭವತಿಯಿಂದ ಆಯೋಜಿಸಲಾದ ಸುವರ್ಣ ದಸರ ಕಾರ್ಯಕ್ರಮಕ್ಕೆ(Suvarna Dasara program) ಚಾಲನೆ ನೀಡಲಾಗಿದೆ. ಅರಸು ಫೌಂಡೇಷನ್‌ ಶಾಲೆಯಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮವನ್ನು ಶಾಸಕ ಶ್ರೀವತ್ಸ ಚಾಲನೆ ನೀಡಿದರು. ನಟ, ನಿರ್ದೇಶಕ ಪ್ರಥಮ್‌ ಸೇರಿ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇನ್ನೂ ಈ ಮೇಳದಲ್ಲಿ 50ಕ್ಕೂ ಹೆಚ್ಚು ಆಹಾರ(Food) ಮಳಿಗೆಗಳನ್ನು ತೆರೆಯಲಾಗಿದೆ. ಉತ್ತರ, ದಕ್ಷಿಣ ಭಾರತದ ಬಗೆಬಗೆಯ ತಿಂಡಿ ತಿನಿಸುಗಳು ಮಾರಾಟಕ್ಕೆ ಇವೆ. ವೀಕೆಂಡ್‌ ಮಸ್ತಿಗೆ ಇದು ಹೇಳಿ ಮಾಡಿಸಿದ ಕಾರ್ಯಕ್ರಮವಾಗಿದೆ. ಇಂದು ಯೋಗರಾಜ್‌ ಭಟ್‌ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಇದನ್ನೂ ವೀಕ್ಷಿಸಿ:  ಯಶವಂತಪುರ ರೈಲ್ವೇ ನಿಲ್ದಾಣಕ್ಕೆ ಹೈಟೆಕ್ ಟಚ್: ಇನ್ಮುಂದೆ ಪಾರ್ಕಿಂಗ್ ಸಮಸ್ಯೆಗೆ ಗುಡ್ ಬೈ