ಸಿಎಂ- ಡಿಸಿಎಂಗೆ ಸಿದ್ಧವಾಗಿದೆ ವಿಶೇಷ ದಸರಾ ಗಿಫ್ಟ್!

ಸಿಎಂಗೆ ಸಿದ್ದರಾಮಯ್ಯ ಅವರ ಪುತ್ರ ದಿ.ರಾಕೇಶ್‌ ಅವರ ಭಾವಚಿತ್ರದ ಜೊತೆಗೆ ನ್ಯಾಯದೇವತೆ ಭಾವಚಿತ್ರವಿರುವ ಗಿಫ್ಟ್‌ ನೀಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರಿಗೆ ಕೆಂಪೇಗೌಡ ಅವರ ಭಾವಚಿತ್ರವಿರುವ ಗಿಫ್ಟ್‌ ನೀಡಲಿದ್ದಾರೆ ಕಲಾವಿದ ರಾಜೇಶ್‌.  

Share this Video
  • FB
  • Linkdin
  • Whatsapp

ಮೈಸೂರು(ಅ.22): ಅರಮನೆ ನಗರಿ ಮೈಸೂರಿನಲ್ಲಿ ದಸರಾ ಸಂಭ್ರಮ ಮನೆ ಮಾಡಿದೆ. ಸಿಎಂ, ಡಿಸಿಎಂಗೆ ನೀಡೋದಕ್ಕೆ ಅಂತ ವಿಶೇಷವಾದ ದಸರಾ ಗಿಫ್ಟ್ ಸಿದ್ಧವಾಗಿದೆ. ವಿಶೇಷವಾದ ದಸರಾ ಗಿಫ್ಟ್ ಅನ್ನ ಕಲಾವಿದ ರಾಜೇಶ್‌ ಸಿದ್ಧಪಡಿಸಿದ್ದಾರೆ. ಪಂಚಲೋಹದ ತ್ರೀಡಿ ಭಾವಚಿತ್ರವನ್ನ ಕಲಾವಿದ ರಾಜೇಶ್‌ ಸಿದ್ಧಪಡಿಸಿದ್ದಾರೆ. ಕಲಾವಿದ ರಾಜೇಶ್‌ ಪ್ರತೀ ವರ್ಷ ಜಂಬೂಸವಾರಿ ದಿನ ಸಿಎಂಗೆ ಗಿಫ್ಟ್‌ ನೀಡುತ್ತಾ ಬಂದಿದ್ದಾರೆ. ಈ ಬಾರಿಯೂ ಸಹ ಗಿಫ್ಟ್‌ ನೀಡಲು ಕಲಾವಿದ ರಾಜೇಶ್‌ ತಯಾರಿ ಮಾಡಿಕೊಂಡಿದ್ದಾರೆ. ಸಿಎಂಗೆ ಸಿದ್ದರಾಮಯ್ಯ ಅವರ ಪುತ್ರ ದಿ.ರಾಕೇಶ್‌ ಅವರ ಭಾವಚಿತ್ರದ ಜೊತೆಗೆ ನ್ಯಾಯದೇವತೆ ಭಾವಚಿತ್ರವಿರುವ ಗಿಫ್ಟ್‌ ನೀಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರಿಗೆ ಕೆಂಪೇಗೌಡ ಅವರ ಭಾವಚಿತ್ರವಿರುವ ಗಿಫ್ಟ್‌ ನೀಡಲಿದ್ದಾರೆ ಕಲಾವಿದ ರಾಜೇಶ್‌.

ವನ್ಯಜೀವಿ ಸಂರಕ್ಷಣಾ ಅಭಿಯಾನ: ಗುಡೇಕೋಟೆ ಕರಡಿಧಾಮದೊಳಗೊಂದು ಸುತ್ತು..!

Related Video