75 ನೇ ಸ್ವಾತಂತ್ರ ದಿನಾಚರಣೆಗೆ ಶಿವಮೊಗ್ಗ ಯುವಕರ ವಂದೇ ಮಾತರಂ ಸ್ಪೆಷಲ್ ವಿಡಿಯೋ.!
ಭಾರತ ತನ್ನ ಸ್ವಾತಂತ್ರ್ಯ ದಿನದ ವಜ್ರ ಮಹೋತ್ಸವ ಆಚರಿಸಲು ಸಂಭ್ರಮದಿಂದ ಅಣಿಯಾಗಿ ನಿಂತಿದೆ . ಈ ಸಂಧರ್ಭದಲ್ಲಿ ನಮ್ಮ ಶಿವಮೊಗ್ಗದ 'ಪೃಥ್ವಿಗೌಡ ಕ್ರಿಯೇಷನ್ಸ್' ಒಂದು ವಿನೂತನ ಪ್ರಯೋಗಕ್ಕೆ ಮುಂದಾಗಿದೆ .
ಶಿವಮೊಗ್ಗ (ಆ. 13): ಭಾರತ ತನ್ನ ಸ್ವಾತಂತ್ರ್ಯ ದಿನದ ವಜ್ರ ಮಹೋತ್ಸವ ಆಚರಿಸಲು ಸಂಭ್ರಮದಿಂದ ಅಣಿಯಾಗಿ ನಿಂತಿದೆ . ಈ ಸಂಧರ್ಭದಲ್ಲಿ ನಮ್ಮ ಶಿವಮೊಗ್ಗದ 'ಪೃಥ್ವಿಗೌಡ ಕ್ರಿಯೇಷನ್ಸ್' ಒಂದು ವಿನೂತನ ಪ್ರಯೋಗಕ್ಕೆ ಮುಂದಾಗಿದೆ
ಭಾರತದ ಅಭೂತಪೂರ್ವ ಸ್ವಾತಂತ್ರ್ಯದ ಹೋರಾಟಕ್ಕೆ ರಣಮಂತ್ರವಾದ ಬಂಕಿಮಚಂದ್ರರ ವಂದೇ ಮಾತರಂ ರಾಷ್ಟ್ರಗಾನವನ್ನು ಪ್ರಪಂಚದ ಮೂಲೆ ಮೂಲೆಯಲ್ಲಿರುವ 75 ಅನಿವಾಸಿ ಭಾರತೀಯರು ಹಾಡಲಿದ್ದಾರೆ . ಇದೇ ಆಗಸ್ಟ್ 15 ರಂದು ಈ ವಿಶೇಷ ಹಾಡು ಬಿಡುಗಡೆಯಾಗಲಿದೆ.
ಯಾರಿಗೆ ಬಂತು ಸ್ವಾತಂತ್ರ್ಯ? ರಿಯಲ್ ಸ್ಟಾರ್ ಉಪೇಂದ್ರ ನಿರಾಸೆ
ಅಮೇರಿಕಾದಿಂದ ಹಿಡಿದು ಮಲೇಷಿಯಾದ ತನಕ ಸುಮಾರು 20 ಕ್ಕೂ ಹೆಚ್ಚು ದೇಶಗಳಲ್ಲಿ ನೆಲೆಸಿರುವ ಭಾರತೀಯರು ರಾಷ್ಟ್ರಗಾನವನ್ನು ಹಾಡಿ, ಬರಲಿರುವ 75 ನೇ ಸ್ವಾತಂತ್ರ್ಯ ದಿನಕ್ಕೆ ತಮ್ಮ ಗಾನ ನಮನದ ಮೂಲಕ ದೇಶಭಕ್ತಿಯನ್ನು ಮೆರೆದಿದ್ದಾರೆ .