Asianet Suvarna News Asianet Suvarna News

ಯಾರಿಗೆ ಬಂತು ಸ್ವಾತಂತ್ರ್ಯ?- ರಿಯಲ್ ಸ್ಟಾರ್ ಉಪೇಂದ್ರ ನಿರಾಸೆ

'ನಿಜಕ್ಕೂ ನಾವು ಸ್ವತಂತ್ರ ಭಾರತದಲ್ಲೇ ಇದ್ದೇವಾ ಎನ್ನುವ ಸಂದೇಹ ಕಾಡುತ್ತಿರುತ್ತದೆ. ಯಾಕೆಂದರೆ ಇಂದಿಗೂ ನಮ್ಮ ಹಕ್ಕುಗಳ ಬಗ್ಗೆ ನಮ್ಮಲ್ಲಿ ಸರಿಯಾದ ಅರಿವು ಮೂಡಿಲ್ಲ' ಎಂದರು ಚಿತ್ರ ನಟ ಉಪೇಂದ್ರ. ಅವರ ಧ್ವನಿಯಲ್ಲಿ ನಿರಾಸೆಯಿತ್ತು.

Actor Upendras interview about independence day
Author
Bengaluru, First Published Aug 8, 2021, 2:14 PM IST

ರಿಯಲ್ ಸ್ಟಾರ್ ಉಪೇಂದ್ರ ಅವರು ತಮ್ಮ ಸಿನಿಮಾಗಳ ಮೂಲಕ ಹಿಂದೆಂದೂ ಕಂಡಿರದ ಹೊಸ ಅಲೆಯನ್ನು ಸೃಷ್ಟಿಸಿದವರು. ಈಗ ಅಂಥದೇ ಕ್ರಾಂತಿಯನ್ನು ಸಮಾಜ ಬದಲಾಯಿಸುವ  ವಿಚಾರದಲ್ಲಿಯೂ  ತರುವ ಪ್ರಯತ್ನದಲ್ಲಿರುವವರು. ಆದರೆ ಸಿನಿಮೀಯ ಬದಲಾವಣೆ ನಿರೀಕ್ಷಿಸುವ ಅಭಿಮಾನಿಗಳ ನಡುವೆ ಅವರ ನೈಜವಾದ ಪ್ರಯತ್ನ ಗುರುತಿಸಲ್ಪಡುತ್ತಿಲ್ಲ. ಹಾಗಂತ ತಮ್ಮನ್ನು ಜನತೆ ನಾಯಕನಾಗಿ ಗುರುತಿಸಬೇಕಾಗಿಲ್ಲ; ಪ್ರಜಾಪ್ರಭುತ್ವದ ಮೂಲಕ ತಮಗಿರುವ ಹಕ್ಕುಗಳ ಬಗ್ಗೆ ಸರಿಯಾದ ಅರಿವು ಮೂಡಿಸಿಕೊಂಡರೆ ಸಾಕು ಎನ್ನುವುದು ಉಪೇಂದ್ರ ಅವರ ಅನಿಸಿಕೆ. ಆಗಲೇ ನಿಜವಾದ ಸ್ವಾತಂತ್ರ್ಯ ಸಂಭ್ರಮದ ಅನುಭವ ದೊರಕಲಿದೆ ಎನ್ನುವ ಅಭಿಪ್ರಾಯ ಅವರದು.

-ಶಶಿಕರ ಪಾತೂರು

ಕ್ರೇಜಿಸ್ಟಾರ್ ಮೆಚ್ಚುಗೆ ಕೊನೆತನಕ ಮರೆಯಲ್ಲ- ಕಾವ್ಯ ಶ್ರೀ  ನೂರಿತ್ತಾಯ

ಸ್ವಾತಂತ್ರ್ಯ ದಿನಾಚರಣೆ ಎಂದೊಡನೆ ನಿಮಗೆ ನೆನಪಾಗುವುದೇನು?

ಸ್ವಾತಂತ್ರ್ಯ ದಿನಾಚರಣೆ ಎಂದೊಡನೆ ಎಲ್ಲರಲ್ಲಿಯೂ ಒಂದೇ ಭಾವ; ಅದು ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿರುವುದರ ನೆನಪು. ಬಾಲ್ಯದಲ್ಲಿ ಶಾಲೆಯಲ್ಲಿ ಆಚರಿಸಿಕೊಂಡ ಖುಷಿ.. ಅದೆಲ್ಲಾ ಒ.ಕೆ. ಆದರೆ ಈಗಿನ ಸ್ವಾತಂತ್ರ್ಯ ದಿನಾಚರಣೆ ಅಂದರೆ ನಿಮಗೆಲ್ಲ ಗೊತ್ತು. ಹೇಗೆ ಅಂತ! ಸ್ವಾತಂತ್ರ್ಯ ಸಿಕ್ಕಿರುವುದು ಸ್ವತಂತ್ರವಾಗಿ ಬದುಕಿ ಅಂತ ಅಲ್ವಾ?  ಆದರೆ ಈಗ ಆಗಿರುವುದೇನು? ಬ್ರಿಟಿಷರು ಹೋಗಿ ಆ ಜಾಗದಲ್ಲಿ ನಮ್ಮವರೇ ಕುಳಿತಂತಿದೆ. ಈಗ ಅಲ್ಲಿ ನಮಗೆ ಸ್ವಾತಂತ್ರ್ಯ ಬೇಕಾಗಿದೆ ಅಷ್ಟೇ..! ಆ ನಿಜವಾದ ಸ್ವಾತಂತ್ರ್ಯ ಸಿಗಬೇಕು ಜನಗಳಿಗೆ.

`ಪಾರು' ಧಾರಾವಾಹಿ ನೀಡಿದ್ದು ಅಪರೂಪದ ಅವಕಾಶ - ಶರತ್

ಬಾಲ್ಯದಿಂದ ಇದುವರೆಗಿನ ಜೀವನದಲ್ಲಿ ಮರೆಯಲಾಗದ ಸ್ವಾತಂತ್ರ್ಯ ದಿನಾಚರಣೆ ಯಾವುದು?

ಆಗಲೇ ಹೇಳಿದ್ನಲ್ಲ, ಶಾಲೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂದರೇನೇ ಧ್ವಜಾರಾಹೋಣ ಮಾಡೋದು, ಏನೇನೋ ಕಾರ್ಯಕ್ರಮಗಳು ನಡೆಯುತ್ತಿದ್ದವು.. ನಾನೂ ಭಾಗಿಯಾಗುತ್ತಿದ್ದೆ. ಆದರೆ ಆ ತರಹ ನೆನಪಿಟ್ಕೊಂಡು ಹೇಳುವಂಥ ಆಚರಣೆಗಳು ಯಾವುದೂ ಆಗಿಲ್ಲ. ಆದರೆ ಪ್ರತಿ ಸ್ವಾತಂತ್ರ್ಯ ದಿನಾಚರಣೆಯೂ ನೀಡುವ ಸ್ಫೂರ್ತಿ  ಮತ್ತಷ್ಟು ದಿನಗಳಿಗೆ ನಮ್ಮನ್ನು ರಿಚಾರ್ಜ್ ಮಾಡಿದಂತಿರುತ್ತಿತ್ತು. ಈಗಲೂ ಅಷ್ಟೇ, ಅಂದಿನ ದಿನಗಳಲ್ಲಿನಮ್ಮ ಜನ ಕಷ್ಟಪಟ್ಟಿದ್ದರು, ತ್ಯಾಗಬಲಿದಾನ ಮಾಡಿ ಈ ಸ್ವಾತಂತ್ರ್ಯ ಪಡೆದಿದ್ದಾರೆ ಎನ್ನುವ ಒಂದು ನೆನಪೇ ದಿನಾಚರಣೆಗೆ ಇರುವಂಥ ಮಹತ್ವವನ್ನು ನೆನಪಿಸುತ್ತದೆ.

`ಬ್ರಹ್ಮಗಂಟು' ಹೆಚ್ಚಿಸಿತು ಬಣ್ಣದ ನಂಟು- ಹರ್ಷ ಗೌಡ

`ಸುಭಾಷ್ಚಂದ್ರ ಗಾಂಧಿ’ ಎನ್ನುವ ಪಾತ್ರದ ಸೃಷ್ಟಿ ಕೂಡ ಸ್ವಾತಂತ್ರ್ಯ ಭಾರತದ ನೆನಪಿನಿಂದಲೇ ಹುಟ್ಟಿದ್ದಲ್ಲವೇ?

ಒಂದು ರೀತಿಯಲ್ಲಿ ನಿಜ. ಆದರೆ ನನ್ನ ನಿಜವಾದ ಅನಿಸಿಕೆಗಳಿಗೂ, ಅದನ್ನು ನಾನು ಸಿನಿಮೀಯವಾಗಿ ಹೇಳುವ ರೀತಿಗೂ ತುಂಬ ವ್ಯತ್ಯಾಸ ಇರುತ್ತದೆ. ಸಿನಿಮಾದಲ್ಲಿ ಪಾತ್ರದ ಮೂಲಕ ಹೇಳಿದ್ದೇ ನನ್ನ ನಿಜ ಜೀವನದ ಧ್ಯೇಯಗಳಲ್ಲ. ಶಾಲಾ ಪುಸ್ತಕಗಳಲ್ಲಿ ಸ್ವಾತಂತ್ರ್ಯ ಹೊರಾಟಗಾರರ ಬಗ್ಗೆ ಓದಿ ಸ್ಫೂರ್ತಿ ಪಡೆದಿದ್ದೇವೆ. ರೋಮಾಂಚಿತರಾಗಿದ್ದೇವೆ.

`ಪ್ರಜಾಕೀಯ’ದ ಮೂಲಕ ನೀವು ಕಾಣುವ ಸ್ವಾತಂತ್ರ್ಯ ದಿನಾಚರಣೆಯ ಕನಸು ಎಂಥದ್ದು?

ನಾನಲ್ಲ; ನಮ್ಮ ಪಕ್ಷವೇ ಜನಗಳದ್ದು. ಜನರೇ ಇಲೆಕ್ಷನ್, ಕರೆಕ್ಷನ್, ರಿಜೆಕ್ಷನ್ ಎಲ್ಲವನ್ನೂ ಮಾಡುತ್ತಾರೆ. ಈಗ ಬೆಂಗಳೂರಿನಿಂದಲೇ ಶುರು ಮಾಡುವುದಾದರೆ ಬಿಬಿಎಂಪಿಯಲ್ಲಿ ಹತ್ತು ಸಾವಿರ ಕೋಟಿ ಹಣವಿದೆ. ಈಗ ಅದಕ್ಕಿಂತಲೂ ಜಾಸ್ತೀನೆ ಇದೆ; ನಾವು ಅಷ್ಟೇ ಎಂದು ಇಟ್ಟುಕೊಳ್ಳೋಣ. 198 ವಾರ್ಡ್‌ಗಳಿವೆ. ಪ್ರತಿ ವಾರ್ಡ್‌ಗೆ 50 ಕೋಟಿ ಬರುತ್ತೆ. ಐದು ವರ್ಷಕ್ಕೆ 250ಕೋಟಿ ಆಯಿತು. ಬೇರೆ ಯೋಜನೆಗಳಿಗೆ 200 ಕೋಟಿ ಪಕ್ಕಕ್ಕೆ ಎತ್ತಿಡಿ, 50 ಕೋಟಿಯಲ್ಲಿ ಒಂದು ಅದ್ಭುತ ಶಾಲೆ ಮಾಡಬಹುದ? ವಾರ್ಡ್‌ಗೊಂದು ಅಂಥ ಶಾಲೆ ಮಾಡಬೇಕಿರುವುದು ಯಾರ ಅಗತ್ಯ ಹೇಳಿ?   ನಮ್ಮ ನಮ್ಮ ಏರಿಯಾದಲ್ಲಿ ನಾವೇ ಡಿಸಿಶನ್ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಅಂದರೆ ಸ್ವಾತಂತ್ರ್ಯಕ್ಕೆ ಅರ್ಥವೇನು?

Follow Us:
Download App:
  • android
  • ios