ಸುರತ್ಕಲ್‌ನಲ್ಲಿ ನಿರ್ಮಾಣ ಆಗುತ್ತಾ ಸಾವರ್ಕರ್ ಸರ್ಕಲ್? ಶಾಸಕ ಭರತ್ ಶೆಟ್ಟಿ ಆಸೆಗೆ ಬ್ರೇಕ್ ಹಾಕುತ್ತಾ ಸರ್ಕಾರ ?

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಂಗಳೂರು ಉತ್ತರ ಕ್ಷೇತ್ರದಲ್ಲಿ ದೊಡ್ಡ ಚರ್ಚೆಯಾಗಿದ್ದು ಸಾವರ್ಕರ್ ಸರ್ಕಲ್ ವಿಚಾರ. ಸುರತ್ಕಲ್ ಸರ್ಕಲ್ಗೆ ಸಾವರ್ಕರ್ ಹೆಸರಿಡೋದಾಗಿ ಶಪಥ ಮಾಡಿದ್ದ ಶಾಸಕ ಭರತ್ ಶೆಟ್ಟಿ, ಮಂಗಳೂರು ಪಾಲಿಕೆಯಲ್ಲೂ ಹೆಸರು ಪಾಸ್ ಮಾಡಿಸಿದ್ರು. ಆದ್ರೆ ಈಗ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿರೋ ಕಾರಣ ನಗರಾಭಿವೃದ್ಧಿ ಸಚಿವಾಲಯದಲ್ಲಿ ಫೈಲ್ ಮೂಲೆ ಸೇರಿದೆ.

First Published Oct 4, 2023, 10:36 AM IST | Last Updated Oct 4, 2023, 10:36 AM IST

ಸಾವರ್ಕರ್ ವಿಚಾರ ಬಂದ್ರೆ ಪ್ರತಿ ಭಾರಿಯೂ ಮುಗಿ ಬೀಳೋ ಕಾಂಗ್ರೆಸ್ ಪಕ್ಷ ಸದ್ಯ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಹೀಗಿರುವಾಗ ಸರ್ಕಲ್ ಒಂದಕ್ಕೆ ಸಾವರ್ಕರ್ ಹೆಸರಿಡಬೇಕು ಅನ್ನೋ ಪ್ರಸ್ತಾವನೆಯನ್ನ ಸರ್ಕಾರ ಒಪ್ಪುತ್ತಾ? ಇಂತಹ ಒಂದು ಪ್ರಶ್ನೆ ಎದ್ದಿರೋದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಸುರತ್ಕಲ್ ಸರ್ಕಲ್ ವಿಚಾರದಲ್ಲಿ. ಕಳೆದ ವಿಧಾನಸಭಾ ಚುನಾವಣೆ ವೇಳೆ ಮಂಗಳೂರು ಉತ್ತರ ಕ್ಷೇತ್ರದಲ್ಲಿ ಬಹಳಷ್ಟು ಸುದ್ದಿಯಾಗಿ ವಿವಾದ ಸೃಷ್ಟಿಸಿದ್ದು ಕೂಡಾ ಇದೇ ವಿಚಾರ. ಶಾಸಕ ಭರತ್ ಶೆಟ್ಟಿ(Bharath Shetty) ಸುರತ್ಕಲ್ ನಲ್ಲಿ ಸರ್ಕಲ್ (Suratkal circle) ಇಲ್ಲದೇ ಇದ್ರೂ ಸರ್ಕಲ್ ನಿರ್ಮಿಸಿ ಅದಕ್ಕೆ ಸಾವರ್ಕರ್ ಹೆಸರಿಡೋ ಪ್ರಸ್ತಾಪ ಇಟ್ಟಿದ್ದರು. ಕಾಂಗ್ರೆಸ್ ಮತ್ತು ಎಡಪಂಥೀಯರು ಇದಕ್ಕೆ ವಿರೋಧ ಕೂಡ ವ್ಯಕ್ತಪಡಿಸಿದ್ರು. ಆದ್ರೆ ತಮ್ಮ ಪಟ್ಟು ಬಿಡದ ಭರತ್ ಶೆಟ್ಟಿ ಬಿಜೆಪಿ (BJP) ಸರ್ಕಾರದ ಅವಧಿಯಲ್ಲಿ ಸರ್ಕಲ್ ನಾಮಕರಣಕ್ಕೆ ಪಾಲಿಕೆಯಿಂದಲೂ ಅನುಮೋದನೆ ಪಡೆದಿದ್ರು. ಆದ್ರೆ ಅಷ್ಟರಲ್ಲಾಗಲೆ ಸರ್ಕಾರ ಬದಲಾಗಿದ್ದರಿಂದ ಸರ್ಕಲ್ ನಾಮಕರಣ ವಿಚಾರ ನೆನೆಗುದಿಗೆ ಬಿದ್ದಿದೆ. ಸುರತ್ಕಲ್‌ನಲ್ಲಿ ಇಲ್ಲದ ಸರ್ಕಲ್‌ಗೆ ಸಾವರ್ಕರ್ ಹೆಸರಿಡೋ ವಿಚಾರ ಭರತ್ ಶೆಟ್ಟಿ ರಾಜಕೀಯ ಅಜೆಂಡ ಅನ್ನೋ ಆರೋಪ ಜೋರಾಗಿದೆ. ಸರ್ಕಲ್ ನಿರ್ಮಿಸಿ ಹೆಸರಿಡೋದಾದ್ರೆ ಮಾಜಿ ಶಾಸಕ ಸುಬ್ಬಯ್ಯ ಶೆಟ್ಟಿ, ನವ ಮಂಗಳೂರು ನಿರ್ಮಾತೃ ಯು. ಶ್ರೀನಿವಾಸ ಮಲ್ಯ ಸೇರಿದಂತೆ ಸಾಕಷ್ಟು  ಸ್ವಾತಂತ್ರ್ಯ ಹೋರಾಟಗಾರರಿದ್ದಾರೆ. ಅವರ ಹೆಸರಿಡಿ ಅಂತ ಕಾಂಗ್ರೆಸ್ನ ಹಲವು ನಾಯಕರು ಒತ್ತಾಯಿಸಿದ್ದಾರೆ. ಪಾಲಿಕೆಯಲ್ಲಿ ಬಿಜೆಪಿ ಇದ್ರೂ ರಾಜ್ಯದಲ್ಲಿ ಕಾಂಗ್ರೆಸ್ (Congress) ಸರ್ಕಾರ ಇರುವುದರಿಂದ ಭರತ್ ಶೆಟ್ಟಿ ಕನಸು ನನಸಾಗೋದು ಅನುಮಾನ. ಸರ್ಕಾರಕ್ಕೆ ಸಲ್ಲಿಸಿರೋ ಪ್ರಸ್ತಾವನೆ ಅಂಗೀಕಾರ ಆಗೋ ಬಗ್ಗೆ ಅನುಮಾನಗಳಿವೆ. ಹಾಗಂತ ಪ್ರಸ್ತಾವನೆ ತಿರಸ್ಕಾರ ಮಾಡಿದ್ರೂ ಅದಕ್ಕೆ ಸರ್ಕಾರ ಸಕಾರಾತ್ಮಕ ಕಾರಣ ನೀಡಬೇಕಾಗುತ್ತದೆ.

ಇದನ್ನೂ ವೀಕ್ಷಿಸಿ:  ಬೆಂಗಳೂರು ಶಾಲೆಗಳ ವೇಳಾಪಟ್ಟಿ ಬದಲಾಗುತ್ತಾ ? ಸಿಲಿಕಾನ್ ಸಿಟಿ ಸ್ಕೂಲ್ ಬಾಗಿಲು ತೆರೆಯೋದು ಎಷ್ಟೊತ್ತಿಗೆ..?