ಬೆಂಗಳೂರು ಶಾಲೆಗಳ ವೇಳಾಪಟ್ಟಿ ಬದಲಾಗುತ್ತಾ ? ಸಿಲಿಕಾನ್ ಸಿಟಿ ಸ್ಕೂಲ್ ಬಾಗಿಲು ತೆರೆಯೋದು ಎಷ್ಟೊತ್ತಿಗೆ..?

ಶಾಲೆಗಳ ಸಮಯ ಬದಲಾವಣೆಗೆ ಶಿಕ್ಷಣ ‌ಇಲಾಖೆ ಮುಂದಾಗಿದೆ. ಈ ಸಂಬಂಧ ಗುರುವಾರ ಖಾಸಗಿ ಶಾಲಾ ಒಕ್ಕೂಟ ಹಾಗೂ ಪೋಷಕರ ಸಂಘಟನೆ ಜತೆ ಶಿಕ್ಷಣ ಇಲಾಖೆ ಸಭೆ ನಡೆಸೋಕೆ ತೀರ್ಮಾನಿಸಿದೆ. ಆದ್ರೆ ಪೋಷಕ ಸಮನ್ವಯ ಸಮಿತಿ ಮಾತ್ರ ಸಮಯ ಬದಲಾವಣೆಗೆ ಚಕಾರ ಎತ್ತಿದೆ.
 

First Published Oct 4, 2023, 10:23 AM IST | Last Updated Oct 4, 2023, 10:23 AM IST

ರಾಜಧಾನಿ ಬೆಂಗಳೂರು (Bengaluru) ಬೆಳೆಯುತ್ತಾ ಹೋದಷ್ಟು ವಾಹನ ದಟ್ಟಣೆ ಕೂಡ ಹೆಚ್ಚಾಗ್ತಾಯಿದೆ. ಇದರಿಂದ ಶಾಲೆಗೆ ಹೋಗುವ ಮಕ್ಕಳಿಗೂ ಕಿರಿಕಿರಿ ಉಂಟಾಗ್ತಿದ್ದು, ಟ್ರಾಫಿಕ್ನಿಂದ ಮಕ್ಕಳು ಸರಿಯಾದ ಸಮಯಕ್ಕೆ ಶಾಲೆಗೆ ತಲುಪೋದಕ್ಕಾಗ್ತಿಲ್ಲ. ಅಷ್ಟೇ ಅಲ್ಲ ಅತಿ ಹೆಚ್ಚು ಶಾಲಾ ವಾಹನಗಳಗಳಿಂದಲೂ ಸಂಚಾರ ದಟ್ಟಣೆ ಏರಿಕೆಯಾಗಿದೆ ಎಂದು ಶಿಕ್ಷಣ ಇಲಾಖೆ(education department) ಶಾಲೆ ವೇಳಾಪಟ್ಟಿಯನ್ನೇ ಬದಲಾಯಿಸಲು ಚಿಂತನೆ ನಡೆಸಿದೆ. ಕೆಲವು ದಿನಗಳ ಹಿಂದಷ್ಟೇ ಶಾಲಾ ಅವಧಿ(School Timings) ಬದಲಾವಣೆ ‌ಮಾಡಲು ಕೋರ್ಟ್ ಶಿಕ್ಷಣ ಇಲಾಖೆಗೆ ಸೂಚನೆ ನೀಡಿತ್ತು. ಈ ವಿಚಾರವಾಗಿ ಶಿಕ್ಷಣ ‌ಇಲಾಖೆ ಆಯುಕ್ತರು ಹಾಗೂ ಸಚಿವರು ಚರ್ಚೆ ನಡೆಸಲು ನಾಳೆ ಸಭೆ‌ ಕರೆದಿದ್ದಾರೆ. ಸಭೆಯಲ್ಲಿ ಖಾಸಗಿ ಶಾಲಾ‌ ಒಕ್ಕೂಟಗಳಾದ ರುಪ್ಸಾ(Rupsa), ಕ್ಯಾಮ್ಸ್ ಹಾಗೂ ಪೋಷಕ ಸಂಘಟನೆಯ ಸದಸ್ಯರು ಭಾಗಿಯಾಗಲಿದ್ದಾರೆ. ಆದ್ರೆ ಶಾಲಾ ವಾಹನಗಳಿಂದಲೇ ಟ್ರಾಫಿಕ್ ಜಾಮ್ ಆಗ್ತಾ ಇದೆ ಅನ್ನೋದು ಸರಿಯಲ್ಲ. ಶಾಲಾ ಸಮಯ ಬದಲಾವಣೆಗೆ ವಿರೋಧ ಇದೆ ಅಂತಾರೆ ಪೋಷಕ ಸಮನ್ವಯ ಸಮಿತಿಯ ಯೋಗಾನಂದ್. ರಾಜ್ಯಾದ್ಯಂತ ಬಹುತೇಕ ಶಾಲೆಗಳಲ್ಲಿ ಬೆಳಗ್ಗೆ 8.45 ರಿಂದ ಮಧ್ಯಾಹ್ನ 3.30 ರವರೆಗೆ ತರಗತಿಗಳು ನಡೆಯುತ್ತವೆ. ಇದರಲ್ಲಿ ಅರ್ಧತಾಸು ಇಳಿಕೆ ಮಾಡಿದರೆ ಹೇಗೆ ಎಂಬ ಚರ್ಚೆ ಕೂಡ ನಡೆದಿದೆ. ಆದ್ರೆ ಟ್ರಾಫಿಕ್ ‌ಕಡಿಮೆ‌ ಮಾಡುವ ನಿಟ್ಟಿನಲ್ಲಿ ಶಾಲಾ ಅವಧಿ ಬೇಗ ಮಾಡುವುದು ಸರಿಯಲ್ಲ, ಇದರಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ ಎಂದು ಖಾಸಗಿ ಶಾಲಾ ಒಕ್ಕೂಟ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಶಿಕ್ಷಣ ಇಲಾಖೆಗೆ ಸಲಹೆ ನೀಡಿದ್ದಾರೆ.

ಇದನ್ನೂ ವೀಕ್ಷಿಸಿ:  ಇದ್ದಕ್ಕಿದ್ದಂತೆ ಲೈವ್ ಬಂದ ಧ್ರುವ ಸರ್ಜಾ! ಮಾರ್ಟಿನ್ ಟ್ರೈಲರ್ ರಿಲೀಸ್ ಬಗ್ಗೆ ಏನಂದ್ರು?