Asianet Suvarna News Asianet Suvarna News

ಶ್ರೀರಂಗಪಟ್ಟಣದಲ್ಲಿ 'ಹಿಂದೂ' ಶಕ್ತಿ ಪ್ರದರ್ಶನ: ಒಕ್ಕಲಿಗ ಕೋಟೆ ಭೇದಿಸಲು ಹನುಮಾಸ್ತ್ರ

ಮಂಡ್ಯ ರಾಜಕಾರಣದಲ್ಲಿ ಕೇಸರಿ ಸಂಚಲನ ಮೂಡಿಸಿದ್ದು, ಒಕ್ಕಲಿಗ ಪಾಳೇಪಟ್ಟು ಗೆಲ್ಲಲು ಹಿಂದೂ ಹಾಗೂ ಹನುಮನ ಅಸ್ತ್ರದೊಂದಿಗೆ ಅಖಾಡ ಪ್ರವೇಶಿಸಿದೆ ಬಿಜೆಪಿ.

ಇತಿಹಾಸ ಪ್ರಸಿದ್ಧ ಶ್ರೀರಂಗಪಟ್ಟಣದಿಂದ ಕೇಸರಿ ಅಶ್ವಮೇಧಯಾಗ ಶುರುವಾಗಿದೆ. ಹಿಂದುತ್ವದ ಅಸ್ತ್ರ ಹಿಡಿದು ಮಂಡ್ಯ ರಣಾಂಗಣಕ್ಕೆ ನುಗ್ಗಿದೆ ಕೇಸರಿ ಪಡೆ. ಹನುಮ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ಮೂಲಕ ಸಂಚಲನ ಎಬ್ಬಿಸಿದೆ ಹಿಂದೂ ಪಡೆ. ಹಿಂದುತ್ವದ ಅಸ್ತ್ರ, ಹನುಮಾಸ್ತ್ರದ ಮೂಲಕ ಒಕ್ಕಲಿಗರ ಕೋಟೆ ಭೇದಿಸಲು ಹೊರಟಿರುವ ಬಿಜೆಪಿ, ತನ್ನ ಪ್ರಯತ್ನದಲ್ಲಿ ಯಶಸ್ವಿಯಾಗುತ್ತಾ?. ಮಂಡ್ಯ ಜಿಲ್ಲೆ ಹೊಸ ರಾಜಕೀಯ ಕ್ರಾಂತಿಗೆ ಸಾಕ್ಷಿಯಾಗಲಿದ್ಯಾ..? ಈ ಎಲ್ಲಾ ಪ್ರಶ್ನೆಗಳಿಗೆ ಮುಂದಿನ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಉತ್ತರ ಸಿಗಲಿದೆ.

Assembly election: ಬೆಳಗಾವಿಯಲ್ಲಿ ಬಿಜೆಪಿಗೆ ಈಗ ಪಕ್ಷ ಸಂಘಟನೆಯ ತಲ ...