Asianet Suvarna News Asianet Suvarna News

ಸಾ.ರಾ. ಮಹೇಶ್‌ ಪುತ್ರನ ಕಿರಿಕ್‌: ಪತ್ರಕರ್ತನ ಪುತ್ರನ ಜೊತೆ ಡಿಶುಂ ಡಿಶುಂ ..!

ಸಾ.ರಾ. ಮಹೇಶ್‌ ಪುತ್ರ ಹಾಗೂ ಪತ್ರಕರ್ತರೊಬ್ಬರ ಮಗ ಮೈಸೂರಿನಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ.
 

First Published Jun 26, 2023, 12:35 PM IST | Last Updated Jun 26, 2023, 12:35 PM IST

ಮೈಸೂರು: ಮಾಜಿ ಶಾಸಕ ಸಾ.ರಾ. ಮಹೇಶ್‌ ಪುತ್ರ ಪತ್ರಕರ್ತರೊಬ್ಬರ ಮಗನ ಜೊತೆ ಗಲಾಟೆ ಮಾಡಿಕೊಂಡಿದ್ದಾರೆ. ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ. ಇಬ್ಬರು ಕೈಕೈ ಮಿಲಾಯಿಸಿ ಗಲಾಟೆ ಮಾಡಿಕೊಂಡಿದ್ದಾರೆ. ಆದ್ರೆ ಗಲಾಟೆಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದು, ಪರಸ್ಪರ ಮುಚ್ಚಳಿಕೆ ಬರೆಸಿ ಕಳುಹಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಇಬ್ಬರನ್ನೂ ಠಾಣೆಗೆ ಕರೆಸಿ, ಬುದ್ಧಿ ಹೇಳಿ ಪೊಲೀಸರು ಕಳುಹಿಸಿದ್ದಾರೆ. ಕುವೆಂಪು ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ವೀಕ್ಷಿಸಿ: ನಾಲ್ಕು ತಾಸು ಕಾದರೂ ನಿಲ್ಲಿಸದ ಬಸ್‌: ಬೇಸರದಿಂದ ಕಲ್ಲೆಸೆದ ಮಹಿಳೆ..!

Video Top Stories