ನಾಲ್ಕು ತಾಸು ಕಾದರೂ ನಿಲ್ಲಿಸದ ಬಸ್: ಬೇಸರದಿಂದ ಕಲ್ಲೆಸೆದ ಮಹಿಳೆ..!
ಸುಮಾರು ನಾಲ್ಕು ತಾಸಿನಿಂದ ಬಸ್‌ಗೆ ಕಾಯುತಿದ್ದೆ. ಬಸ್‌ಗಳು ನಿಲ್ಲಿಸುವಂತೆ ಕೈ ಮಾಡಿದರೂ ನಿಲ್ಲಸದಿದ್ದಕ್ಕೆ ಬೇಸರವಾಗಿ ಕಲ್ಲೆಸೆದೆ ಎಂದು ಮಹಿಳೆ ಹೇಳಿದ್ದಾರೆ.
ಕೊಪ್ಪಳ: ರಾಜ್ಯದಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸುವ ಶಕ್ತಿ ಯೋಜನೆ ಜಾರಿಯಾದ ನಂತರ ಹಲವು ರೀತಿಯ ಅವಘಡಗಳು ನಡೆಯುತ್ತಿವೆ. ಬಸ್ ನಿಲ್ಲಿಸದ ಹಿನ್ನೆಲೆ ಕಾದು ಕಾದು ಸುಸ್ತಾಗಿ ಮಹಿಳೆಯೊಬ್ಬರು ಬಸ್‌ಗೆ ಕಲ್ಲು ಹೊಡ್ದ ಘಟನೆ ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ನಡೆದಿದೆ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಯಲ್ಲೊಂದಾದ ಶಕ್ತಿ ಯೋಜನೆ ಜಾರಿಯಾದ ಎಫೆಕ್ಟ್ ನಿಂದಾಗಿ ಈಗ ಜನರ ಆಕ್ರೋಶ ವ್ಯಕ್ತವಾಗುತ್ತಿದೆ. ನಾಲ್ಕು ತಾಸು ಕಾಯ್ದರು ಬಸ್ ನಿಲ್ಲಿಸದ ಹಿನ್ನಲೆಯಲ್ಲಿ ಮಹಿಳೆಯೊಬ್ಬರು ಬಸ್‌ಗೆ ಕಲ್ಲೆಸೆದಿದ್ದಾರೆ. ಕೊಪ್ಪಳದಿಂದ-ಹೊಸಪೇಟೆಗೆ ಹೊರಟಿದ್ದ ನಾನ್ ಸ್ಟಾಪ್ ಬಸ್ ಗೆ ಕಲ್ಲೆಸೆದಿದ್ದು, ಬೇಜಾರಿನಿಂದಾಗಿ ತಲೆಕೆಟ್ಟಂತಾಗಿ ಕಲ್ಲು ಎಸೆದೆ ಎಂದು ಮಹಿಳೆ ಹೇಳಿದ್ದಾರೆ. ಇದರಿಂದಾಗಿ ಬಸ್ ಗಾಜು ಪುಡಿಪುಡಿಯಾಗಿದೆ.ಕಲ್ಲು ಎಸೆದ ಹಿನ್ನೆಲೆ ಯಲ್ಲಿ ಬಸ್ ಚಾಲಕ ಹಾಗೂ ನಿರ್ವಾಹಕ ಪ್ಯಾಸೆಂಜರ್ ಸಮೇತ ಬಸ್ ನ್ನು ಮುನಿರಾಬಾದ್ ಪೊಲೀಸ್ ಠಾಣೆಗೆ ತಂದಿದ್ದಾರೆ.ಪಾಪಿನಾಯಕಹಳ್ಳಿಯ ಲಕ್ಷ್ಮಿ ಹಾಗೂ ಆಕೆಯೊಂದಿಗೆ ಇನ್ನೋರ್ವ ಮಹಿಳೆ ಭಾನುವಾರ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ದರ್ಶನಕ್ಕೆ ಬಂದಿದ್ದರು. ಲಕ್ಷ್ಮಿ ತನ್ನ ತವರು ಮನೆ ಇಲಕಲ್ ಗೆ ಹೋಗಬೇಕಾಗಿತ್ತು. ಇದರಿಂದಾಗಿ ಹೊಸಲಿಂಗಾಪುರ ಬಳಿ ಬಸ್‌ಗೆ ಕಾಯುತ್ತಿದ್ದರು.
ಇದನ್ನೂ ವೀಕ್ಷಿಸಿ: ಸಭೆಯಲ್ಲಿ ಸ್ವಪಕ್ಷ ನಾಯಕರ ವಿರುದ್ಧ ಆಕ್ರೋಶ: ವೇದಿಕೆಯಲ್ಲೇ ಬಿಜೆಪಿ ದಿಗ್ಗಜರ ಕೌಂಟರ್ ವಾರ್