
PSI Recruitment Scam: ಪರೀಕ್ಷಾರ್ಥಿಗಳಿಗೆ ಬ್ಲೂಟೂತ್ ಮೂಲಕ ಹೇಗೆ ಸೂಚನೆ ಹೋಗ್ತಿತ್ತು ಗೊತ್ತಾ?
*ಪರೀಕ್ಷಾರ್ಥಿಗಳಿಗೆ ಬ್ಲೂಟೂತ್ ಬಳಸಲು ಟ್ರೇನಿಂಗ್!
*ಬ್ಲೂಟೂತ್ ಮೂಲಕ ಹೇಗೆ ಸೂಚನೆ ಹೋಗ್ತಿತ್ತು ಗೊತ್ತಾ?
ಬೆಂಗಳೂರು (ಏ. 24): ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ (PSI Recruitment Scam) ಬಗೆದಷ್ಟು ಬಂಡವಾಳ ಬಯಲಾಗುತ್ತಿದೆ. ದಿನ ಕಳೆದಂತೆ ಸಿಐಡಿ ತನಿಖೆ ಚುರಕುಗೊಳ್ಳುತ್ತಿದೆ. ತನಿಖೆಯಲ್ಲಿ ಸಿಐಡಿ ಪೊಲೀಸರು ಮಹತ್ವದ ಪ್ರಗತಿ ಸಾಧಿಸಿದ್ದಾರೆ. ಬ್ಲೂಟೂತ್ ಬಳಸಿ ಪರೀಕ್ಷೆಯಲ್ಲಿ ಅಕ್ರಮ ನಡೆಸಲಾಗಿದೆ ಎಂಬ ಸಂಗತಿ ಈಗ ಬೆಳಕಿಗ ಬಂದಿದೆ. ಪರೀಕ್ಷೆಯ ಎರಡು ದಿನ ಮುಂಚೆ ಬ್ಲೂಟೂತ್ ಬಗ್ಗೆ ಪರೀಕ್ಷಾರ್ಥಿಗಳಿಗೆ ಟ್ರೇನಿಂಗ್ ಕೂಡ ನೀಡಲಾಗಿದೆ. ಬ್ಲೂಟೂತ್ ಕಿವಿಯಲ್ಲಿ ಹೇಗೆ ಅಳವಡಿಕೆ ಮಾಡಬೇಕು ಎಂದು ತರಬೇತಿ ನೀಡಲಾಗಿದೆ.
ಇದನ್ನೂ ಓದಿ: PSI ನೇಮಕಾತಿ ಹಗರಣದ ರೂವಾರಿ ಆರ್ ಡಿ ಪಾಟೀಲ್ ಸಿನಿಮೀಯ ಶೈಲಿಯಲ್ಲಿ ಸಿಐಡಿ ಬಲೆಗೆ!
ಕಲುಬುರಗಿಯ ಬಹುತೇಕ ಕೇಂದ್ರಗಳಲ್ಲಿ ಬ್ಲೂಟೂತ್ ಬಳಕೆಯಾಗಿದ್ದು, ಯಾರಿಗೂ ಕಾಣದಂತೆ ಹಾಗೂ ತೆಗೆಯಲಾಗದಂತೆ ಹೇಗೆ ಅಳವಡಿಕೆ ಮಾಡಬೇಕು ಎಂದು ಪರೀಕ್ಷಾರ್ಥಿಗಳಿಗೆ ಟ್ರೇನಿಂಗ್ ನೀಡಲಾಗಿದೆ. ಪರೀಕ್ಷೆ ಆರಂಭವಾಗುತ್ತಿದ್ದಂತೆ ಕೆಮ್ಮುವ ಮೂಲಕ ಅಕ್ರಮ ತಂಡಕ್ಕೆ ಕ್ಲ್ಯೂ ನೀಡಬೇಕು. A, B, C, D ಸೀರಿಸ್ ಪ್ರಶ್ನೆ ಪತ್ರಿಕೆ ಬಂದಿದ್ದರೆ ಕ್ರಮವಾಗಿ ಒಂದು, ಎರಡು, ಮೂರು ಹಾಗೂ ನಾಲ್ಕು ಬಾರಿ ಕೆಮ್ಮುವ ಮೂಲಕ ಸುಳಿವು ನೀಡಬೇಕಿತ್ತು. ಬಳಿಕ ಉತ್ತರಗಳನ್ನು ಬ್ಲೂಟೂತ್ ಮೂಲಕ ಅಭ್ಯರ್ಥಿಗಳಿಗೆ ರವಾನೆ ಮಾಡಲಾಗುತ್ತಿತ್ತು.