
PSI ನೇಮಕಾತಿ ಹಗರಣದ ರೂವಾರಿ ಆರ್ ಡಿ ಪಾಟೀಲ್ ಸಿನಿಮೀಯ ಶೈಲಿಯಲ್ಲಿ ಸಿಐಡಿ ಬಲೆಗೆ!
- ಎಸ್‌ಐ ಪರೀಕ್ಷೆ ಅಕ್ರಮ: ಕಾಂಗ್ರೆಸ್ ಮುಖಂಡನ ಸೋದರ ಅರೆಸ್ಟ್!- ಬ್ಲೂಟೂತ್ ಮೂಲಕ ಪರೀಕ್ಷಾರ್ಥಿಗಳಿಗೆ ನೆರವು- ಕಿಂಗ್‌ಪಿನ್ ರುದ್ರಗೌಡ ಪಾಟೀಲ್ ಸೆರೆ- ಮೊಬೈಲ್ ಲೊಕೇಶನ್ ಪತ್ತೆ ಹಚ್ಚಿ ಸಿಐಡಿ ಪೊಲೀಸರ ಬೇಟೆ
ಬೆಂಗಳೂರು (ಏ. 24): PSI ನೇಮಕಾತಿ ಅಕ್ರಮದ ರೂವಾರಿ ಆರ್ ಡಿ ಪಾಟೀಲ್ ಅಲಿಯಾಸ್ ರುದ್ರಗೌಡ ಸಿಐಡಿಲ್ಲಿ ಸಿಕ್ಕಿದ್ದೇ ರೋಚಕವಾಗಿದೆ.
Add Asianetnews Kannada as a Preferred Source

PSI ನೇಮಕಾತಿ ಹಗರಣ: ಪಾಟೀಲ್ ಬ್ರದರ್ಸ್ ಮನೆಯಲ್ಲಿ ರಾಶಿ ರಾಶಿ ಹಾಲ್ ಟಿಕೆಟ್ ಪತ್ತೆ
ರುದ್ರಗೌಡನ ಆವಾಜ್ನಿಂದ ಸಿಟ್ಟಿಗೆದ್ದಿದ್ದ ಸಿಐಡಿ ತಂಡ ಮೊಬೈಲ್ ಲೊಕೇಷನ್ ಪತ್ತೆ ಹಚ್ಚಿ ಬಂಧನಕ್ಕೆ ಬಲೆ ಬೀಸಿತ್ತು. ಶನಿವಾರ ಮಹಾಂಂತೇಶ್ ಹಾಗೂ ರುದ್ರಗೌಡ ಸಹೋದರರ ನೇತೃತ್ವದಲ್ಲಿ ಅಫಜಲ್ಪುರ ಪಟ್ಟಣದಲ್ಲಿ 101 ಜೋಡಿ ಸಾಮೂಹಿಕ ವಿವಾಹ ಸಮಾರಂಭ ಆಯೋಜಿಸಲಾಗಿತ್ತು. ಈ ಸಮಾರಂಭದಲ್ಲಿ ರುದ್ರಗೌಡ ಪಾಲ್ಗೊಳ್ಳಲು ಪಾಲ್ಗೊಳ್ಳಬಹುದೆಂದು ಸಿಐಡಿ ಇಲ್ಲೂ ನಿಗಾ ಇಟ್ಟಿತ್ತು. ಅಫಜಲ್ಪುರ ಪೊಲೀಸರೂ ಸಮಾರಂಭದಲ್ಲಿ ಗಸ್ತಿನಲ್ಲಿ ಭಾಗಿಯಾಗಿದ್ದರು. ಈ ಮಧ್ಯೆ, ಮೊಬೈಲ್ ಲೊಕೇಶನ್ ಆಧಾರದ ಮೇರೆಗೆ ರುದ್ರಗೌಡ ಮಹಾರಾಷ್ಟ್ರದ ಸೊಲ್ಲಾಪುರ ಆಸುಪಾಸಲ್ಲಿರುವುದನ್ನು ಖಚಿತಪಡಿಸಿಕೊಂಡು ಶನಿವಾರ ಖೆಡ್ಡಾಗೆ ಬೀಳಿಸುವಲ್ಲಿ ಯಶಸ್ವಿಯಾಯಿತು.