Hindu Activist Murder: ಪೊಲೀಸರು ಎಸಗಿರುವ ಆರೋಪದ ಬಗ್ಗೆಯೂ ತನಿಖೆ: ಗೃಹ ಸಚಿವ ಆರಗ ಜ್ಞಾನೇಂದ್ರ!
*ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ಶಿವಮೊಗ್ಗ ಶಾಂತ
*ನಗರದಾದ್ಯಂತ 144 ಸೆಕ್ಷನ್ ಮುಂದುವರಿಕೆ
*ಪೊಲೀಸರ ಮೇಲೂ ತನಿಖೆಗೆ ಆದೇಶ: ಗೃಹ ಸಚಿವ
ಶಿವಮೊಗ್ಗ (ಫೆ. 23): ಬಜರಂಗದಳ ಕಾರ್ಯಕರ್ತ ಹರ್ಷ ಬರ್ಬರ (Harsha Murder) ಹತ್ಯೆ ನಂತರ ಎರಡು ದಿನ ವ್ಯಾಪಕ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ಶಿವಮೊಗ್ಗ (Shivamogga) ನಗರ ಸದ್ಯಕ್ಕೆ ಶಾಂತವಾಗಿದೆ. ನಗರದಲ್ಲಿ ಕರ್ಫ್ಯೂ ಜಾರಿಯಲ್ಲಿದ್ದು, ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದೆ. ಈ ಮಧ್ಯೆ ಶಿವಮೊಗ್ಗ ಕೋಟೆ ದೊಡ್ಡಪೇಟೆ ಪೊಲೀಸರ ವಿರುದ್ಧ ತನಿಖೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಆದೇಶ ನೀಡಿದ್ದಾರೆ.
ಇದನ್ನೂ ಓದಿ: Harsha Murder Case: ಹಂತಕರನ್ನು ಹುಡುಕಿ ಹುಡುಕಿ ಗಲ್ಲಿಗೇರಿಸಲಾಗುತ್ತೆ: ತೇಜಸ್ವಿ ಸೂರ್ಯ
"5 ವರ್ಷದ ಮಾಹಿತಿ ನೀಡಲು ಡಿಜಿಗೆ ಪತ್ರ ಬರೆದಿದ್ದೇನೆ. ಪೊಲೀಸರು ಎಸಗಿರುವ ಆರೋಪದ ಬಗ್ಗೆ ತನಿಖೆ ನಡೆಯುತ್ತೆ. ಈವರೆಗೆ ಎಂಟು ಆರೋಪಿಗಳನ್ನು ಬಂಧಿಸಿದ್ದೇವೆ. ಆರೋಪಿಗಳ ವಿರದ್ಧ ಹಲವಾರಯ ಅಪರಾಧ ಪ್ರಕರಣಗಳಿವೆ" ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಅಲ್ಲದೇ ಶಿವಮೊಗ್ಗದಾದ್ಯಂತ 144 ಸೆಕ್ಷನ್ ಮುಂದುವರೆಯುತ್ತೆ ಎಂದು ತಿಳಿಸಿದ್ದಾರೆ.