Harsha Murder Case: ಹಂತಕರನ್ನು ಹುಡುಕಿ ಹುಡುಕಿ ಗಲ್ಲಿಗೇರಿಸಲಾಗುತ್ತೆ: ತೇಜಸ್ವಿ ಸೂರ್ಯ

ದುಷ್ಕರ್ಮಿಗಳ ಕೈಯಲ್ಲಿ ಬರ್ಬರವಾಗಿ ಹತ್ಯೆಗೀಡಾದ ಬಜರಂಗದಳದ ಕಾರ್ಯಕರ್ತ ಹರ್ಷನ (Harsha) ಕುಟುಂಬಕ್ಕೆ ಸಾಂತ್ವನ ಹೇಳಲು ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳ ನಾಯಕರ ದಂಡು ಮನೆಯತ್ತ ಹರಿದುಬರುತ್ತಿದೆ. ಸಂಸದ ತೇಜಸ್ವಿ ಸೂರ್ಯ (Tejasvi Surya) ಹರ್ಷ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. 

First Published Feb 23, 2022, 1:38 PM IST | Last Updated Feb 23, 2022, 1:41 PM IST

ಬೆಂಗಳೂರು (ಫೆ. 23): ದುಷ್ಕರ್ಮಿಗಳ ಕೈಯಲ್ಲಿ ಬರ್ಬರವಾಗಿ ಹತ್ಯೆಗೀಡಾದ ಬಜರಂಗದಳದ ಕಾರ್ಯಕರ್ತ ಹರ್ಷನ (Harsha) ಕುಟುಂಬಕ್ಕೆ ಸಾಂತ್ವನ ಹೇಳಲು ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳ ನಾಯಕರ ದಂಡು ಮನೆಯತ್ತ ಹರಿದುಬರುತ್ತಿದೆ. ಸಂಸದ ತೇಜಸ್ವಿ ಸೂರ್ಯ ಹರ್ಷ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. 

Shivamogga: ನನ್ನ ಮಗ ತಪ್ಪು ಮಾಡಿಲ್ಲ, ಸುಮ್ಮನೆ ಅರೆಸ್ಟ್ ಮಾಡಿದ್ದಾರೆ: ಬಂಧಿತನ ತಾಯಿ ಆರೋಪ

'ಹರ್ಷನದ್ದು ಮರ್ಡರ್ ಅಲ್ಲ, ಇದು ಭಯೋತ್ಪಾದಕ ಕೃತ್ಯ. ಹೀಗೆ ಮೊಕದ್ದಮೆ ದಾಖಲಿಸಬೇಕು. ರಾಜ್ಯದಲ್ಲಿರೋದು ಹಿಂದುತ್ವದ ಚಿಂತನೆ ಇರುವ ಸರ್ಕಾರ. ಈ ಕೃತ್ಯದ ಹಿಂದಿರುವವರನ್ನು ಸರ್ಕಾರ ಹುಡುಕಿ ಹುಡುಕಿ ಗಲ್ಲಿಗೇರಿಸುವ ಕೆಲಸ ಸರ್ಕಾರ ಮಾಡುತ್ತೆ' ಎಂದು ತೇಜಸ್ವಿ ಸೂರ್ಯ ಜನರನ್ನುದ್ದೇಶಿಸಿ ಮಾತನಾಡಿದರು.