Asianet Suvarna News Asianet Suvarna News

ವಿಶ್ವದ ಗಮನ ಸೆಳೆದ ಕೋಲಾರದ ಬಾಲಕ.. ಭಾರತದ ಕೀರ್ತಿ ಪತಾಕೆ ಹಾರಿಸಿದ ಪೋರ !

ಜಾಗತಿಕ ಮಟ್ಟದಲ್ಲಿ ಭಾರತೀಯರ ಬುದ್ಧಿವಂತಿಕೆ ಬಗ್ಗೆ ಸಾಬೀತಾಗ್ತಿದೆ. ಪ್ರತಿ ಕ್ಷೇತ್ರದಲ್ಲೂ ಒಂದಲ್ಲ ಒಂದು ಸಾಧನೆ ಮಾಡುತ್ತಾ ಭಾರತದ ಕೀರ್ತಿ ಪತಾಕೆ ಹಾರಿಸುತ್ತಿದ್ದಾರೆ. ಇದಕ್ಕೆ ಮತ್ತೊಂದು ಸಾಕ್ಷಿ ಎಂಬಂತೆ ಕೋಲಾರ ಮೂಲದ 12 ವರ್ಷ ವಯಸ್ಸಿನ ಬಾಲಕ ವಿಶ್ವದ ಗಮನ ಸೆಳೆದಿದ್ದಾನೆ. 

ಪ್ರಶಸ್ತಿಗಳ ಸುರಿಮಳೆ, 23 ದೇಶಗಳ ಮುಂದೆ ತ್ರಿವರ್ಣ ಧ್ವಜ ಹಾರಿಸಿದ ಪುಟ್ಟ ಪೋರ.12ನೇ ವಯಸ್ಸಿಗೆ ವಿಶ್ವವನ್ನೇ ಗೆದ್ದ ಕುವರ.ಕೋಲಾರದ(kolar) ಅಚಿಂತ್ ಸಾಧನೆಗೆ ಇಡೀ ದೇಶವೇ ಫಿದಾ ಅಚಿಂತ್(Achinth). 7ನೇ ತರಗತಿ ವಿದ್ಯಾರ್ಥಿ. ಕೋಲಾರ ನಗರದ ದೊಡ್ಡಪೇಟೆ ನಿವಾಸಿಗಳಾದ ಡಾ.ಹರ್ಷಿತಾ-ಅಮಿತ್ ದಂಪತಿ ಪುತ್ರ..  ವಯಸ್ಸು ಈಗನ್ನೂ 12 ವರ್ಷ.. ಆದರೆ, ಈತನ ಸ್ಮರಣ ಶಕ್ತಿ ಮಾತ್ರ ಅಗಾಧ. ಅದೆಷ್ಟರ ಮಟ್ಟಿಗೆ ಅಂದ್ರೆ ನೆನಪಿನ ಶಕ್ತಿಯಲ್ಲಿ ವಿಶ್ವವನ್ನೇ ಗೆದ್ದಿದ್ದಾನೆ. ವರ್ಲ್ಡ್ ಮೆಮೊರಿ ಚಾಂಪಿಯನ್ ಶಿಪ್‌(World Memory Championship) ಸ್ಪರ್ಧೆಯಲ್ಲಿ 23 ದೇಶಗಳ ಸ್ಪರ್ಧಿಗಳ ಪೈಕಿ ದ್ವಿತೀಯ ಸ್ಥಾನ ಪಡೆದು ಭಾರತದ(India) ಕೀರ್ತಿ ಪತಾಕೆ ಹಾರಿಸಿದ್ದಾನೆ. ಮುಂಬೈನ CIDEO ಎಕ್ಸಿಬಿಷನ್ ಸೆಂಟರ್‌ನಲ್ಲಿ ವರ್ಲ್ಡ್ ಮೆಮೊರಿ ಚಾಂಪಿಯನ್ ಶಿಪ್‌ ನಡೆಯಿತು. 3 ದಿನಗಳ ಈ ಸ್ಪರ್ಧೆಯಲ್ಲಿ ಸ್ಪೋಕನ್ ನಂಬರ್ಸ್, ನೇಮ್ಸ್ & ಫೇಸಸ್ ಸೇರಿ 10 ರೌಂಡ್ಸ್ಗಳನ್ನ ಕೆಲವೇ ಸೆಕೆಂಡ್ಗಳಲ್ಲಿ ಕ್ಲಿಯರ್ ಮಾಡಿದ್ದಾನೆ.  ಈ ಮೂಲಕ 10 ಪದಕಗಳನ್ನು ಗೆಲ್ಲುವ ಮೂಲಕ ಚಾಂಪಿಯನ್ ಶಿಪ್ನಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾನೆ. ವಿವಿಧ 23 ದೇಶಗಳು, 750 ಸ್ಪರ್ಧಿಗಳು  ಭಾಗವಹಿಸಿದ್ದರು.. ಅದರಲ್ಲಿ ಅಚಿಂತ್ ದ್ವಿತೀಯ ಸ್ಥಾನ ಪಡೆದಿದ್ದಾನೆ . 7ನೇ ತರಗತಿ ಓದುತ್ತಿರುವ ಅಚಿಂತ್ ಚಿಕ್ಕ ವಯಸ್ಸಿನಲ್ಲಿ ಮಾಡಿದ ಈ ದೊಡ್ಡ ಸಾಧನೆ ಪೋಷಕರಿಗೂ ಸಂತಸ ನೀಡಿದೆ.7ನೇ ತರಗತಿಯಲ್ಲಿ ಓದುತ್ತಿರುವ ಅಚಿಂತ್ ಶಾಲೆಯಲ್ಲೂ ಈತನೇ ಫಸ್ಟ ಅಂತೆ.. ಈಗ ಜಾಗತಿಕ ಸ್ಪರ್ಧೆಯಲ್ಲೂ ಗೆದ್ದು ಬೀಗಿದ್ದಾನೆ. ವಿಶೇಷ ಅಂದ್ರೆ ಈ ಸ್ಪಧೆಐಲ್ಲಿ 10ರಿಂದ 60 ವರ್ಷ ವಯಸ್ಸಿನ ವರೆಗಿನ ಸ್ಪರ್ಧಿಗಳು ಇದ್ದರು.. ಅವರೆಲ್ಲರನ್ನೂ ಹಿಂದಿಕ್ಕಿ ಅಚಿಂತ್ 1 ಚಿನ್ನ, 5 ಬೆಳ್ಳಿ ಹಾಗೂ 4 ಕಂಚಿನ ಪದಕಗಳನ್ನು ಗೆದ್ದು, ಅಂತಾರಾಷ್ಟ್ರೀಯ ನೆನಪಿನ ಶಕ್ತಿಯ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿ ವಿಶ್ವ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.

ಇದನ್ನೂ ವೀಕ್ಷಿಸಿ:  ಗ್ಯಾರಂಟಿ ಗದ್ದಲದ ನಡುವೆ ಹಳ್ಳ ಹಿಡಿತಾ ಅನುಗ್ರಹ ಯೋಜನೆ ? ತಮ್ಮ ಸಮುದಾಯವನ್ನೇ ಮರೆತ್ರಾ ಸಿಎಂ?

Video Top Stories