ತಾಯಿ ಮನೆ ಸೇರಬೇಕಾದವಳು ಸಾವಿನ ಮನೆ ಸೇರಿದಳು..ಬೆಸ್ಕಾಂ ನಿರ್ಲಕ್ಷ್ಯಕ್ಕೆ ತಾಯಿ, 9 ತಿಂಗಳ ಮಗು ಸಾವು

ಬೆಸ್ಕಾಂ ನಿರ್ಲಕ್ಷ್ಯಕ್ಕೆ ಬೆಂಗಳೂರಿನಲ್ಲಿ ತಾಯಿ- ಮಗಳ ಸಾವು
ವೈಟ್ ಫೀಲ್ಡ್‌ನ ಕಾಡುಗೋಡಿ ಪೊಲೀಸ್‌ ಠಾಣೆಯಲ್ಲಿ ಘಟನೆ
ರಸ್ತೆ ಬದಿ ಕಟ್ ಆಗಿ ನೆಲದಲ್ಲಿ ಬಿದ್ದಿದ್ದ ಕರೆಂಟ್ ವೈಯರ್

First Published Nov 19, 2023, 11:45 AM IST | Last Updated Nov 19, 2023, 11:45 AM IST

ಬೆಂಗಳೂರು: ಕೆಆರ್ ಪುರ ಬೆಸ್ಕಾಂ ಅಧಿಕಾರಿಗ(Bescom) ಬೇಜವಾಬ್ದಾರಿತನಕ್ಕೆ ಹೋಪ್ ಫಾರಂ ಸರ್ಕಲ್‌ನಲ್ಲಿ  ತಾಯಿ ಮಗು ಸುಟ್ಟು ಕರಕಲಾಗಿದ್ದಾರೆ. ಕಾಡುಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ಹೋಪ್ ಫಾರ್ಮ್ ಬಳಿ ಹೃದಯ ವಿದ್ರಾವಕ ಘಟನೆ ನಡೆದಿದೆ. ಬೆಸ್ಕಾಂ ವಯರ್ ಕಟ್(Current Wire) ಆಗಿ ಫುಟ್ ಪಾತ್ ಮೇಲೆ ಬಿದ್ದಿದ್ದು, ಇದನ್ನು ದುರಸ್ತಿ ಮಾಡದೆ ನಿರ್ಲಕ್ಷ್ಯವಹಿಸಿದ್ದಾರೆ. ಬೆಳಗ್ಗೆ  5:30ರ ಸುಮಾರಿಗೆ ತಾಯಿ ಮಗಳು ಫುಟ್ ಪಾತ್ ಮೇಲೆ ತೆರಳುತ್ತಿದ್ದಾಗ ವೈಯರ್‌ ತುಳಿಯಲಾಗಿದೆ. ಪ್ರವಾಸ ಹೋಗಿ ಬಂದು ಬಸ್‌ಗಾಗಿ  ನಿಂತಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಕಾಡುಗುಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೌಂದರ್ಯ (23), 9 ತಿಂಗಳ ಮಗು ಲೀಲಾ ಸಾವಿಗೀಡಾಗಿದೆ. ತಮಿಳುನಾಡಿನಿಂದ ಬೆಂಗಳೂರಿನ ಮನೆಗೆ ತಾಯಿ ಮಗಳು ಬರುತ್ತಿದ್ದರು. ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಸ್ಕಾಂ ಅಧಿಕಾರಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಇದನ್ನೂ ವೀಕ್ಷಿಸಿ:  Worldcup 2023: ವಿಶ್ವದ ದೊಡ್ಡ ಸ್ಟೇಡಿಯಂನಲ್ಲಿ 'ವಿಶ್ವ' ಯುದ್ಧ! ಈ ರಣಕಾಳಗ ಗೆಲ್ಲೋರು ಯಾರು ?

Video Top Stories