Asianet Suvarna News Asianet Suvarna News

Worldcup 2023: ವಿಶ್ವದ ದೊಡ್ಡ ಸ್ಟೇಡಿಯಂನಲ್ಲಿ 'ವಿಶ್ವ' ಯುದ್ಧ! ಈ ರಣಕಾಳಗ ಗೆಲ್ಲೋರು ಯಾರು ?

ಸತತ 10 ಪಂದ್ಯ ಗೆದ್ದು ಭಾರತ ಅಜೇಯವಾಗಿದ್ದು, ಇಂದು ಆಸ್ಟ್ರೇಲಿಯಾ ಜೊತೆ ಫೈನಲ್‌ ಪಂದ್ಯವನ್ನು ಆಡಲಿದೆ.
 

First Published Nov 19, 2023, 11:25 AM IST | Last Updated Nov 19, 2023, 11:25 AM IST

ಕೆಲವೇ ಗಂಟೆಗಳಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ(Australia) ಕ್ರಿಕೆಟ್‌ ಕಾಳಗ ನಡೆಯಲಿದೆ. ವಿಶ್ವದ ದೊಡ್ಡ ಸ್ಟೇಡಿಯಂನಲ್ಲಿ 'ವಿಶ್ವ' ಯುದ್ಧ ನಡೆಯಲಿದೆ. ರೋಹಿತ್‌ ಶರ್ಮಾ(Rohit Sharma) ಮತ್ತು ಕಮಿನ್ಸ್‌(cummins) ತಂಡದ ಮಧ್ಯೆ ಫೈನಲ್‌ ಪಂದ್ಯ(Final Match) ನಡೆಯಲಿದೆ. ಆರಂಭ ಪಂದ್ಯದಲ್ಲೂ ಆಸೀಸ್‌ ಮತ್ತು ಭಾರತ ಆಡಿದ್ದು, ಈಗ ಫೈನಲ್‌ನಲ್ಲೂ ಅದೇ ಎರಡೂ ತಂಡಗಳು ಆಡುತ್ತಿವೆ. ಸತತ 10 ಪಂದ್ಯ ಗೆದ್ದು ಭಾರತ ಅಜೇಯವಾಗಿದೆ.ಭಾರತ ನಾಲ್ಕನೇ ಬಾರಿಗೆ ವಿಶ್ವಕಪ್‌ ಫೈನಲ್‌ಗೆ ತಲುಪಿದೆ. ಆಸೀಸ್‌ ತಂಡ ಎಂಟನೇ ವಿಶ್ವಕಪ್‌ ಫೈನಲ್‌ ತಲುಪಿದೆ. ಇನ್ನೂ ಗುಜರಾತ್‌ ಅಹಮದಾಬಾದ್‌ನ ಮೋದಿ ಸ್ಟೇಡಿಯಂನಲ್ಲಿ ಕ್ರಿಕೆಟ್‌ ಅಭಿಮಾನಿಗಳು ತುಂಬಿ ತುಳುಕುತ್ತಿದ್ದಾರೆ. ಮೋದಿ ಸ್ಟೇಡಿಯಂ ಸುತ್ತ ಭಾರೀ ಭದ್ರತೆ, ಖಾಕಿ ಕಣ್ಗಾವಲು ಹೆಚ್ಚಿಸಲಾಗಿದೆ. 

ಇದನ್ನೂ ವೀಕ್ಷಿಸಿ:  ದೇವರ ಮೂರ್ತಿ ಅಗೆದು ನಿಧಿಗಾಗಿ ಶೋಧ: ವಿಗ್ರಹ ಕೆಡವಿ ನಾಲ್ಕು ಅಡಿ ಗುಂಡಿ ತೋಡಿದ ಕಳ್ಳರ ಗ್ಯಾಂಗ್

Video Top Stories