'ನಾನು ಅಜ್ಜಿ ಆಗುತ್ತಿದ್ದೇನೆ': ನಾಚಿ ನೀರಾದ ಲಕ್ಷ್ಮೀ ಹೆಬ್ಬಾಳ್ಕರ್‌

ನೀವು ನಗಬೇಡಿ, ನನಗೆ ನಾಚಿಕೆ ಆಗುತ್ತೆ. ನಾನು ಅಜ್ಜಿ ಆಗುತ್ತಿದ್ದೇನೆ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದರು.

Share this Video
  • FB
  • Linkdin
  • Whatsapp

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ನಯನಾ ಮೋಟಮ್ಮ ಅವರು, ಮಹಿಳೆಯರಿಗಾಗಿ ಆಶಾಕಿರಣ ಕಾರ್ಯಕ್ರಮ ಆಯೋಜಿಸಿದ್ದರು. ಅವಧೂತ ವಿನಯ್ ಗುರೂಜಿ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಭಾಗವಹಿಸಿದ್ದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹೆಬ್ಬಾಳ್ಕರ್, ವಿನಯ್ ಗೂರೂಜಿ ಹೇಳಿದಂತೆ ಆಗುತ್ತೆ ಎಂದರು. ನನ್ನ ಸೊಸೆ ಮನೆಯಲ್ಲಿ ಸೀಮಂತಕ್ಕೆ ಬರುತ್ತೇನೆ ಎಂದಿದ್ದರು, ಆಗ ನಮಗೆ ಏನೂ ಗೊತ್ತಿರಲಿಲ್ಲ. ಅವರು ಹೇಳಿದ ಮೂರೇ ದಿನಕ್ಕೆ ಸೊಸೆ ಕನ್ಸೀವ್ ಆಗಿದ್ದಳು ಎಂದು ಹೇಳಿ, ವೇದಿಕೆ ಮೇಲೆ ಸೊಸೆ ಸೀಮಂತಕ್ಕೆ ವಿನಯ್ ಗುರೂಜಿಗೆ ಆಹ್ವಾನ ನೀಡಿದರು. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಜೊತೆ ಗಟ್ಟಿಯಾಗಿ ನಿಲ್ಲುತ್ತೇವೆ. ನಿಮ್ಮ ಹಿರಿಯಕ್ಕನಾಗಿ ಮುಂಬರುವ ದಿನಗಳಲ್ಲಿ ನಿಮ್ಮ ಸೇವೆಯನ್ನು ಮಾಡುತ್ತೇನೆ ಎಂದು ಹೇಳಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred


ನಾನು ಹಳೆಯ ಕರ್ನಾಟಕ ಭಾಗದ ಬ್ರಾಹ್ಮಣರನ್ನು ದೂಷಿಸಲ್ಲ: ಕುಮಾರಸ್ವಾಮಿ

Related Video