ನಾನು ಹಳೆಯ ಕರ್ನಾಟಕ ಭಾಗದ ಬ್ರಾಹ್ಮಣರನ್ನು ದೂಷಿಸಲ್ಲ: ಕುಮಾರಸ್ವಾಮಿ

ಬಿಜೆಪಿ ಅಧಿಕಾರಕ್ಕೆ ಬಂದ್ರೆ ಬ್ರಾಹ್ಮಣ ಮುಖ್ಯಮಂತ್ರಿ ಎಂಬ ಹೇಳಿಕೆಗೆ ಬದ್ಧ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.

Share this Video
  • FB
  • Linkdin
  • Whatsapp

ಕುಮಾರಸ್ವಾಮಿ 'ಬ್ರಾಹ್ಮಣ ಸಿಎಂ' ಹೇಳಿಕೆಗೆ ಬಿಜೆಪಿಯಿಂದ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ನನ್ನ ಹೇಳಿಕೆಗೆ ನಾನು ಈಗಲೂ ಬದ್ಧ ಎಂದು ಅವರು ತಿಳಿಸಿದ್ದಾರೆ. ಶೃಂಗೇರಿಯ ಚಂದ್ರಮೌಳೇಶ್ವರ ದೇವಾಲಯ ಒಡೆದವರು ಪೇಶ್ವೆಗಳು, ಶಿವಾಜಿಯನ್ನು ಕೊಂದವರು ಪೇಶ್ವೆ ವಂಶಕ್ಕೆ ಸೇರಿದವರು. ನಾನು ಹಳೆಯ ಕರ್ನಾಟಕ ಭಾಗದ ಬ್ರಾಹ್ಮಣರನ್ನು ದೂಷಿಸಲ್ಲ . ನಮ್ಮಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದು, ಅವರನ್ನು ನಾನು ಎಂದು ದೂಷಿಸಲ್ಲ. ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರವನ್ನು ಮಾಡಿದ್ದೇನೆ ಎಂದರು. ಬಿಜೆಪಿ ಸರ್ಕಾರ ಇಂದು ಸಾವರ್ಕರ್ ಹಾಗೂ ಟಿಪ್ಪು ಬಗ್ಗೆ ಏನು ಚರ್ಚೆ ಮಾಡುತ್ತಿದೆ. ಬಿಜೆಪಿಯವರೇ ನನಗೆ ಈ ಕುರಿತು ಮಾಹಿತಿ ನೀಡಿದ್ದು, ನಾನು ಸುಮ್ನೆ ಸುಳ್ಳು ಹೇಳುತ್ತಿಲ್ಲ ಎಂದು ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜೋಶಿ ಜಾತಿಯ ಬಗ್ಗೆ ಹೆಚ್‌ಡಿಕೆಗೆ ಮಾಹಿತಿ ಕೊರತೆಯಿದೆ: ಸಿ.ಟಿ ರವಿ ವಾಗ್ದಾಳಿ


Related Video