ಹಂಪಿ ಉತ್ಸವದಲ್ಲಿ ಗಾಯಕನಿಗೆ ಅವಮಾನ: ಕೈಲಾಶ್‌ ಖೇರ್‌ ಮೇಲೆ ಬಾಟಲಿ ಎಸೆತ

ಹಂಪಿ ಉತ್ಸವ ಸಮಾರೋಪ ಸಮಾರಂಭದಲ್ಲಿ ಗಾಯಕ ಕೈಲಾಸ್ ಖೇರ್ ಮೇಲೆ ಕಿಡಿಗೇಡಿಗಳು ಬಾಟಲಿ ಎಸೆದಿದ್ದಾರೆ.

Share this Video
  • FB
  • Linkdin
  • Whatsapp

ಹಂಪಿ ಉತ್ಸವದ ಸಮಾರೋಪ ಸಮಾರಂಭದಲ್ಲಿ, ಕನ್ನಡ ಹಾಡುಗಳನ್ನು ಹಾಡಲಿಲ್ಲವೆಂದು ಪದ್ಮಶ್ರೀ ಪುರಸ್ಕೃತ ಗಾಯಕ ಕೈಲಾಸ್ ಖೇರ್ ಮೇಲೆ ಬಾಟಲಿ ಎಸೆಯಲಾಗಿದೆ. ಪೇಕ್ಷಕರ ಗ್ಯಾಲರಿಯಿಂದ ನೀರಿನ ಬಾಟಲಿ ಎಸೆದು ಅವಮಾನ ಮಾಡಲಾಗಿದ್ದು, ಗಾಯತ್ರಿ ಪೀಠದ ವೇದಿಕೆಯಲ್ಲಿ ತಡರಾತ್ರಿವರೆಗೂ ನಡೆದ ಕಾರ್ಯಕ್ರಮದಲ್ಲಿ ಘಟನೆ ನಡೆದಿದೆ. ಇನ್ನು ಬಾಟಲಿ ಎಸೆದ ಮೇಲೂ ಗಾಯನ ಮುಂದುವರಿಸಿ ಕೈಲಾಸ್ ಖೇರ್, ಪ್ರೌಢತೆ ಮೆರೆದಿದ್ದಾರೆ. ಈ ಕುರಿತು ಇಬ್ಬರನ್ನು ಬಂಧಿಸಲಾಗಿದ್ದು, ಅವರ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ.

Related Video