Mandya: ಪೊಲೀಸ್‌ ಠಾಣೆಯಲ್ಲೇ ಪೊಲೀಸ್‌ ಕಾನ್ಸ್‌ಸ್ಟೇಬಲ್‌ ಕೆನ್ನೆಗೆ ಬಾರಿಸಿದ ಆರೋಪಿ!

ಮಂಡ್ಯ ಜಿಲ್ಲೆಯ ಪಾಂಡವಪುರ ಠಾಣೆಯಲ್ಲಿ ವಿಚಾರಣೆಗೆ ಬಂದ ವ್ಯಕ್ತಿಯೊಬ್ಬ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಠಾಣೆಗೆ ಬಂದಿದ್ದ ಸಾಗರ್ ಎಂಬಾತ ಪೊಲೀಸ್ ಕಾನ್ಸ್‌ಟೇಬಲ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ.

Share this Video
  • FB
  • Linkdin
  • Whatsapp

ಮಂಡ್ಯ (ಡಿ.28): ಪೊಲೀಸ್‌ ಠಾಣೆಯಲ್ಲೇ ಪೊಲೀಸ್‌ ಮೇಲೆ ಹಲ್ಲೆಯಾಗಿದೆ. ವಿಚಾರಣೆಗೆ ಬಂದವನೇ ಪೊಲೀಸರ ಮೇಲೆ ಗೂಂಡಾಗಿರಿ ತೋರಿದ್ದಾರೆ. ಮಂಡ್ಯ ಜಿಲ್ಲೆಯ ಪಾಂಡವಪುರ ಟೌನ್ ಠಾಣೆಯಲ್ಲಿ ಘಟನೆ ನಡೆದಿದೆ.

Add Asianetnews Kannada as a Preferred SourcegooglePreferred

ಸಾಗರ್ ಪೊಲೀಸ್ ಸಿಬ್ಬಂದಿಗಳ ಮೇಲೆ ಅವಾಜ್ ಹಾಕಿ ಹಲ್ಲೆ ನಡೆಸಿದ ಭೂಪ. ಜಮೀನು ವಿವಾದದ ಸಂಬಂಧ ಸಾಗರ್ ವಿರುದ್ದ ದೂರು ದಾಖಲಾಗಿತ್ತು. ದೂರಿನ ಹಿನ್ನಲೆಯಲ್ಲಿ ಪೊಲೀಸರು ಸಾಗರ್‌ನನ್ನು ಠಾಣೆಗೆ ಕರೆಸಿದ್ದರು. ಈ ವೇಳೆ ಸಾಗರ್ ಪೊಲೀಸರಿಗೆ ಅವಾಜ್ ಹಾಕಿದ್ದಾನೆ.

ನಿವೇದಿತಾ ಗೌಡ VS ಜ್ಯೋತಿ ರೈ: ಹಾಟ್‌ನೆಸ್‌ನಲ್ಲಿ ಯಾರು ಬೆಸ್ಟ್‌!

ಮಾತಿಗೆ ಮಾತು ಬೆಳೆಯುತ್ತಿದ್ದಂತೆ ಪೊಲೀಸ್‌ ಕಾನ್ಸ್‌ಸ್ಟೇಬಲ್‌ ಅಭಿಷೇಕ್‌ ಕೈ ಮಾಡಿದ್ದಾನೆ. ಪೇದೆ ಕೈ ಮಾಡ್ತಿದ್ದಂತೆ ಸಾಗರ್ ನಿಂದ ಪ್ರತಿದಾಳಿಯಾಗಿದೆ. ಹಲ್ಲೆ ನಡೆಸಿದ್ದಲ್ಲದೇ ಕುತ್ತಿಗೆ ಪಟ್ಟಿ ಹಿಡಿದು ಗೂಂಡಾಗಿರಿ ಮಾಡಿದ್ದಾರೆ. ಪೊಲೀಸರಿಗೆ ಹಲ್ಲೆ ನಡೆಸಿ ಪರಾರಿಯಾಗ್ತಿದ್ದ ಸಾಗರ್‌ನನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿದ್ದಾರೆ.

Related Video