ನಿವೇದಿತಾ ಗೌಡ VS ಜ್ಯೋತಿ ರೈ: ಹಾಟ್‌ನೆಸ್‌ನಲ್ಲಿ ಯಾರು ಬೆಸ್ಟ್!
ಸೋಶಿಯಲ್ ಮೀಡಿಯಾದಲ್ಲಿ ಜ್ಯೋತಿ ರೈ ಮತ್ತು ನಿವೇದಿತಾ ಗೌಡ ಅವರ ಹಾಟ್‌ನೆಸ್ ಬಗ್ಗೆ ಚರ್ಚೆ ನಡೆಯುತ್ತಿದೆ. ಇಬ್ಬರೂ ನಟಿಯರು ಆಗಾಗ್ಗೆ ಹಾಟ್ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ, ಇದು ಪರ ಮತ್ತು ವಿರೋಧದ ಕಾಮೆಂಟ್‌ಗಳಿಗೆ ಕಾರಣವಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಒಮ್ಮೊಮ್ಮೆ ಇಲ್ಲಸಲ್ಲದ ವಿಚಾರಗಳು ಚರ್ಚೆ ಆಗ್ತಾನೆ ಇರ್ತವೆ. ಈಗ ಜ್ಯೋತಿ ರೈ ಹಾಗೂ ನಿವೇದಿತಾ ಗೌಡ ನಡುವೆ ಹಾಟ್‌ನೆಸ್‌ನಲ್ಲಿ ಯಾರು ಬೆಸ್ಟ್ ಅನ್ನೋ ಚರ್ಚೆ ಶುರುವಾಗಿದೆ. ಇಬ್ಬರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ದಿನಂಪ್ರತಿ ಎನ್ನುವಂತೆ ಹಾಟ್ ಹಾಟ್ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇಬ್ಬರ ಪ್ರತಿ ಪೋಸ್ಟ್‌ಗಳಿಗೂ ಪರ ವಿರೋಧದ ಕಾಮೆಂಟ್‌ಗಳೂ ಬರುತ್ತಲೇ ಇರುತ್ತವೆ. 40ರ ವಯಸ್ಸಿನಲ್ಲೂ ಜ್ಯೋತಿ ರೈ ತಮ್ಮ ಮಾದಕ ನೋಟಕ್ಕೆ ಹೆಸರುವಾಸಿಯಾಗಿದ್ದರೆ, ನಿವೇದಿತಾ ಗೌಡಗೆ ಇನ್ನು 25ರ ಆಸುಪಾಸು. ಇಬ್ಬರೂ ಕೂಡ ಮೊದಲ ಮದುವೆಯಲ್ಲಿ ವೈಫಲ್ಯವನ್ನು ಕಂಡವರು. ಆದರೆ, ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮಾದಕ ಫೋಟೋಗಳ ಕಾರಣಕ್ಕಾಗಿ ಯಶಸ್ಸನ್ನು ಉಂಡವರು.
ಹೊಸ ವರ್ಷದ ಸಂಭ್ರಮಕ್ಕಾಗಿ ನಿವೇದಿತಾ ಗೌಡ ಸದ್ಯ ಥಾಯ್ಲೆಂಡ್ ಟ್ರಿಪ್‌ನಲ್ಲಿದ್ದಾರೆ. ಪ್ರತಿದಿನ ಎನ್ನುವಂತೆ ಅವರ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದು, ದಿನಗಳು ಕಳೆದ ಹಾಗೆ ಅವರ ಡ್ರೆಸ್ ಕೂಡ ಚಿಕ್ಕದಾಗುತ್ತಿದೆ. ಶನಿವಾರ ಮತ್ತೊಮ್ಮೆ ಶಾರ್ಟ್ ಡ್ರೆಸ್‌ನಲ್ಲಿ ರೀಲ್ಸ್ ಹಂಚಿಕೊಂಡಿರುವ ನಿವೇದಿತಾ ಗೌಡ 'ಗುಡ್ ಹೇರ್ ಡೇ..' ಎಂದು ಬರೆದುಕೊಂಡಿದ್ದಾರೆ. ಹೆಚ್ಚಿನವರು ಆಕೆಯ ಅಂದ ಹಾಗೂ ಮಾದಕತೆಯನ್ನು ಹೊಗಳಿದ್ದರೆ, ಇನ್ನೂ ಕೆಲವರು ಕಾಲೆಳೆಯುವ ಕಾಮೆಂಟ್ ಮಾಡಿದ್ದಾರೆ.
'ನೀವು ಮಿಸ್ ಆಗಿ ಚಿಕ್ಕ ಮಗು ಬಟ್ಟೆ ಹಾಕಿಕೊಂಡು ಬಂದಿರಬೇಕು, 500 ರೂಪಾಯಿ ಫೋನ್ ಪೇ ಮಾಡ್ತೀನಿ, ದೊಡ್ಡವರ ಬಟ್ಟೆ ತಗೋ..' ಎಂದು ಒಬ್ಬರು ಬರೆದಿದ್ದರೆ, 'ಇತ್ತೀಚೆಗೆ ನೀವು ಬರೀ ಇದನ್ನೇ ತೋರಿಸೋದು ಜಾಸ್ತಿ ಆಯ್ತು....ಅದರ ಬದಲು ಮೈ ತುಂಬಾ ಬಟ್ಟೆ ತೊಟ್ಟು ತೋರಿಸು ತಾಯಿ..' ಎಂದು ಮಹಿಳಾ ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. 'ಪಾಪ ಎಸ್ಟೊಂದು ಬಡತನ. ಚಿಕ್ಕ ಮಕ್ಕಳ ಬಟ್ಟೆನೂ ಬಿಡಲ್ವ. ಎಲ್ಲರೂ ದುಡ್ಡು ಹಾಕ್ರಪ್ಪ. ದೊಡ್ಡ ಬಟ್ಟೆ ಕೊಡಿಸೋಣ..' ಎಂದು ಕಾಮೆಂಟ್ ಬರೆದಿದ್ದಾರೆ. 'ಮೊದಲೆಲ್ಲಾ ನಿಮ್ಮ ಡ್ರೆಸಿಂಗ್ ಸೆನ್ಸ್ ಬಹಳ ಉತ್ತಮವಾಗಿರುತ್ತಿತ್ತು. ಇತ್ತೀಚೆಗೆ ಯಾಕೋ ನೀವು ಎಕ್ಸ್‌ಪೋಸ್ ಮಾಡೋಕೋಸ್ಕರವೇ ಚಿಕ್ಕ ಬಟ್ಟೆ ಹಾಕಿಕೊಳ್ಳುತ್ತಿರುವ ರೀತಿ ಕಾಣ್ತಿದೆ' ಎಂದು ಬರೆದಿದ್ದಾರೆ.
ಕಿಲ್ಲಿಂಗ್ ಫೋಟೋ ಹಂಚಿಕೊಂಡ ಜ್ಯೋತಿ ರೈ: ಇನ್ನೊಂದೆಡೆ ಸೀರಿಯಲ್ ನಟಿ, ಸದ್ಯ ಹೈದರಾಬಾದ್‌ನಲ್ಲೇ ಕುಟುಂಬ ನೋಡಿಕೊಂಡು ಬ್ಯೂಸಿಯಾಗಿರುವ ಜ್ಯೋತಿ ರೈ ಕೂಡ ಇಂಥದ್ದೇ ಎಕ್ಸ್‌ಪೋಸ್ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಶನಿವಾರ ಎರಡು ಫೋಟೋವನ್ನು ಪೋಸ್ಟ್ ಮಾಡಿ, ಇದರಲ್ಲಿ ಒಂದು ಸೆಲೆಕ್ಟ್ ಮಾಡಿ ಎಂದಿದ್ದು, ಇದಕ್ಕೂ ಕೂಡ ಸಖತ್ ಕಾಮೆಂಟ್‌ಗಳು ಬಂದಿವೆ. ಹೆಚ್ಚಿನವರು ಆಕೆಯ ಎದೆಯ ಮೇಲಿನ ಟ್ಯಾಟೂ ಮೇಲೆಯೇ ಕಣ್ಣಿಟ್ಟಿದ್ದಾರೆ. ನೀವಂತೂ ಪ್ರತಿ ಫೋಟೋದಲ್ಲೂ ಸಖತ್ ಹಾಟ್ ಆಗಿ ಕಾಣ್ತೀರಿ ಎಂದು ಬರೆದಿದ್ದಾರೆ. ನಿಮ್ಮ ಫೋಟೋಗಿಂತ ನೀವು ಹಾಕಿರುವ ಟ್ಯಾಟೂ ಹಾಗೂ ಲಾಕೆಟ್ ಬಹಳ ಅದೃಷ್ಟ ಹೊಂದಿದೆ ಅನ್ನೋದು ಗೊತ್ತಾಗ್ತಿದೆ ಎಂದು ಕಿಚಾಯಿಸಿದ್ದಾರೆ.