ಮಹಾಲಕ್ಷ್ಮಿ ಲೇಔಟ್ ಸಂಭ್ರಮ: ಘಮಘಮ ಖಾದ್ಯಗಳು..ಖಾದ್ಯಪ್ರಿಯರು ಫುಲ್‌ ಖುಷ್‌

ವೀಕೆಂಡ್ ಬಂದ್ರೆ ಸಾಕು ಸಿಲಿಕಾನ್ ಸಿಟಿ ಮಂದಿ ಎಲ್ಲಿಗೆ ಹೋಗದಪ್ಪಾ ಅಂತಾ ಹೊಸ ಹೊಸ ಪ್ಲಾನ್ ಮಾಡ್ತಾರೆ. ಅದರಲ್ಲೂ ಆಹಾರ ಪ್ರಿಯರಂತೂ ಎಂಜಾಯ್ಮೆಂಟ್ ಜೊತೆಗೆ ವಿವಿಧ ಬಗೆಯ ತಿಂಡಿ ತಿನಿಸು ಸವಿಯಲು ಇಷ್ಟಪಡ್ತಾರೆ. ಅಂತವರಿಗಾಗಿಯೇ ಮಹಾಲಕ್ಷ್ಮಿ ಲೇಔಟ್ ಸಂಭ್ರಮ ಆಯೋಜಿಸಲಾಗಿದೆ.
 

Share this Video
  • FB
  • Linkdin
  • Whatsapp

ಒಂದೆಡೆ ದಾವಣಗೆರೆ ಬೆಣ್ಣೆ ದೋಸೆ, ಮೇಲುಕೋಟೆ ಪುಲಿಯೋಗರೆ,ಚಳಿಗೆ ಬಿಸಿ ಬಿಸಿ ಬಜ್ಜಿ, ಅವರೆಕಾಳು ದೋಸೆ, ಉಪ್ಪಿಟ್ಟು, ಮಶ್ರೂಮ್ ಬಿರಿಯಾನಿ, ಶಿಮ್ಲಾ ಮಿರ್ಚಿ ಬಜ್ಜಿ ಇನ್ನೊಂಡೆದೆ ವೆರೈಟಿ ವೆರೈಟಿ ಫುಡ್ ಟೆಸ್ಟ್ ಮಾಡ್ತಿರೋ ಮಂದಿ. ಒಂದಕ್ಕಿಂತಲೂ ಒಂದು ತಿಂಡಿ ಸೂಪರೋ ಸೂಪರ್‌. ನೋಡ್ತಿದ್ರೆ ಹಾಗೇ ಬಾಯಲ್ಲಿ ನೀರುರಿಸುತ್ತೆ. ಹೌದು ಮಹಾಲಕ್ಷ್ಮಿ ಲೇಔಟ್ ನ(Mahalakshmi Layout) ಸುತ್ತಮುತ್ತಲಿನ ಸಾರ್ವಜನಿಕರಿಗಾಗಿ ಏಷ್ಯಾನೆಟ್ ಸುವರ್ಣನ್ಯೂಸ್ ಮತ್ತು ಕನ್ನಡಪ್ರಭ ವತಿಯಿಂದ ಮಹಾಲಕ್ಷ್ಮಿ ಲೇಔಟ್ ಸಂಭ್ರಮ(Mahalakshmi Layout Celebration) ಆಯೋಜಿಸಲಾಗಿದೆ. ಮಹಾಲಕ್ಷ್ಮಿ ಲೇಔಟ್ ನ ನಾಗಪುರ ವಾರ್ಡ್ ನಲ್ಲಿರುವ ರಾಣಿ ಅಬ್ಬಕ್ಕ ಗ್ರೌಂಡ್ ನಲ್ಲಿ ಆಯೋಜಿಸಿರುವ ಸಂಭ್ರಮದಲ್ಲಿ ವಿವಿಧ ಬಗೆಯ ಆಹಾರ ಪದಾರ್ಥಗಳ ಜೊತೆಗೆ ಫ್ಯಾಷನ್ ಗೆ(Fashion) ಸಂಬಂಧಪಟ್ಟ ವಸ್ತುಗಳನ್ನಾ ಅನಾವರಣಗೊಳಿಸಲಾಗಿದೆ.‌ ಮೂರು ದಿನಗಳ ಕಾಲ ನಡೆಯುವ ಸಂಭ್ರಮಕ್ಕೆ ನಟಿ ಪ್ರಣೀತ ಸುಭಾಷ್ ಹಾಗೂ ಮಹಾಲಕ್ಷ್ಮಿ ಲೇಔಟ್ ಶಾಸಕ ಗೋಪಾಲಯ್ಯ ಚಾಲನೆ ನೀಡಿದ್ರು. ಇನ್ನು ಮಹಾಲಕ್ಷ್ಮಿ ಲೇಔಟ್ ಸಂಭ್ರಮದಲ್ಲಿ ಶಾಸಕ ಗೋಪಾಲಯ್ಯ , ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ಹೇಮಲತ ಗೋಪಾಲಯ್ಯ, ಮಾಜಿ ಉಪಮೇಯರ್ ಎಸ್.ಹರೀಶ್ ಸೇರಿದಂತೆ ಇನ್ನಿತರರು ಭಾಗಿಯಾಗಿದ್ರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ಆಕಾರ ಬದಲಿಸಿತಾ ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳ ಮರಳಿನ ಮೂರ್ತಿ..!

Related Video