ಆಕಾರ ಬದಲಿಸಿತಾ ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳ ಮರಳಿನ ಮೂರ್ತಿ..!

ಮರಳಿನಲ್ಲಿ ನಿರ್ಮಾಣವಾದ ಮೂರ್ತಿ ಆಕಾರ ಬದಲಿಸೋದಕ್ಕೆ ಸಾಧ್ಯವಾ? ಸಾಧ್ಯವೇ ಇಲ್ಲ. ಆದ್ರೆ ಗುಮ್ಮಟನಗರಿ ವಿಜಯಪುರದಲ್ಲಿ ಗಣೇಶ ಮಂಡಳಿಯೊಂದು ನಿರ್ಮಿಸಿದ ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳ ಮರಳಿನ ಮೂರ್ತಿ ಆಕಾರ ಬದಲಿಸಿ ಅವರ ಗುರುಗಳಾದ ವೇದಾಂತ ಕೇಸರಿ ಮಲ್ಲಿಕಾರ್ಜುನ ಶ್ರೀ ಆಕಾರ ಪಡೆದಿದೆ ಎನ್ನುವ ಮಾತುಗಳು ಕೇಳಿ ಬರ್ತಿವೆ.
 

First Published Sep 23, 2023, 11:32 AM IST | Last Updated Sep 23, 2023, 11:32 AM IST

ಮರಳಿನಲ್ಲಿ ಅತ್ಯದ್ಭುತವಾಗಿ ನಿರ್ಮಾಣಗೊಂಡಿರುವ ಜ್ಞಾನಯೋಗಿ, ನಡೆದಾಡುವ ದೇವರು ಎಂದು ಕರೆಯಿಸಿಕೊಂಡ ಸಿದ್ದೇಶ್ವರ ಶ್ರೀಗಳ(Siddeshwar Sri) ಮೂರ್ತಿ. ಇದನ್ನು ನೋಡಲು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದಾರೆ. ಜ್ಞಾನ ಯೋಗಿ ಸಿದ್ದೇಶ್ವರ ಶ್ರೀಗಳು ನಮ್ಮನ್ನ ಅಗಲಿ ಸರಿಸುಮಾರು  9 ತಿಂಗಳುಗಳೇ ಕಳೆದು ಹೋಗಿವೆ. ಈಗಲು ಸಿದ್ದೇಶ್ವರ ಶ್ರೀಗಳ ನೆನಪು ಎಲ್ಲರ ಮನದಲ್ಲಿ ಹಚ್ಚಹಸಿರಾಗಿದೆ. ಈ ನಡುವೆ ವಿಜಯಪುರ (vijayapura)ನಗರದ ಶಾಪೇಟೆಯ ಗಣೇಶ ಮಂಡಳಿಯೊಂದು ಸಿದ್ದೇಶ್ವರ ಶ್ರೀಗಳನ್ನ ಮರಳಿನಲ್ಲಿ ಅರಳಿಸಿದೆ. ಆದ್ರೆ ಮೂರ್ತಿ ನಿರ್ಮಾಣದ ಆರಂಭದಲ್ಲಿ ಸಿದ್ದೇಶ್ವರ ಶ್ರೀಗಳ ಆಕಾರವನ್ನ ಹೋಲುತ್ತಿತ್ತು. ಬಳಿಕ ಈಗ ಸಿದ್ದೇಶ್ವರ ಶ್ರೀಗಳ ಮೂರ್ತಿ ಆಕಾರ ಬದಲಿಸಿಕೊಂಡಿದ್ದು, ಅವರ ಗುರುಗಳಾದ ವೇದಾಂತ ಕೇಸರಿ ಮಲ್ಲಿಕಾರ್ಜುನ ಸ್ವಾಮೀಜಿಗಳ ಆಕಾರದಲ್ಲಿ ಕಾಣ್ತಿದೆ ಎನ್ನುವ ಅಭಿಪ್ರಾಯಗಳ ವ್ಯಕ್ತವಾಗ್ತಿವೆ. ಮರಳಿನ ಮೂರ್ತಿ ವೀಕ್ಷಿಸಿಲು ಬರ್ತಿರೋ ಭಕ್ತರು ಒಂದು ಭಾಗದಲ್ಲಿ ನಿಂತು ನೋಡಿದ್ರೆ ಅದು ಸಿದ್ದೇಶ್ವರ ಶ್ರೀಗಳ ಗುರುಗಳಾದ ಮಲ್ಲಿಕಾರ್ಜುನ ಸ್ವಾಮೀಜಿಗಳಂತೆ(Mallikarjuna Swamiji) ಕಾಣ್ತಿದೆ ಎನ್ತಿದ್ದಾರಂತೆ. ಸಿದ್ದೇಶ್ವರ ಶ್ರೀಗಳು ನಿಧನಕ್ಕೂ ಮುನ್ನ ತಾವು ಬರೆದಿಟ್ಟ ವಿಲ್‌ ನಂತೆ ಯಾರು ಸಹ ಅವರ ಮೂರ್ತಿ ನಿರ್ಮಾಣ ಮಾಡಬಾರದು, ಗದ್ದುಗೆ ಕಟ್ಟಬಾರದು, ಅಸ್ಥಿತ್ವ ಕಾಪಾಡುವ ಪ್ರಯತ್ನ ಮಾಡಬಾರದು ಎಂದಿದ್ದರು. ಆದ್ರೆ ಈಗ ಶಾಪೇಟೆಯ ಗಣೇಶ ಮಂಡಳಿ ಮುಂದುವರೆದು ಸಿದ್ದೇಶ್ವರ ಶ್ರೀಗಳ ಮರಳಿನ ಮೂರ್ತಿ ನಿರ್ಮಾಣ ಮಾಡಿದೆ.

ಇದನ್ನೂ ವೀಕ್ಷಿಸಿ:  Podcast: ಇಸ್ರೋ ಅಧ್ಯಕ್ಷ ಸೋಮನಾಥ್‌ರಿಂದ ಚಂದ್ರಯಾನ -3 ಯಶೋಗಾಥೆ