Asianet Suvarna News Asianet Suvarna News

Udupi News: ಇದು ಅನಾಕೊಂಡಾ ಅಲ್ಲ..ಬೃಹತ್‌ ಗಾತ್ರದ ಕಾಳಿಂಗ !

ಉಡುಪಿಯಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪ ಕಂಡು ಬಂದಿದ್ದು, ಡಾ.ಪಿ.ಗೌರಿ ಶಂಕರ್ ನೇತೃತ್ವದ ತಂಡ ರಕ್ಷಿಸಿದೆ.
 

ಉಡುಪಿಯ(Udupi) ಹೆಬ್ರಿ ಹತ್ತಿರದ ಸೀತಾ ನದಿ ತೀರದ ನಡಪಾಲ್‌ ಗ್ರಾಮದಲ್ಲಿ ಹಿಂದೆಂದೂ ಕಂಡಿರದ ಬೃಹತ್ ಗಾತ್ರದ ಕಾಳಿಂಗವನ್ನು ಕಂಡು ಜನ ಬೆಚ್ಚಿ ಬಿದ್ದಿದ್ದಾರೆ. ಇದೇ ಭಾನುವಾರ ಅಂತಹ ಒಂದು ದೈತ್ಯ ಆಕಾರದ ಕಾಳಿಂಗ ಸರ್ಪ(King Cobra) ಬಂದಾಗ ಡಾ.ಪಿ.ಗೌರಿ ಶಂಕರ್(Dr. P. Gauri Shankar) ನೇತೃತ್ವದ ತಂಡ ತಕ್ಷಣ ರಕ್ಷಣಾ ಸ್ಥಳಕ್ಕೆ ಧಾವಿಸಿ ಕಾಳಿಂಗ ಸರ್ಪಗಳನ್ನು ರಕ್ಷಿಸಿದ್ದಾರೆ. ಅವರು ಈಗಾಗಲೇ 500ಕ್ಕೂ ಹೆಚ್ಚು ಕಾಳಿಂಗ ಸರ್ಪಗಳನ್ನ ರಕ್ಷಿಸುವುದರಲ್ಲಿ ಯಶಸ್ವಿಯಾಗಿದ್ದು, ಕಾಳಿಂಗದ ಮರಿಗಳನ್ನು ಸುರಕ್ಷಿತವಾಗಿ ಮತ್ತೆ ಕಾಡಿಗೆ(Forest) ಮರಳಿ ಬಿಟ್ಟಿದ್ದಾರೆ. ಡಾ.ಪಿ.ಗೌರಿ ಶಂಕರ್ ರವರು ಇಷ್ಟು ವರ್ಷಗಳ ಕಾಲ ಕಾಳಿಂಗಗಳ ರಕ್ಷಣೆ ಮತ್ತು ಅಧ್ಯಯನದಲ್ಲಿ, ಇಲ್ಲಿಯವರೆಗೆ ರಕ್ಷಿಸಿದ ಎಲ್ಲಾ ಕಾಳಿಂಗಗಳಿಗಿಂತ ಇದು ಭಿನ್ನವಾಗಿದೆ. ಸಾಮಾನ್ಯವಾಗಿ, ಕಾಳಿಂಗಗಳ ಸರಾಸರಿ ಹೆಣ್ಣು ಕಾಳಿಂಗ ತೂಕ 2 ರಿಂದ 3.5 ರಷ್ಟು ಹಾಗೂ ಗಂಡು ಕಾಳಿಂಗ 3.5 ರಿಂದ 6 ಕೆಜಿಯಷ್ಟಿರುತ್ತದೆ, ನಾನು ಸುಮಾರು 7 ಕೆಜಿ ವರೆಗಿನ ಕಾಳಿಂಗಗಳನ್ನೂ ರಕ್ಷಿಸಿದ್ದೇನೆ, ಆದರೆ ಇಂದು, ನಾನು ನಡಪಾಲ್ ನಲ್ಲಿ ರಕ್ಷಿಸಿದ ಈ ಗಂಡು ಕಾಳಿಂಗವು 12.5 ಕೆಜಿ ತೂಕವನ್ನು ಹೊಂದಿದ್ದು, ನಾನು ರಕ್ಷಿಸಿದ ಕಾಳಿಂಗಗಳಲ್ಲೇ ಅತ್ಯಂತ ಭಾರವಾದದ್ದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ವೀಕ್ಷಿಸಿ:  ಅಂದು ಪಟ್ಟ ಕಟ್ಟಿದ ಇಂದಿರಾ, ಕಿತ್ತುಕೊಂಡಿದ್ದೇಕೆ? ರಾಷ್ಟ್ರ ರಾಜಕಾರಣ ಬದಲಿಸಿತ್ತು ಪೃಥ್ವಿ ವಲ್ಲಭನ 'ಕ್ರಾಂತಿರಂಗ'?

Video Top Stories