ಕೈಕೊಟ್ಟ ಮುಂಗಾರು, ಬರಿದಾದ ಕಬಿನಿ ಜಲಾಶಯ: ಮುಳುಗಡೆಯಾದ ದೇವಸ್ಥಾನದ ಕುರುಹು ಪತ್ತೆ
ಈ ವರ್ಷ ಮುಂಗಾರು ಕೈಕೊಟ್ಟ ಹಿನ್ನೆಲೆ ಕಬಿನಿ ಜಲಾಶಯ ಬರಿದಾಗಿದ್ದು, ಸಣ್ಣ ಕೆರೆಯಂತೆ ಕಾಣುತ್ತಿದೆ. ಅಲ್ಲದೇ ಮುಳುಗಡೆಯಾಗಿದ್ದ ಪುರಾತನ ದೇವಾಲಯದ ಕುರುಹು ಪತ್ತೆಯಾಗಿದೆ.
ಮೈಸೂರು: ಮುಂಗಾರು ಕೈಕೊಟ್ಟ ಹಿನ್ನೆಲೆ ಕಬಿನಿ ಜಲಾಶಯ ಬರಿದಾಗಿದ್ದು, 2,224 ಅಡಿ ಜಲಾಶಯದಲ್ಲಿ ಕೇವಲ 50 ಅಡಿ ನೀರು ಮಾತ್ರ ಇದೆ. ಜಲಾಶಯದಲ್ಲಿ ನೀರಿಲ್ಲದ ಹಿನ್ನೆಲೆ ಮುಳುಗಡೆಯಾಗಿದ್ದ ಪುರಾತನ ದೇವಾಲಯದ ಕುರುಹು ಪತ್ತೆಯಾಗಿದೆ. ಸುಮಾರು ಹತ್ತು ವರ್ಷಗಳ ನಂತರ ಮತ್ತೆ ದೇವಸ್ಥಾನ ಕಾಣಿಸಿಕೊಂಡಿದೆ. 2013 ರಲ್ಲಿ ಬರಗಾಲ ಬಂದಿದ್ದು, ಈ ವೇಳೆ ದೇವಸ್ಥಾನ ಕಾಣಿಸಿಕೊಂಡಿತ್ತು. 2013ರಲ್ಲಿ ಸಿದ್ದರಾಮಯ್ಯ ಅವರೇ ಸಿಎಂ ಆಗಿದ್ದರು. ಈಗ ಮತ್ತೆ ಅವರೇ ಸಿಎಂ ಆಗಿದ್ದು, ಬರಗಾಲ ಎದುರಾಗುವ ಭೀತಿ ಇದೆ. ಜುಲೈ ತಿಂಗಳು ಬಂದರೂ, ಜಲಾಶಯಕ್ಕೆ ಒಂದು ಹನಿ ನೀರು ಸಹ ಬಂದಿಲ್ಲ. ಈ ಜಲಾಶಯದ ನೀರನ್ನು ಮೈಸೂರು, ಚಾಮರಾಜನಗರ, ಬೆಂಗಳೂರು, ಮಂಡ್ಯದ ಜನ ಈ ನೀರನ್ನ ಕುಡಿಯಲು ಬಳಕೆ ಮಾಡುತ್ತಾರೆ. ಇದೇ ಪರಿಸ್ಥಿತಿ ಮುಂದುವರೆದರೇ, ಜನ ನೀರಿಗಾಗಿ ಪರದಾಡುವ ಪರಿಸ್ಥಿತಿ ಬರಲಿದೆ.
ಇದನ್ನೂ ವೀಕ್ಷಿಸಿ: Panchanga: ಇಂದು ಶನಿಪ್ರದೋಷ ದಿನ: ಪೂಜಾ ವಿಧಾನ ಹೇಗೆ ಮತ್ತು ಫಲಗಳೇನು?