ಮುಂಗಾರು ಮಳೆ ಅವಾಂತರ: ಕೊಚ್ಚಿ ಹೋಗುತ್ತಿದ್ದ ಬೈಕ್‌ ಸವಾರನ ರಕ್ಷಿಸಿದ ಗ್ರಾಮಸ್ಥರು

ಧಾರವಾಡದ ಅಣ್ಣಾವರದ ಕಂಬಾರ ಗಣವಿ ಬ್ರಿಡ್ಜ್‌ ಮೇಲೆ ನೀರು ಹರಿಯುತ್ತಿದ್ದು, ಸೇತುವೆ ದಾಟಲು ಹೋದ ಬೈಕ್‌ ಸವಾರ ಕೊಚ್ಚಿ ಹೋಗುತ್ತಿದ್ದಾಗ ಆತನನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ.
 

Share this Video
  • FB
  • Linkdin
  • Whatsapp

ಧಾರವಾಡ: ಜಿಲ್ಲೆಯಲ್ಲಿ ವರುಣನ(Rain) ಅಬ್ಬರಕ್ಕೆ ಜನರು ತತ್ತರಿಸಿ ಹೋಗಿದ್ದು, ಬ್ರಿಡ್ಜ್‌ಗಳು ಮುಳುಗಿ ಹೋಗಿವೆ. ಇಲ್ಲಿನ ಅಣ್ಣಾವರದ ಕಂಬಾರ ಗಣವಿ ಬ್ರಿಡ್ಜ್‌ ಮೇಲೆ ನೀರು ಹರಿಯುತ್ತಿದೆ. ಹೀಗಿದ್ದರೂ ಬೈಕ್‌ ಸವಾರನೊಬ್ಬ(Bike Rider) ದಾಟಲು ಯತ್ನಿಸಿದ್ದಾನೆ. ಆತ ನೀರಿನ ರಭಸಕ್ಕೆ ತೇಲಿಕೊಂಡು ಹೋಗುತ್ತಿದ್ದಾಗ, ಸಾರ್ವಜನಿಕರು ರಕ್ಷಿಸಿದ್ದಾರೆ. ಬ್ರಿಡ್ಜ್‌(Bridge) ಮೇಲೆ ನೀರು ಹರಿಯುತ್ತಿರುವುದರಿಂದ ಶಾಲಾ-ಕಾಲೇಜಿಗೆ ಹೋಗುವ ಮಕ್ಕಳು ಪರದಾಡುವಂತಾಗಿದೆ. ಬಳಿಕ ಟ್ರ್ಯಾಕ್ಟರ್‌, ಜೆಸಿಬಿ ಮೂಲಕ ಮಕ್ಕಳನ್ನು ದಾಟಿಸಲಾಗಿದೆ. ಧಾರವಾಡ ಜಿಲ್ಲೆಯಾದ್ಯಾಂತ ಕಳೆದ ಎರಡು ಮೂರು ದಿನಗಳಿಂದ ಉತ್ತಮವಾಗಿ ಮಳೆ ಆಗುತ್ತಿದೆ.ನಿರಂತರ ಮಳೆಯಿಂದಾಗಿ ವಿವಿಧ ಗ್ರಾಮಗಳಲ್ಲಿನ ಕೆಲವು ಮನೆಗಳಿಗೆ ಭಾಗಶಃ ಹಾನಿಯಾದ ಬಗ್ಗೆ ವರದಿಯಾಗಿದೆ.

ಇದನ್ನೂ ವೀಕ್ಷಿಸಿ: ಪೋಷಕರೇ ಮಕ್ಕಳಿಗೆ ಚಾಕೋಲೆಟ್‌ ಕೊಡಿಸುವ ಮುನ್ನ ಎಚ್ಚರ..!: ಪುಟ್ಟ ಕಂದಮ್ಮಗಳ ಕೈ ಸೇರುತ್ತಿದೆಯಾ ಡ್ರಗ್ಸ್‌..?

Related Video