ಪೋಷಕರೇ ಮಕ್ಕಳಿಗೆ ಚಾಕೋಲೆಟ್‌ ಕೊಡಿಸುವ ಮುನ್ನ ಎಚ್ಚರ..!: ಪುಟ್ಟ ಕಂದಮ್ಮಗಳ ಕೈ ಸೇರುತ್ತಿದೆಯಾ ಡ್ರಗ್ಸ್‌..?

ಮಂಗಳೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, 100 ಕೆಜಿ ಡ್ರಗ್ಸ್‌ ಮಿಶ್ರಿತ ಚಾಕೋಲೆಟ್‌ನನ್ನು ವಶಕ್ಕೆ ಪಡೆದು, ಇಬ್ಬರನ್ನು ಬಂಧಿಸಿದ್ದಾರೆ.
 

Share this Video
  • FB
  • Linkdin
  • Whatsapp

ಮಂಗಳೂರು: ಪೋಷಕರೇ ನೀವು ನಿಮ್ಮ ಮಕ್ಕಳಿಗೆ ಚಾಕೋಲೆಟ್‌ನನ್ನು(Chocolate) ಕೊಡಿಸುವ ಮುನ್ನ ಎಚ್ಚರ ವಹಿಸುವುದು ತುಂಬಾ ಅವಶ್ಯಕವಾಗಿದೆ. ಏಕೆಂದರೆ ಚಾಕೋಲೆಟ್ ರೂಪದಲ್ಲಿ ಡ್ರಗ್ಸ್‌ (Drugs) ನಿಮ್ಮ ಮಕ್ಕಳ ಕೈ ಸೇರುತ್ತಿದೆ. ಹೌದು, ಇದಕ್ಕೆ ಪುಷ್ಟಿ ಎಂಬಂತೆ ಮಾದಕ ವಸ್ತು ಮಿಶ್ರಿತ ಚಾಕೋಲೆಟ್‌ ಮಾರಾಟ ಜಾಲ ಇದೀಗ ಪತ್ತೆಯಾಗಿದೆ. ಇವರು ಶಾಲಾ-ಕಾಲೇಜು(School-college) ಮಕ್ಕಳನ್ನು ಟಾರ್ಗೆಟ್‌ ಮಾಡಿ ಡ್ರಗ್ಸ್‌ ದಂಧೆ ನಡೆಸುತ್ತಿದ್ದರು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಶಾಲಾ-ಕಾಲೇಜು ಪಕ್ಕದಲ್ಲಿರುವ ಅಂಗಡಿಗಳಲ್ಲಿ ಈ ಚಾಕೋಲೆಟ್‌ಗಳು ಮಾರಾಟವಾಗುತ್ತಿದ್ದವು ಎಂದು ತಿಳಿದುಬಂದಿದೆ. ಮಂಗಳೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, 100 ಕೆಜಿ ಡ್ರಗ್ಸ್‌ ಮಿಶ್ರಿತ ಚಾಕೋಲೆಟ್‌ನನ್ನು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ವೀಕ್ಷಿಸಿ:  ಬಗೆದಷ್ಟು ಬಯಲಾಗ್ತಿದೆ ದುಷ್ಕರ್ಮಿಗಳ ನಿಗೂಢ ಹೆಜ್ಜೆ: ಬೆಂಗಳೂರು ಮಾತ್ರ ಶಂಕಿತ ಉಗ್ರರ ಟಾರ್ಗೆಟ್‌ ಆಗಿತ್ತಾ..?

Related Video