Big3: ವಿಕ್ಟೋರಿಯಾ ಆಸ್ಪತ್ರೆ ಅಂಗಳದಲ್ಲಿ ಕರ್ಮಕಾಂಡ: ಪಾರ್ಕಿಂಗ್ ಫೀಸ್ ಹೆಸರಿನಲ್ಲಿ ಸುಲಿಗೆ
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪಾರ್ಕಿಂಗ್ ಪೀಸ್ ಹೆಸರಿನಲ್ಲಿ ನಿತ್ಯ ಬಡವರ ಸುಲಿಗೆ ನಡೆಯುತ್ತಿದೆ. ಆಸ್ಪತ್ರೆ ಅಂಗಳದಲ್ಲಿ ನಡೆಯುತ್ತಿರುವ ಸುಲಿಗೆಗೆ ನಿತ್ಯ ಚಿಕಿತ್ಸೆಗೆ ಬರುವ ರೋಗಿಗಳು ಬೇಸತ್ತಿದ್ದಾರೆ.
ಬೆಂಗಳೂರಿನ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆಯಾಗಿರೋ ವಿಕ್ಟೋರಿಯಾದ ಪಾರ್ಕಿಂಗ್ ಫೀಸ್ ಕರ್ಮಕಾಂಡ ಬಯಲಾಗಿದೆ. ಇದು ಹೆಸರಿಗೆ ಮಾತ್ರ ಸರ್ಕಾರಿ ಆಸ್ಪತ್ರೆ. ಇಲ್ಲಿಗೆ ಹೆಚ್ಚಾಗಿ ಬರುವವರು ಬಡವರು. ಆದ್ರೆ ಆಸ್ಪತ್ರೆ ಅಂಗಳದಲ್ಲಿ ಹಾಡಹಗಲೇ ನಡೆಯೋ ಸುಲಿಗೆಗೆ ನಿತ್ಯ ಚಿಕಿತ್ಸೆಗೆ ಬರುವ ರೋಗಿಗಳು ಬೇಸತ್ತಿದ್ದಾರೆ. ಸಾಕಪ್ಪ ಸಾಕು ಈ ಆಸ್ಪತ್ರೆ ಸಹವಾಸ ಅಂತಿದ್ದಾರೆ. ಆಸ್ಪತ್ರೆಯ ಅಂಗಳದಲ್ಲಿರುವ ಸರ್ಕಾರಿ ಜಾಗವನ್ನು ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ಸಂಬಂಧಿಕರು ವಾಹನ ನಿಲುಗಡೆ ಸಲುವಾಗಿ ಮೀಸಲಿರಿಸಲಾಗಿದೆ. ಇದು ಸರ್ಕಾರಿ ಜಾಗ ಆಗಿರುವುದರಿಂದ ಕೇವಲ ವಾಹನ ನಿಲುಗಡೆ ಪ್ರದೇಶದ ನಿರ್ವಹಣೆ ಸಲುವಾಗಿ ಕನಿಷ್ಠ ಪ್ರಮಾಣದ ಪಾರ್ಕಿಂಗ್ ಶುಲ್ಕವನ್ನು ವಿಕ್ಟೋರಿಯಾ ಆಡಳಿತ ಮಂಡಳಿ ನಿಗದಿ ಪಡಿಸಿದೆ. ಆದ್ರೆ ಟೆಂಡರ್ ಪಡೆದವರು ಸಾರ್ವಜನಿಕರಿಂದ ಮೂರು ಪಟ್ಟು ಅಧಿಕ ಹಣವನ್ನ ವಸೂಲಿ ಮಾಡುತ್ತಿದ್ದಾರೆ.
Pakistan Economic Crisis : ನಾವು ಭಾರತಕ್ಕೆ ಬರ್ತೀವಿ, ಸೇರಿಸಿಕೊಳ್ಳಿ: ಪಾಕ್ ಜನರ ಬೇಡಿಕೆ