
PSI Recruitment Scam: ಒಂದಲ್ಲ ಎರಡಲ್ಲ, ಅಕ್ರಮಕ್ಕೆ 9 ವಿಧಾನ: ಪರೀಕ್ಷಾ ಮೇಲ್ವಿಚಾರಕರೇ ಭಾಗಿ
*ಪಿಎಸ್‌ಐ ಅಕ್ರಮ ನೇಮಕಾತಿ ನಡೆಯೋದು ಹೇಗೆ?
*ಪರೀಕ್ಷಾರ್ಥಿಗಳಿಗೆ ಬ್ಲೂಟೂತ್ ಬಳಸಲು ಟ್ರೇನಿಂಗ್!
*ಬ್ಲೂಟೂತ್ ಮೂಲಕ ಹೇಗೆ ಸೂಚನೆ ಹೋಗ್ತಿತ್ತು ಗೊತ್ತಾ?
ಬೆಂಗಳೂರು (ಏ. 24): ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ (PSI Recruitment Scam) ತನಿಖೆ ಚುರಕುಗೊಂಡಿದ್ದು ಬಗೆದಷ್ಟು ಬಂಡವಾಳ ಬಯಲಾಗುತ್ತಿದೆ. 9 ರೀತಿಯಲ್ಲಿ ಪಿಎಸ್‌ಐ ಪರೀಕ್ಷೆಯ ಅಕ್ರಮ ಪತ್ತೆಯಾಗಿದ್ದು, ಮೇಲ್ವಿಚಾರಕರೇ ಅಕ್ರಮದಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ. ಉತ್ತರ ಪತ್ರಕೆಗಳನ್ನು ಎಸ್‌ಪಿ ಕಚೇರಿಗೆ ಕಳುಹಿಸುವ ಮುನ್ನವೇ ಅಕ್ರಮ ನಡೆದಿರೋ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: PSI ನೇಮಕಾತಿ ಹಗರಣದ ರೂವಾರಿ ಆರ್ ಡಿ ಪಾಟೀಲ್ ಸಿನಿಮೀಯ ಶೈಲಿಯಲ್ಲಿ ಸಿಐಡಿ ಬಲೆಗೆ!
ಇನ್ನು ತನಿಖೆಯಲ್ಲಿ ಸಿಐಡಿ ಪೊಲೀಸರು ಮಹತ್ವದ ಪ್ರಗತಿ ಸಾಧಿಸಿದ್ದು ಬ್ಲೂಟೂತ್ ಬಳಸಿ ಪರೀಕ್ಷೆಯಲ್ಲಿ ಅಕ್ರಮ ನಡೆಸಲಾಗಿದೆ ಎಂಬ ಸಂಗತಿ ಈಗ ಬೆಳಕಿಗೆ ಬಂದಿದೆ. ಪರೀಕ್ಷೆಯ ಎರಡು ದಿನ ಮುಂಚೆ ಬ್ಲೂಟೂತ್ ಬಗ್ಗೆ ಪರೀಕ್ಷಾರ್ಥಿಗಳಿಗೆ ಟ್ರೇನಿಂಗ್ ಕೂಡ ನೀಡಲಾಗಿದೆ. ಬ್ಲೂಟೂತ್ ಕಿವಿಯಲ್ಲಿ ಹೇಗೆ ಅಳವಡಿಕೆ ಮಾಡಬೇಕು ಎಂದು ತರಬೇತಿ ನೀಡಲಾಗಿದೆ. ಉತ್ತರಗಳನ್ನು ಬ್ಲೂಟೂತ್ ಮೂಲಕ ಅಭ್ಯರ್ಥಿಗಳಿಗೆ ರವಾನೆ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ.