ಬರದ ನಾಡಲ್ಲಿ ಏತ ನೀರಾವರಿಗೆ ಚಾಲನೆ: ಚಿತ್ರದುರ್ಗ ಅನ್ನದಾತರು ಫುಲ್ ಖುಷ್ !

ಬರದನಾಡು ಚಿತ್ರದುರ್ಗಕ್ಕೆ ಈಗ ಜೀವ ಕಳೆ ಬಂದಿದೆ..ಸರ್ಕಾರದ ಏತನೀರಾವರಿ ಯೋಜನೆ ಅನ್ನದಾತರ ಬದುಕನ್ನೇ ಬದಲಿಸಿದೆ..ಭರಮಸಾಗರಿಂದ 5 ಕೆರೆಗಳಿಗೆ ನೀರು ಹರಿಸಲು ಮುಂದಾಗಿದ್ದು ನೂರಾರು ಎಕರೆಗೆ ನೀರು ಸಿಗುತ್ತಿದೆ.
 

First Published Sep 27, 2023, 10:41 AM IST | Last Updated Sep 27, 2023, 10:41 AM IST

ಬರದ ನಾಡು ಎಂಬ ಹಣೆಪ್ಟಟಿಕೊಂಡ ಚಿತ್ರದುರ್ಗಕ್ಕೆ(Chitradurga) ಈಗ ಏತನೀರಾವರಿ ಜೀವಜಲವಾಗಿದೆ. 5 ಕೆರೆಗಳ ತುಂಬಿಸುವ ಯೋಜನೆಗೆ ಚಾಲನೆ ಸಿಕ್ಕಿದ್ದು, ನೀರಿಲ್ಲದೇ ಬದುಕು ಸಾಗಿಸುತ್ತಿದ್ದ ರೈತರ ಮೊಗದಲ್ಲಿ  ಸಂತಸ ಮೂಡಿಸಿದೆ. ಭರಮಸಾಗರ ಏತ ನೀರವಾರಿ ಯೋಜನೆಯಿಂದ (Lift irrigation) 5 ಕೆರೆಗಳಿಗೆ ನೀರು ತುಂಬಲಿದೆ. ಈ ಮೂಲಕ ಕಾತ್ರಾಳ್, ಮುದ್ದಾಪುರ, ಯಳಗೋಡು, ಇಸಾಮುದ್ರ ಕೆರೆಗಳಿಗೆ ನೀರು ಹರಿದು ಬರುತ್ತಿದೆ. ಸತತ ಬರದಿಂದ ಈ ಭಾಗದಲ್ಲಿ ಬೋರ್ ವೆಲ್‌ಗಳು ಬತ್ತಿ ಹೋಗುತ್ತಿವೆ. ಇದೇ ವೇಳೆ ಈ ಏತನೀರಾವರಿ ಯೋಜನೆಗೆ ಚಾಲನೆ ಸಿಕ್ಕಿದ್ದು ಬತ್ತಿಹೋಗಿದ್ದ ಬೋರ್‌ವೆಲ್‌ಗಳಿಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಿದೆ. ಬೆಳೆದ ಬೆಳೆ ಹಾಗೂ ತೋಟಗಳು ಒಣಗುವ ಸ್ಥಿತಿಗೆ ಬಂದಿದ್ದವು. ಆದ್ರೆ ಸಿರಿಗೆರೆಯ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ(Sirigere Shivakumar Shivacharyashri) ಹೋರಾಟದಿಂದ ಈ ಏತನೀರಾವರಿ ಯೋಜನೆಗೆ ಚಾಲನೆ ಸಿಕ್ಕಿದ್ದು, ನಮ್ಮನ್ನು ಸಂಕಷ್ಟದಿಂದ ಪಾಡು ಮಾಡಿದೆ ಎನ್ನುತ್ತಿದ್ದಾರೆ ರೈತರು. ಸಿರಿಗೆರೆಯ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಹೋರಾಟದಿಂದ ರೈತರ ಜೀವನ ನಡೆಯುತ್ತಿದೆ ಎಂದ ಅನ್ನದಾತರು. ಬೆರೆ ಮಠಗಳು ಕೂಡ ಇಂಥ ಕಾರ್ಯಪ್ರವೃತ್ತಿ ಬೆಳೆಸಿಕೊಂಡ್ರೆ ರೈತರಿಗೆ ಅನುಕೂಲವಾಗಲಿದೆ ಅಂತಾರೆ ಹೋರಾಟಗಾರರು.

ಇದನ್ನೂ ವೀಕ್ಷಿಸಿ:  ಕೋಲಾರಮ್ಮ ಕೆರೆಗೆ ಜಿಲ್ಲಾಡಳಿತದಿಂದ ಆಧುನಿಕ ಸ್ಪರ್ಶ: 600 ಎಕರೆ ಕೆರೆಗೆ ಕೋಟಿ ಕೋಟಿ ವೆಚ್ಚದಲ್ಲಿ ಅಭಿವೃದ್ಧಿ